ತಾಲ್ಲೂಕಿನ ವಿವಿಧ ಸರಕಾರಿ ಕಛೇರಿ ಆರಂಭ ಮಾಡಲು ಒತ್ತಾಯ

0
34

ಕೊಟ್ಟೂರು: ತಾಲ್ಲೂಕು ಘೋಷಣೆಯಾಗಿ ಆರು ವರ್ಷಗಳು ಕಳೆದಿದ್ದು ಇದುವರೆಗೂ ಕೆಲವು ತಾಲ್ಲೂಕು ಮಟ್ಟದ ಕಛೇರಿಗಳನ್ನು ಆರಂಭಿಸುವಂತೆ ಸಿಪಿಐ(ಎಂಎಲ್) ಗುರುವಾರ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿದ ಮಾತನಾಡಿದ ಸಿಪಿಐ(ಎಂಎಲ್) ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನರವರು ಕೊಟ್ಟೂರು ತಾಲ್ಲೂಕಿಗೆ ಇದುವರೆಗೂ ಕೋರ್ಟ್, ಉಪನೋಂದಣಿ ಕಛೇರಿ, ಬಿ.ಇ.ಓ. ಕಛೇರಿ, ಸಿಡಿಪಿಓ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಸಹಕಾರಿ ಇಲಾS, ಆಡಿಟ್ ಇಲಾಖೆ ಇನ್ನುಳಿದ ತಾಲ್ಲೂಕು ಮಟ್ಟದ ಕಛೇರಿಗಳನ್ನು ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿದರು.

ಅಲ್ಲದೇ ಪಟ್ಟಣದ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ವಿಪರೀತವಿದ್ದು, ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು. ೬-೮ ಸಾವಿರ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಊಟ ಸಿಗದೇ ಬಳಲುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಘೋಷಣೆ ಮಾಡಬೇಕು. ತಾಲ್ಲೂಕಿಗೆ ಇದುವರೆಗೂ ಪದವಿ ಕಾಲೇಜ್ ಇಲ್ಲದೇ ಇರುವುದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ಇದೆ. ಕೊಟ್ಟೂರಿನ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆ ಭ್ರಷ್ಟಾಚಾರದ ಆಗರಗಳಾಗಿವೆ. ಸಾರ್ವಜನಿಕ ಕೆಲಸ ಮಾಡಲು ಲಂಚ ಮಾಮೂಲಿ ಆಗಿರುತ್ತದೆ. ಗ್ರಾಮ ಪಂಚಾಯಿತಿಗಳ ಭ್ರಷ್ಟ ಆಡಳಿತ ಕೊನೆಯಾಗಬೇಕು. ಮೈಕ್ರೋ ಫೈನಾನ್ಸ್‌ಗಳು ಜನರಿಗೆ ಸಾಲ ನೀಡಿ ವಸೂಲಾತಿ ಮಾಡಲು ಕಿರುಕುಳ ನೀಡುತ್ತಿವೆ. ತಾಲ್ಲೂಕಿನ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವುದು, ಕೊಟ್ಟೂರು ತಾಲ್ಲೂಕಿನಲ್ಲಿ ಒಸಿ ಮತ್ತು ಜೂಜಾಟ, ಇಸ್ಪೇಟ್, ಅಕ್ರಮ ಮರಳು ಸಾಗಾಣಿಕೆ, ಅನಧಿಕೃತ ಮಧ್ಯಮಾರಾಟ ಇವೆಲ್ಲವೂ ನಡೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಮತ್ತು ತುರ್ತು ನಿಗಾ ನುರಿತ ವೈದ್ಯರನ್ನು ನೇಮಿಸಲು ಇನ್ನುಳಿದಂತೆ ಸುಮಾರು ೧೨ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಗುಡದಯ್ಯ, ರಾಮನಗೌಡ ಬೋರನಹಳ್ಳಿ, ಟಿ.ಅಜ್ಜಪ್ಪ, ಕೂಡ್ಲಿಗಿ ಪರುಸಪ್ಪ, ಕರಿಬಸಯ್ಯ ಸ್ವಾಮಿ, ಡಿ.ಎಸ್.ಎಸ್. ಮುಖಂಡ ಚಂದ್ರಶೇಖರ್, ನೂರ್ ಮಹಮದ್, ಅಂಜಿನಮ್ಮ, ಸಿದ್ದಮ್ಮ, ಗುಡಿಯಾರ ಚಿಕ್ಕಪ್ಪ, ಕೆರೆಗೋಣೆಪ್ಪರ ಕೆಂಚಪ್ಪ, ಆಟೋ ಬಸವರಾಜ, ಉಜ್ಜಿನಿ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here