ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸಿ ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

0
368

ಸಂಡೂರು: ಮಾ:16: ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸಿ : ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಸಲಹೆ, ನೀಡಿದರು
ತಾಲೂಕಿನ ಹೊಸದರೋಜಿ ಗ್ರಾಮದ ನಾಲ್ಕನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಲಸಿಕೆ ದಿನ” ಅಥವಾ “ರಾಷ್ಟ್ರೀಯ ರೋಗ ನಿರೋಧಕ ದಿನಾಚರಣೆ” ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು, ಲಸಿಕೆಯ ಮಹತ್ವ ದೊಡ್ಡದಿದೆ, ಮಕ್ಕಳಿಗೆ ಹಲವಾರು ಮಾರಕ ರೋಗಗಳಿಂದ ರಕ್ಷಣೆ ಪಡೆಯಲು ಲಸಿಕೆಯು ಅತ್ಯಂತ ಪ್ರಮುಖವಾಗಿದ್ದು, ಸರ್ಕಾರ ಒಟ್ಟು ಹನ್ನೆರಡು ಮಾರಕ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದೆ, ನಿಗದಿತ ವೇಳಾಪಟ್ಟಿ ಪ್ರಕಾರ ಹುಟ್ಟಿನಿಂದ ಹದಿನಾರು ವರ್ಷದ ವರೆಗೂ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಿದಲ್ಲಿ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಸಂಪೂರ್ಣ ಲಸಿಕೆ ಪಡೆಯುವುದರಿಂದ ದೇಹದಲ್ಲಿ ಮಾರಕ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಹೊಸ ಹೊಸ ಲಸಿಕೆಗಳು ಸೇರಿ ಒಟ್ಟು ಹನ್ನೆರಡು ಲಸಿಕೆಗಳಾದ ಬಿ.ಸಿ.ಜಿ, ಹೆಪಟೈಟಿಸ್ ಬಿ, ಪೋಲಿಯೊ, ಡಿಪ್ತೀರಿಯಾ, ಪರ್ಟೂಸಿಸ್, ಟೆಟನಸ್, ಹಿಬ್, ನಿಮೋಕಾಕಲ್ ಕಾಂಜುಗೆಟ್, ರೋಟಾ, ಮೀಜಲ್ಸ್, ರುಬೆಲ್ಲಾ, ಜಪಾನೀಸ್ ಎನ್ ಸೆಪಿಲೈಟಿಸ್ ಒಟ್ಟು ಹನ್ನೆರಡು ಲಸಿಕೆಗಳನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ಲಸಿಕೆ ಕೊಡಿಸಬೇಕು ಎಂದು ಸಲಹೆ ನೀಡಿದರು,
ಲಸಿಕೆಗಳೊಂದಿಗೆ ಪೂರಕವಾಗಿ ಇರಳು ಕುರುಡು ನಿವಾರಣೆಗೆ ವಿಟಾವಿನ್ ಎ ದ್ರಾವಣವನ್ನು ಆರು ತಿಂಗಳ ಅಂತರಗಳಲ್ಲಿ ಐದು ವರ್ಷದೊಳಗೆ ಒಟ್ಟು ಒಂಬತ್ತು ಡೋಸ್ ಗಳನ್ನು ನೀಡಲಾಗುತ್ತದೆ ಅದನ್ನು ಸಹ ತಪ್ಪದೇ ಕೊಡಿಸ ಬೇಕು,ತಾಯಂದಿರು ಶಿಶುಗಳಿಗೆ ಲಸಿಕೆ ಕೊಡುವುದರೊಂದಿಗೆ ಎದೆ ಹಾಲನ್ನು ಎರಡು ವರ್ಷದ ವರೆಗೂ ತಪ್ಪದೇ ಕುಡಿಸಬೇಕು,ಹಾಗೂ ಆರು ತಿಂಗಳ ನಂತರ ಪೂರಕ ಆಹಾರವನ್ನು ಕೊಡಿಸಬೇಕು, ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುವುದು ಎಂದು ತಿಳಿಸಿ ಪೌಷ್ಠಿಕ ಆಹಾರ ತಯಾರಿಸುವ ಕುರಿತು ಕರಪತ್ರಗಳನ್ನು ವಿತರಣೆ ಮಾಡಿದರು,

ಈ ಸಂದರ್ಭದಲ್ಲಿ ಸ್ತ್ರೀಶಕ್ತಿ ಗುಂಪಿನ ಪ್ರತಿನಿಧಿ ಲಲಿತಾ, ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ,ಕಲಾವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪಿ.ಹೆಚ್.ಸಿ.ಓ ಸತ್ಯವ್ವ, ಆಶಾ ಕಾರ್ಯಕರ್ತೆ ಶ್ರೀದೇವಿ, ಮಕ್ಕಳ ತಾಯಂದಿರಾದ ಲಕ್ಷ್ಮಿ,ಶಿಲ್ಪಾ , ಶ್ರಾವಣಿ, ಆಫ್ರೀನಾ,ನಗೀನಾ, ಫೌಜಿಯಾ,ಶಶಿಕಲಾ,ಮಂಜುಳಾ, ರಾಧ, ಪಾರ್ವತಿ, ವಿರುಪಮ್ಮ, ಮತ್ತು ಮಕ್ಕಳು, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here