ಸಹಕಾರ ಮನೋಭಾವದಿಂದ ಕೆಲಸ ಮಾಡಿ; ತುಕರಾಮ್

0
86

ಸಂಡೂರು:26:-ನಮ್ಮ ಬುದ್ಧಿವಂತಿಕೆ ಮತ್ತು ಸೃಜನ ಶೀಲತೆಯಿಂದ ಶ್ರೀಮಂತಿಕೆ ಮತ್ತು ಸಂಪತ್ತುಗಳಿರಬೇಕೇ ಹೊರತು ಮತ್ತೊಬ್ಬರನ್ನು ತುಳಿದು ಗಳಿಸಬಾರದು ಎಂದು ಶಾಸಕ ಹಾಗೂ ಸಿ ಎಲ್ ಪಿ ಕಾರ್ಯದರ್ಶಿ ಈ. ತುಕರಾಮ್ ಹೇಳಿದರು.
ಪಟ್ಟಣದ ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಾಧ್ಯಂತ 585 ಕಿಮೀ ರಸ್ತೆಯ ಪೈಕಿ ಈಗಾಗಲೇ 550 ಕಿಮೀ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಗಣಿ ಲಾರಿಗಳು ಓಡಾಡುವ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಿದ್ದರಿಂದ ಅದಿರು ಲಾರಿಗಳ ನಿರ್ವಹಣೆ ವೆಚ್ಚ, ಇಂಧನ ಉಳಿತಾಯವಾಗಿದೆ.ಅನ್ನ, ನೀರು, ಹಣವನ್ನು ಮಿತವಾಗಿ ಬಳಸಬೇಕು. ಅದಿರು ಲಾರಿ ಮಾಲೀಕರು, ಚಾಲಕರು, ಕ್ಲಿನರ್ ಗಳು, ಅದಿರು ಸಾಗಣೆ ಗುತ್ತಿಗೆದಾರರು ಪರಸ್ಪರ ಸಹಕಾರ ಮನೋಭಾವದಿಂದ ದುಡಿಯಬೇಕು ಎಂದರು.

ತಾಲೂಕಿನಲ್ಲಿ ಅದಿರಿನ ಉತ್ಪಾದನೆ ಎಷ್ಟಿದೆ, ಕನ್ವೇಯರ್ ಬೆಲ್ಟ್, ರೈಲ್ವೆ ಲೈನ್ಸ್, ಲಾರಿಗಳ ಮೂಲಕ ಸಾಗಣೆಯಾಗುವ ಅದಿರು ಎಷ್ಟು ನಮ್ಮ ತಾಲೂಕಿನಲ್ಲಿ ಸರಬರಾಜಾಗುವ ಹಾಗೂ ಬೇರೆ ತಾಲೂಕು ಜಿಲ್ಲೆಗಳಿಗೆ ಸರಬರಾಜಾಗುವ ಅದಿರು ಎಷ್ಟು ಎಂದು ಲೆಕ್ಕಾಚಾರ ಮಾಡಿಕೊಂಡಲ್ಲಿ ಉದ್ಯಮವನ್ನು ಯಶಸ್ವಿಯಾಗಿ ನಡೆಸಬವುದಾಗಿದೆ ಎಂದರು.

