ಪ್ರತಿಯೊಂದು ಸಂಸ್ಕøತಿಗೆ ಅದರದೆ ಆದ ಪ್ರಾಮುಖ್ಯತೆ ಇದೆ

0
67

ಮಡಿಕೇರಿ.ಫೆ.23 :-ಪ್ರತಿಯೊಂದು ಸಂಸ್ಕøತಿಗೂ ಅದರದೆ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಸ್ತುತ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕøತಿಗಳಿಗೆ ಯುವ ಜನತೆ ಮಾರು ಹೋಗುತ್ತಿದ್ದಾರೆ. ಆದುದರಿಂದ ಯುವಜನರಿಗೆ ಸಂಸ್ಕøತಿ ಅರಿವಿನ ಅವಶ್ಯಕತೆ ಹೆಚ್ಚಾಗಿದ್ದು ಇಂತಹ ತರಬೇತಿಗಳು ಅವರಿಗೆ ಸಹಾಯಕಾರಿಯಾಗುತ್ತದೆ ಎಂದು ಅಂಬೆಕಲ್ಲು ಸುಶೀಲ ಕುಶಾಲಪ್ಪ ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 7 ದಿನಗಳ ಕಾಲ ನಡೆಯುವ ಅರೆಭಾಷೆ ಸಂಸ್ಕøತಿ ತರಬೇತಿ ಶಿಬಿರವನ್ನು ಮಂಗಳವಾರ ಗುಡ್ಡೆಮನೆ ಅಪ್ಪಯ್ಯ ರಸ್ತೆಯಲ್ಲಿರುವ ಕೊಡಗು ಗೌಡ ಮಹಿಳಾ ಒಕ್ಕೂಟದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರಲ್ಲಿ ಸಂಸ್ಕøತಿಯ ಆಚಾರ ವಿಚಾರಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಲಿದೆ ಅವರಿಗೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ನುಡಿದರು.
ಆಧುನಿಕತೆಯೊಂದಿಗೆ ಸಂಸ್ಕøತಿಯ ಪಾಲನೆಯು ಬಹು ಮುಖ್ಯವಾಗಿದೆ ಹಾಗೂ ಪ್ರತಿಯೊಂದು ಸಂಸ್ಕøತಿಯೂ ಅದರದೇ ಆದ ಮಹತ್ವವನ್ನು ಹೊಂದಿದ್ದು, ಅವುಗಳಿಗೆ ಪುರಾಣದ ಅರ್ಥವಿರುತ್ತದೆ. ಇವುಗಳನ್ನು ಅರಿತುಕೊಂಡು ಹೋದಲ್ಲಿ ಮಾತ್ರ ನಮ್ಮ ಸಂಸ್ಕøತಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಪಾಶ್ಚಾತ್ಯ ಸಂಸ್ಕøತಿಗಳು ನಮ್ಮ ಸಂಸ್ಕøತಿಯೊಂದಿಗೆ ವಿಲೀನವಾಗುವ ಅವಕಾಶಗಳು ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಎಲ್ಲಾ ಪದ್ದತಿಗಳಿಗೂ ವೈಜ್ಞಾನಿಕ ಹಿನ್ನಲೆ ಇರುತ್ತದೆ. ಆದರೆ ಅವುಗಳ ಅರಿವು ಈಗಿನ ಜನತೆಯಲ್ಲಿ ಇಲ್ಲ. ಅವರಿಗೆ ಸಂಸ್ಕøತಿಯ ಶಿಕ್ಷಣ ಆಗಬೇಕಾಗಿದೆ ಎಂದು ಆವರು ನುಡಿದರು.
ಕಾರ್ಯಕ್ರಮದಲ್ಲಿ ತಂಗಮ್ಮ ಸೋಮಣ್ಣ, ಲಲಿತ ಅಯ್ಯಣ್ಣ, ಇತರರು ಇದ್ದರು. ಆಶಾ ಕಣ್ಣೆರಾ ಸ್ವಾಗತಿಸಿದರು. ಪ್ರಿಯಾ ವಸಂತ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here