ಸ್ವಚ್ಛ ಗ್ರಾಮವಾಗಲು ಎಲ್ಲರೂ ಸಹಕರಿಸಿ; ಪಿಡಿಓ ಗುರುಪ್ರಸಾದ್

0
258

ಸಂಡೂರು: ಫೆ: 24: ಸ್ವಚ್ಛ ಗ್ರಾಮವಾಗಲು ಎಲ್ಲರೂ ಸಹಕರಿಸಿ; ಎಂದು ಕೃಷ್ಣಾನಗರ ಗ್ರಾಮ ಪಂಚಾಯಿತಿ ಪಿ.ಡಿ.ಒ ಗುರುಪ್ರಸಾದ್ ತಿಳಿಸಿದರು
ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಕೆ.ಹೆಚ್.ಪಿ.ಟಿ ಯ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಸಾರ್ವಜನಿಕರು ಕಸ ಕಡ್ಡಿ, ಆಹಾರದ ವ್ಯರ್ಥ ಪದಾರ್ಥಗಳನ್ನು ಚರಂಡಿ, ರಸ್ತೆಗಳಲ್ಲಿ ಹಾಕಬಾರದು, ಇದರಿಂದ ದುಡ್ಡು, ಮಾನವ ಶ್ರಮ ದಿನಗಳು ವ್ಯರ್ಥ, ಆರೋಗ್ಯವಂತ ಗ್ರಾಮ ನಿರ್ಮಾಣ ರೂಪಿಸಲು ಸರ್ವರೂ ಸಹಕರಿಸ ಬೇಕು, ಗ್ರಾಮಗಳಲ್ಲಿ ಶೌಚಾಲಯಗಳಿದ್ದರೂ ಬಳಸುತ್ತಿಲ್ಲ, ಹೊರಗಡೆ ಮಲ ವಿಸರ್ಜನೆಗೆ ಹೋಗುವ ಅಭ್ಯಾಸ ಒಳ್ಳೆಯದಲ್ಲ, ಸ್ವಚ್ಚತಾ ಗ್ರಾಮ ನಮ್ಮ ಗುರಿಯಾಗ ಬೇಕು ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿವಪ್ಪ ಅವರು ಕ್ಷಯರೋಗ ಮುಕ್ತ ಭಾರತ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಪತ್ತೆ ಹಚ್ಚುವ ಕುರಿತು ಮಾಹಿತಿ ನೀಡಿದರು, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಹದಿಹರೆಯದವರ ಅರೋಗ್ಯ ಕುರಿತು ಹಾಗೂ ಅಂಗವಾಡಿ ಮೇಲ್ವಿಚಾರಕಿ ಚೇತನಾ ಗೌಡ ಅವರು ಬಾಲ್ಯ ವಿವಾಹ ತಡೆ, ಅನಿಮಿಯ, ಅಪೌಷ್ಟಿಕತೆ, ಮುಟ್ಟಿನ ಸ್ವಚ್ಚತೆ ಬಗ್ಗೆ ಮಾಹಿತಿ ನೀಡಿದರು,
ಈ ಕಾರ್ಯಕ್ರಮವನ್ನು ಸಹ ಶಿಕ್ಷಕ ಶ್ರೀನಿವಾಸಲು ಶ್ರೀಮತಿ ಸುನಿತಾ ಕುಮಾರಿ ಪ್ರಾರ್ಥನೆ ನೆರವೇರಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರೆಡ್ಡಿಬಾಬು, ಮದರ್ ಸಾಬ್, ಪರಸಪ್ಪ, ಶಾಲೆಯ ಮುಖ್ಯ ಗುರುಗಳಾದ ಸೈಪುಲ್ಲಾ ಖಾದರ್, ಶೈನಾಜ್, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ,ಪ್ರಿಯಾಂಕಾ,ಉಷಾ ಸಿಂಧೆ, ತಾಯಮ್ಮ, ಚಂದ್ರಕಲಾ, ಹುಲಿಗೆಮ್ಮ, ಗಂಗಮ್ಮ, ಸ್ವಸಹಾಯ ಗುಂಪಿನ ಪ್ರತಿನಿಧಿ ಶೈನಾಜ್ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು

LEAVE A REPLY

Please enter your comment!
Please enter your name here