ವಿಷಯ ನಿರ್ವಾಹಕರಿಗೆ ಎನ್.ಪಿ.ಎಸ್ ಕುರಿತು ಕಾರ್ಯಾಗಾರ

0
104

ಮಡಿಕೇರಿ ಸೆ.17 :-ನಗರದ ದೇವರಾಜು ಅರಸು ಭವನದಲ್ಲಿ ಖಜಾನೆ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಯ ವಿಷಯ ನಿರ್ವಾಹಕರಿಗೆ ಎನ್‍ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ತರಬೇತಿ ಕಾರ್ಯಾಗಾರವು ಶುಕ್ರವಾರ ನಡೆಯಿತು.
ಎನ್‍ಎಸ್‍ಡಿಎಲ್‍ನ ಸೆಂಟ್ರಲ್ ರಿಕಾರ್ಡ್ ಕಿಪಿಂಗ್ ಎಜೆನ್ಸಿಯ ಮತ್ತು ಬೆಂಗಳೂರು ಎನ್‍ಪಿಎಸ್ ಸೆಲ್‍ನ ಜಂಟಿ ನಿರ್ದೇಶಕರು ಎನ್‍ಪಿಎಸ್ ಗೆ ಸಂಬಂಧಿದಂತೆ ಗೂಗಲ್ ಮಿಟ್ ಮೂಲಕ ಮಾಹಿತಿ ನೀಡಿದರು.
ರಾಷ್ಟ್ರೀಯ ಪಿಂಚಣಿ ಯೋಜನೆಯ ಸಂಕ್ಷಿಪ್ತ ವಿವರ, ಪಿಎಫ್‍ಆರ್‍ಡಿಎ, ಎನ್‍ಎಸ್‍ಡಿಎಲ್, ಸಿಆರ್‍ಎ ಅವರ ಪಾತ್ರಗಳ ವಿವರ, ಖಜಾನೆಗಳಲ್ಲಿ ಎಸ್‍ಸಿಎಫ್ ರದ್ದು ಆಗಲು ಕಾರಣಗಳು, ಖಜಾನಾಧಿಕಾರಿಗಳು ಸಿಆರ್‍ಎ ಲಾಗಿನ್‍ಗಳನ್ನು ಉಪಯೋಗಿಸಿ ಕೈಗೊಳ್ಳಬೇಕಾದ ಪ್ರಕ್ರಿಯೆ, ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂತೆಗೆದುಕೊಳ್ಳುವ ಪಕ್ರಿಯೆ ಎಸ್ 2, ಎಸ್ 7 ಪಡೆದು ನೌಕರರ ವಿವರಗಳನ್ನು ಸಿಆರ್‍ಎ ಯಲ್ಲಿ ಮಾರ್ಪಾಡು/ ನವೀಕರಿಸುವ ಪ್ರಕ್ರಿಯೆ. ಇಆರ್‍ಎಂ ಪ್ರಕ್ರಿಯೆ ಎಸ್‍ಒಟಿ ಜನರೇಟ್ ಮಾಡುವಾಗ ಉಂಟಾಗುವ ತಪ್ಪ್ಪುಗಳನ್ನು ಸರಿಪಡಿಸಲು ಎಸ್‍ಐ ಪ್ಲೊ ಚಾರ್ಟ್ ನೀಡುವ ಬಗ್ಗೆ, ನೌಕರರಿಗೆ ಇ-ಪ್ರಾನ್ ಡೌನ್ ಲೋಡ್ ಮಾಡಿಕೊಡುವುದು, ಪಿಂಚಣಿದಾರರ ನಿಧನ ನಂತರದ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.
ಖಜಾನೆ ಇಲಾಖೆಯ ಉಪ ನಿರ್ದೇಶಕರಾದ ಪಿ.ಪದ್ಮಜಾ ಮತ್ತು ಲೆಕ್ಕಾಧಿಕಾರಿ ಶ್ಯಾಮ ಸುಂದರ ಅವರು ಇಲಾಖಾ ವಿಷಯ ನಿರ್ವಾಹಕರಿಗೆ ಎನ್‍ಪಿಎಸ್ ಕುರಿತಂತೆ ಅನೇಕ ಮಾಹಿತಿ ನೀಡಿದರು.
ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಸುಜಾತಾ, ಖಜಾನೆ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಬಾಲಕೃಷ್ಣ, ವಿವಿಧ ಇಲಾಖೆಯ ವಿಷಯ ನಿರ್ವಾಹಕರು ಇದ್ದರು.

LEAVE A REPLY

Please enter your comment!
Please enter your name here