ಸಾರ್ವಜನಿಕರ ಶೌಚಾಲಯದಲ್ಲಿ ದುಪ್ಪಟ್ಟು ಹಣ ವಸೂಲಿ, ಹಣ ಕೊಡಲಾಗದೆ ಬೈಲು ಜಾಗದಲ್ಲಿ ಮೂತ್ರ ವಿಸರ್ಜನೆ.

0
106

ಬಳ್ಳಾರಿ:ಮಾ:15:- ನಗರದ ಕೇಂದ್ರೀಯ ಮತ್ತು ನಗರ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯದಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಆದೇಶದ ಪ್ರಕಾರ ಶೌಚಾಲಯಕ್ಕೆ ತೆರಳಿದರೆ 3 ರೂಪಾಯಿ ಮೂತ್ರ ವಿಸರ್ಜನೆ ಉಚಿತವೆಂದು ಆದೇಶದಲ್ಲಿದೆ. ಆದರೆ ಇದ್ಯಾವುದು ಬಳ್ಳಾರಿ ನಗರದಲ್ಲಿ ಕಂಡು ಬರುತ್ತಿಲ್ಲ.
ಸರ್ಕಾರಿ ಆಸ್ಪತ್ರೆ, ಕೇಂದ್ರೀಯ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕಾದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಶೌಚಾಲಯ ಹಾಗೂ ಮೂತ್ರಲಯದಿಂದ ದೂರ ಉಳಿಯುತ್ತಿದ್ದಾರೆ.

ಕಾರಣ ಇಷ್ಟೇ, ಶೌಚಾಲಯಕ್ಕೆ ತೆರಳಿದರೆ ಸುಮಾರು 10 ರಿಂದ 15 ರೂಪಾಯಿಯನ್ನು ಶೌಚಾಲಯವನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ವಸೂಲಿ ಮಾಡುತ್ತಾರೆ. ಇನ್ನು ಮೂತ್ರ ವಿಸರ್ಜನೆಗೆ ತೆರಳಿದವರಿಗೆ ಸುಮಾರು 3 ರಿಂದ 5 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಸೌಚಾಲಯಗಳನ್ನ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನಿಲ್ದಾಣದ ಬೈಲು ಜಾಗದಲ್ಲಿ ಮೂತ್ರ ವಿಸರ್ಜನೆ;
ನಗರದ ಕೇಂದ್ರೀಯ ಮತ್ತು ನಗರ ಬಸ್ ನಿಲ್ದಾಣದ ಶೌಚಾಲಯದಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆ ಪ್ರಯಾಣಿಕರು ನಿಲ್ದಾಣದ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮೂತ್ರ ವಿಸರ್ಜನೆ ಉಚಿತವಿದ್ದರೂ ಹಣ ಕೇಳುತ್ತಿರುವ ಕಾರಣ, ಸಾರ್ವಜನಿಕರು ನಿಲ್ದಾಣದ ಬಯಲು ಜಾಗದಲ್ಲಿಯೇ ಬಯಲು ಶೌಚ ಮಾಡುತ್ತಿದ್ದು ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪ್ರಯಾಣಿಕರಿಗೆ ದುರ್ವಾಸನೆ ಬೀರುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

■ನಾವು ಯಾವಾಗಲೂ ಬಳ್ಳಾರಿಗೆ ಬಂದಾಗ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜನೆ ಮಾಡಿದರೆ 3 ರಿಂದ 5 ರೂಪಾಯಿ ಹಾಗೂ ಶೌಚಾಲಯಕ್ಕೆ ತೆರಳಿದರೆ 10 ರಿಂದ 15 ರೂಪಾಯಿ ಕೇಳುತ್ತಾರೆ ನಾವು ಏನು ಮಾಡೋದು ಸ್ವಾಮಿ ಅದಕ್ಕೆ ನಾವು ಬಸ್ ಸ್ಟ್ಯಾಂಡ್ ನಲ್ಲಿ ಇರುವ ಬಯಲು ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
–ಪ್ರಯಾಣಿಕರು.

■ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಸಹ್ಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ನಿಲ್ದಾಣದ ಯಾವುದೇ ಜಾಗದಲ್ಲಿ ಕೂತರು ದುರ್ವಾಸನೆ ಬರುತ್ತಿದೆ. ಎಲ್ಲಿ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಮೂತ್ರ ವಿಸರ್ಜನೆ ನಿಲ್ದಾಣದಲ್ಲಿ ಶೌಚಾಲಯಗಳು ಇದ್ದು ಇಲ್ಲದಂತಾಗಿದೆ. ಇಲ್ಲಿ ಯಾಕೆ ಮೂತ್ರ ವಿಸರ್ಜನೆ ಮಾಡುತ್ತೀರಿ ಎಂದು ಪ್ರಯಾಣಿಕರಿಗೆ ಪ್ರಶ್ನಿಸಿದರೆ ಮೂತ್ರ ವಿಸರ್ಜನೆ ಮಾಡಲು ಶೌಚಾಲಯಕ್ಕೆ ಹೋದರೆ ಮೂರರಿಂದ ಐದು ರೂಪಾಯಿ ಕೇಳುತ್ತಾರೆ ಅದಕ್ಕೆ ನಾವು ಇಲ್ಲೇ ಮಾಡುತ್ತೇವೆ.ಎಂದು ಪ್ರಯಾಣಿಕರು ಹೇಳುತ್ತಾರೆ.ಆದರೆ ನಗರ ಬಸ್ ನಿಲ್ದಾಣದ ವ್ಯವಸ್ಥಾಪಕರು ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪ್ರಶ್ನಿಸದೆ ಹಾಗೆ ಕುಳಿತುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅವ್ಯವಸ್ಥೆಯನ್ನು ಸರಿಪಡಿಸಿ. ಸುಂದರ ನಿಲ್ದಾಣವನ್ನಾಗಿ ಮಾರ್ಪಡಿಸಿ.
–ಪ್ರಜ್ಞಾವಂತ ನಾಗರೀಕ

LEAVE A REPLY

Please enter your comment!
Please enter your name here