ಜೆಡಿಎಸ್ ಟಿಕೇಟ್ ಬಯಸುವವರು ಸಂಘಟನೆ ಮಾಡಬೇಕಾಗಿದೆ; ಮೀನಳ್ಳಿ ತಾಯಣ್ಣ

0
55

ಸಂಡೂರು:ಜು:23:- ತಾಲ್ಲೂಕಿನಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷ ಸಂಘಟನೆ ಮಾಡದೇ 2ನೇ ಸ್ಥಾನದಲ್ಲಿದೆ. ಪಕ್ಷದ ಟಿಕೇಟ್ ಬಯಸುವವರು ಗ್ರಾಮೀಣ ಭಾಗದಲ್ಲಿ ಬಲವಾದ ಸಂಘಟನೆ ಮಾಡಬೇಕಾಗಿದೆ. 2008, 2018 ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾಗಿ ಮಾಡಿದ ಸಾಧನೆಯನ್ನ ಜನರಿಗೆ ತಿಳಿಸಬೇಕಾಗಿದೆ. ಪ್ರತಿ ಗ್ರಾಮೀಣ ಭಾಗದಲ್ಲಿ ನಿಯೋಜಿತ ಅಭ್ಯರ್ಥಿ ಸೊಮಪ್ಪ ಹಾಗೂ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಸ್ಪರ್ದೆ ಬಯಸುವ ಆಕಾಂಕ್ಷಿಗಳು ಗ್ರಾಮೀಣ ಭಾಗದಲ್ಲಿ ಸಂಚರಿಸಿ ಸಂಘಟನೆ ಮಾಡಬೇಕಾಗಿದೆ.

ಜಿ.ಪಂ.ಯಲ್ಲಿ 3 ಸ್ಥಾನ ತಾ.ಪಂ.ಯಲ್ಲಿ 8 ರಿಂದ 10 ಸ್ಥಾನ ಗೆದ್ದರೆ, ಜೆಡಿಎಸ್ ಪಕ್ಷ ಸಂಡೂರು ವಿದಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾದ್ಯ. ಮುಂದಿನ 2023 ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು 130 ಸೀಟು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಅವರ ವಿಶ್ವಾಸಕ್ಕೆ ನಾವೇಲ್ಲರೂ ಕೈಜೋಡಿಸಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೀನಳ್ಳಿ ತಾಯಣ್ಣನವರು
ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಪೂರ್ವಭಾವಿ ಸಿದ್ದತೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಎನ್. ಸೋಮಪ್ಪ ಮಾತನಾಡಿ ತಾ.ಪಂ. & ಜಿ.ಪಂ. ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದ ಸ್ಪರ್ದಿಸುವುದ ಖಚಿತ. ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಯೆ ಇಲ್ಲ ಎನ್ನುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರ ಮಾತು ಊಹಾ ಪೋಹ ಮತ್ತು ಕಲ್ಪಿತದಿಂದ ಕೂಡಿದೆ. ಸರ್ವೆ ದೃಷ್ಠಿಯಲ್ಲಿ ಸಂಡೂರು ಜೆಡಿಎಸ್ ಪಕ್ಷ ಪ್ರಥಮ ಸ್ಥಾನದಲ್ಲಿ ಮುಂಚುಣಿಯಲ್ಲಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಕಮತೂರು ಮಲ್ಲೇಶ್ ಮಾತನಾಡಿ, ಚುನಾವಣೆಗೆ ಸ್ಪರ್ದೆ ಮಾಡ ಬಯಸುವ ಆಕಾಂಕ್ಷಿಗಳು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಎರೆಡು ಪಕ್ಷದ ನಡುವೆ ಪ್ರಾದೇಶಿಕ ಪಕ್ಷ ಸ್ಪರ್ದೇ ಮಾಡುವುದು ಸುಲಭದ ಮಾತಲ್ಲ. ಕ್ಷೇತ್ರದ ಜನತೆ ಬದಲಾವಣೆ ಬಯಸಿರುವುದು ಖಚಿತ. ಗುರುತರ ಜವಾಬ್ದಾರಿಯ ಹೊತ್ತು ಸ್ಪರ್ದೆ ಮಾಡಬೇಕಾಗಿದೆ.ಎನ್.ಎಮ್.ಡಿ.ಸಿ. ಅಕ್ರಮ ವ್ಯವಹಾರದ ಬಗ್ಗೆ ಹೋರಾಟ ಮಾಡಲು ಜೆ.ಡಿ.ಎಸ್. ಪಕ್ಷ ಯೋಜನೆ ರೂಪುರೇಶ ಸಿದ್ದಪಡಿಸುತ್ತದೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೈಯದ್ ಹುಸೇನ್ ಪೀರಾ,ಕೆ.ಕೆ.ಮೆಹಬೂಬ್ ಬಾಷ, ತಳವಾರು ಅಂಬಣ್ಣ, ಬಂಡ್ರಿ ಮೂಕಪ್ಪ, ಮೋತಲಕುಂಟೆ ತಳವಾರು ತಿಪ್ಪೇಸ್ವಾಮಿ, ಚಿನ್ನಾಪುರಿ, ಅಂಜಿನಪ್ಪ, ಯುಸೂಫ್, ಶಫಿ, ಕುಮಾರಸ್ವಾಮಿ, ಪದ್ಮಣ್ಣ, ಪುನಿತ, ಹೊನ್ನೂರಸ್ವಾಮಿ ಮೆಹಬೂಬ ಬಾಷ ಇ. ಸುಬ್ಬಯ್ಯ, ದುರುಗೇಶ, ವಂಡ್ರಪ್ಪ, ನಿಡುಗುರ್ತಿ ಹನುಮಂತಪ್ಪ, ಎನ್.ಸ್ವಾಮಿ ವಡ್ಡು, ಸೊವೆನಹಳ್ಳಿ ಶಿವು, ಬೊಮ್ಮಲಿಂಗನಹಳ್ಳಿ ಕುಮಾರಸ್ವಾಮಿ,
ನಗರ ಘಟಕದ ಅಧ್ಯಕ್ಷರು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here