ಸಾಗಣೆದಾರರ ಸಂಕಷ್ಟ: ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ನವಲಟ್ಟಿ ಜಯಣ್ಣ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚಿನ ಅದಿರು ನಿಕ್ಷೇಪವಿದೆ. ಇಲ್ಲಿ ಕಾರ್ಖಾನೆಗಳನ್ನು, ಉದ್ಯಮಗಳನ್ನು ಸ್ಥಾಪನೆ ಮಾಡುವಾಗ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಉದ್ಯಮಿಗಳು ಹೇಳುತ್ತಾರೆ. ನಂತರದಲ್ಲಿ ಹೊರಗಿನವರಿಗೆ ಹೆಚ್ಚಿನ ಅದಿರು ಸಾಗಣೆಗೆ ಅವಕಾಶ ನೀಡುತ್ತಾರೆ ಇದರಿಂದಾಗಿ ಸ್ಥಳೀಯವಾಗಿ ಸಾಗಣೆದಾರರು ಸಂಕಷ್ಟದಲ್ಲಿದ್ದಾರೆ. ಶಾಸಕರು ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾ. ಗೌ. ಅಧ್ಯಕ್ಷ ಚಿತ್ರಿಕಿ ಸತೀಶ್ ಮಾತನಾಡಿದರು. ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮಿಗಳು ಸಾನಿಧ್ಯವಹಿಸಿದ್ದರು. ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ನಿಕ್ಕಂ, ಲಾರಿ ಮಾಲೀಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜೆ. ಬಾಬುನಾಯ್ಕ್, ವಾಲ್ಮೀಕಿ ಮಹಾ ಸಭಾದ ತಾಲೂಕು ಅಧ್ಯಕ್ಷ ಡಿ. ಕೃಷ್ಣಪ್ಪ, ಮುಖಂಡರಾದ ಬಿ. ವಸಂತ್ ಕುಮಾರ್ ಸೇರಿದಂತೆ ಇತರರು ಇದ್ದರು.

ಪದಾಧಿಕಾರಿಗಳ ಆಯ್ಕೆ:-
ಇದೇ ಸಂಧರ್ಭದಲ್ಲಿ ತಾಲೂಕು ಗಣಿ ಅದಿರು ಸಾಗಣೆದಾರರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನವಲಟ್ಟಿ ಜಯಣ್ಣ(ಅಧ್ಯಕ್ಷ),ಎ ಪಂಪಾಪತಿ(ಗೌ ಅಧ್ಯಕ್ಷ) ಲಕ್ಷ್ಮೀಪುರದ ಎಂ. ವಾಮದೇವ, ನಾರಾಯನಪುರದ ಎಚ್. ಬಿ. ಸುಬ್ಬಣ್ಣ, ತಾರಾನಗರದ ತಿಮ್ಮಪ್ಪ ಬಲಗುಡ್ಡ, ಉಬ್ಬಲಗಂಡಿ ಈಶಣ್ಣ, ಸುಶಿಲಾನಗರದ ರಾಘವೇಂದ್ರ (ಉಪಾಧ್ಯಕ್ಷರು)ತಾರಾನಗರದ ಗಡಾದ್ ರಮೇಶ್ (ಪ್ರ ಕಾರ್ಯದರ್ಶಿ),ಕೆಎಸ್ಕೆ ಶಂಭುಲಿಂಗ(ಖಜಾಂಚಿ),ಭುಜಂಗನಗರದ ಓಂಕಾರಗೌಡ(ಜಂಟಿ ಕಾರ್ಯದರ್ಶಿ), ಸುಶಿಲಾನಗರ ಆರ್ ನಾಗರಾಜ್(ಸಂಘಟನಾ ಕಾರ್ಯದರ್ಶಿ),ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಬೋಗೇಶ್ ರೆಡ್ಡಿ, ಸಿದ್ಧಲಿಂಗಸ್ವಾಮಿ, ಹನುಮೇಶ, ಶ್ರೀನಿವಾಸ, ಪಿ. ಲಕ್ಷಣ, ಎನ್ ಕೆ ಎಸ್ ಮಂಜುನಾಥ್, ಟಿ. ಸಂದೀಪ್ ,ಬಿ. ಕಿರಣ್, ಯರಿಸ್ವಾಮಿ, ವೈ ಎಂ ಎಸ್ ಮಂಜುನಾಥ್ ರವರನ್ನು ಆಯ್ಕೆ ಮಾಡಲಾಯಿತು..

LEAVE A REPLY

Please enter your comment!
Please enter your name here