ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ನಿವೃತ್ತ ಸೇನಾಧಿಕಾರಿಗಳ ತಂಡ ಭೇಟಿ

0
67

ಮಡಿಕೇರಿ ಮಾ.15 :-ಲೆಪ್ಟಿನೆಂಟ್ ಜನರಲ್ ಬುಟ್ಟಿಯಂಡ.ಕೆ.ಬೋಪಣ್ಣ ನೇತೃತ್ವದಲ್ಲಿ ನಿವೃತ್ತ 9 ಹಿರಿಯ ಸೇನಾಧಿಕಾರಿಗಳ ತಂಡ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಬುಧವಾರ ಭೇಟಿ ನೀಡಿ, ವೀಕ್ಷಿಸಿದರು.
34 ನ್ಯಾಷನಲ್ ಡಿಫೆನ್ಸ್ ಕಾಲೇಜಿಗೆ ಸೇರಿದ ತಂಡವು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಕೆ.ಬೋಪಣ್ಣ, ಪಿವಿಎಸ್ ಎಂ, ಎವಿಎಸ್‍ಎಂ, ವಿಎಸ್‍ಎಂ ನೇತೃತ್ವದಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪ ನಮನ ಸಲ್ಲಿಸಿದರು.
ಈ ತಂಡದಲ್ಲಿ ನಿವೃತ್ತರಾದ ಮೇಜರ್ ಜನರಲ್ ಸಿ.ಎಸ್.ಮೇಜರ್ ಜನರಲ್ ಮೋಹನ್ ದಾಸ್, ಮೇಜರ್ ಜನರಲ್ ಎಂ.ಎಂ.ಸಿಂಗ್, ಮೇಜರ್ ಜನರಲ್ ಅಹಲುವಾಲಿಯ, ಮೇಜರ್ ಜನರಲ್ ಕರ್ಲಾ, ಏರ್ ಕಮೋಡರ್ ಪ್ರವೀಣ್ ಭದ್ವಾರ್, ಬ್ರಿಗೇಡಿಯರ್ ಸುರೀಂದರ್ ಸಿಂಗ್, ಬ್ರಿಗೇಡಿಯರ್ ಡಿ.ಕೆ.ಖನ್ನಾ, ಏರ್ ಮಾರ್ಷಲ್ ದಿ.ಬಿಂದ್ರಾ ಅವರ ಪತ್ನಿ ಪಮ್ಮಿ ಬಿಂದ್ರಾ, ಗುಲ್ ಕರ್ಲಾ ಇದ್ದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೆÇೀರಂನ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ ಅವರು ನಿಯೋಗಕ್ಕೆ ತಿಮ್ಮಯ್ಯ ಸ್ಮಾರಕ ಭವನದ ಬಗ್ಗೆ ಮಾಹಿತಿ ನೀಡಿದರು. ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ಸುಬೇದಾರ್ ತಿಮ್ಮಯ್ಯ ಹಾಜರಿದ್ದರು.

ತಿಮ್ಮಯ್ಯ ಸ್ಮಾರಕ ಭವನ ಈ ದೇಶದ ಅಮೂಲ್ಯ ಆಸ್ತಿಯಾಗಿದ್ದು, ವೀರಸೇನಾನಿ ತಿಮ್ಮಯ್ಯ ಸೇನಾ ಸಾಹಸ ಗಾಥೆಯೊಂದಿಗೆ ಭಾರತೀಯ ಸೇನಾ ಪಡೆಯ ಶೌರ್ಯದ ಘಟನೆಗಳನ್ನು ಭವನವು ಬಿಂಬಿಸಿದೆ. ಪ್ರತೀಯೋರ್ವ ಭಾರತೀಯನೂ ಇಲ್ಲಿಗೆ ಭೇಟಿ ನೀಡಿ ವೀಕ್ಷಿಸಬೇಕೆಂದು ಹಿರಿಯ ಸೇನಾನಿಗಳು ಸಲಹೆ ಮಾಡಿದರು.

ಸ್ಮಾರಕ ಭವನವು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಅಮೂಲ್ಯ ಸಂಗ್ರಹಗಳು ಹಾಳಾಗದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತಷ್ಟು ರೀತಿಯಲ್ಲಿ ನೆರವು ನೀಡಬೇಕೆಂದು ಲೆಫ್ಟಿನೆಂಟ್ ಜನರಲ್ ಬುಟ್ಟಿಯಂಡ ಕೆ.ಬೋಪಣ್ಣ ಸಲಹೆ ನೀಡಿದರು.

ಜನರಲ್ ತಿಮ್ಮಯ್ಯ ಅವರು ಸೇನಾ ಕರ್ತವ್ಯ ನಿರ್ವಹಿಸಿದ್ದ ಕುಂಮಾವ್ ರೆಜಿಮೆಂಟ್‍ಗೆ ಸೇರಿದ್ದ ಬ್ರಿಗೇಡಿಯರ್ ಡಿ.ಕೆ. ಖನ್ನಾ ಪ್ರತಿಕ್ರಿಯಿಸಿ, ಕುಂಮಾವ್ ರೆಜಿಮೆಂಟ್‍ನ ಶ್ರೇಷ್ಟ ಸೇನಾನಿಯಾಗಿದ್ದ ತಿಮ್ಮಯ್ಯ ಅವರ ಹೆಸರಿನ ಸ್ಮಾರಕ ಭವನ ವೀಕ್ಷಿಸಿದ್ದು ಸಂತೋಷ ತಂದಿದೆ ಎಂದರು.
ನಿವೃತ್ತ ಮೇಜರ್ ಜನರಲ್ ಪಿ.ಮೋಹನ್ ದಾಸ್ ಪ್ರತಿಕ್ರಿಯಿಸಿ, ಅನೇಕ ಸವಾಲುಗಳ ನಡುವೆ ತಿಮ್ಮಯ್ಯ ಹೆಸರಿನ ಸ್ಮಾರಕ ಭವನವನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

LEAVE A REPLY

Please enter your comment!
Please enter your name here