ಡಿಮ್ಹಾನ್ಸ್ ಹಗಲು ಪಾಲನಾ ಕೇಂದ್ರದ ಫಲಾನುಭವಿಗಳಿಗೆ ಕೋವಿಡ್ ಲಸಿಕೆ-ನ್ಯಾಯಾಧೀಶ ಚಿಣ್ಣನ್ನವರ ಚಾಲನೆ

0
93

ಧಾರವಾಡ. ಜೂ. 14: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ಸಬಲೀಕರಣ ಇಲಾಖೆ ಮತ್ತು ಧಾರವಾಡ ಆರೂಡ ಸಂಸ್ಥೆ ಸಹಯೋಗದೊಂದಿಗೆ ಡಿಮ್ಹಾನ್ಸ್ ಸಂಸ್ಥೆಯ ಹಗಲು ಪಾಲನಾ ಕೇಂದ್ರದ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಜೂನ್ 14 ರವಿವಾರದಂದು ನಡೆಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಆರ್.ಎಸ್.ಚಿಣ್ಣನ್ನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.

ವಿಕಲಚೇತನರು ಭಯ ಪಟ್ಟುಕೊಳ್ಳದೇ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಇತರ ವಿಕಲಚೇನರಿಗೂ ಕೂಡ ,ಕೊವಿಡ್ ಲಸಿಕೆ ಪಡೆಯುವಂತೆ ಅರಿವನ್ನು ಮೂಡಿಸಲು ಮುಂದಾಗಬೇಕು. ವಿಕಲಚೇತನರ ಆರೈಕೆದಾರರು ಕೂಡ ಕೊವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಮರೆಯಬಾರದು. ಇದರ ಜೊತೆಗೆ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.

ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ ಅವರು ಮಾತನಾಡಿ ಹಗಲು ಪಾಲನಾ ಕೇಂದ್ರದ ಫಲಾನುಭವಿಗಳು ಹಾಗೂ ಅವರ ಆರೈಕೆದಾರರು ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡು ಯಾವುದೇ ಭಯ ಮತ್ತು ಆತಂಕಕ್ಕೆ ಒಳಗಾಗಬಾರದೆಂದು ಫಲಾನುಭವಿಗಳಿಗೆ ಧೈರ್ಯವನ್ನು ತುಂಬಿದರು. ಹಗಲು ಪಾಲನಾ ಕೇಂದ್ರವನ್ನು ಅಭಿವೃದ್ದಿಪಡಿಸುತ್ತಿದ್ದು, ಈ ಕೇಂದ್ರವನ್ನು ಸಂಸ್ಥೆಯಲ್ಲಿ ಹೊಸದಾಗಿ ಕಟ್ಟಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದೆಂದು ತಿಳಿಸಿದರು.

ಹಗಲು ಪಾಲನಾ ಕೇಂದ್ರದ ಸೌಲಭ್ಯಗಳನ್ನು ಸರಿಯಾಗಿ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಂತಹ ಫಲಾನುಭವಿಗಳಿಗೆ ಅವರ ಆರೈಕೆದಾರರು ಸರಿಯಾಗಿ ಪೆÇ್ರೀತ್ಸಾಹ ಮತ್ತು ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಡಿಮ್ಹಾನ್ ಸಂಸ್ಥೆಯನ್ನು ಅಭಿವೃದ್ದಿಪಡಿಸಲಿಕ್ಕೆ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದರ ಬಗ್ಗೆ ತಿಳಿಸಿದರು. ಕೋವಿಡ್ ಮುಂಜಾಗೃತೆ ಕುರಿತು ಡಿಮ್ಹಾನ್ಸ್ ಸಂಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮಗಳನ್ನು ಮಾಡಿರುವುದರ ಬಗ್ಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಕಳಸೂರುಮಠ ಅವರು ಮಾತನಾಡಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡ ನಂತರ ಕೆಲವರಲ್ಲಿ ಅಲ್ಪತೆರನಾದ ಜ್ವರ ಅಥವಾ ಮೈಕೈ ನೋವು ಕಾಣಿಸಿಕೊಂಡರೆ ವೈದ್ಯರು ನೀಡಿದ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ಭಯಪಡಬಾರದು ಎಂದು ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ತನುಜಾ, ಪಿ.ಎಲ್.ವಿ ಸದಸ್ಯ ನಾಗರಾಜ ಹೂಗಾರ, ಅರೆವೈದ್ಯಕೀಯ ಸಿಬ್ಬಂದಿಗಳಾದ ಪಿಂಕಿ ಮಾರ್ಗರೇಟ್, ಶೋಭಾ ಗರ್ಜೂರ, ಶಂಬುಲಿಂಗ ಪೂಜಾರ ಉಪಸ್ಥಿತರಿದ್ದರು.

ಪಿ.ಎಲ್.ವಿ ಸದಸ್ಯ ಅಶೋಕ ಕೋರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಗಲು ಪಾಲನಾ ಕೇಂದ್ರದ ಸಮಾಜಕಾರ್ಯಕರ್ತರಾದ ಶ್ವೇತಾ ಮಣ್ಣೂರುಮಠ ವಂದಿಸಿದರು.

LEAVE A REPLY

Please enter your comment!
Please enter your name here