ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ಸೋಮಪ್ಪ ಕುರೆಕುಪ್ಪರಿಂದ ಪತ್ರಿಕಾಗೋಷ್ಠಿ, ಪಕ್ಷದ ಘಟಕವಾರು ವಿಭಾಗಗಳ ಅಧ್ಯಕ್ಷರ ನೇಮಕಾತಿಪಟ್ಟಿ ಬಿಡುಗಡೆ

0
248

ಸಂಡೂರು:ನ:12:-ಸಂಡೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ದಿನಾಂಕ 11.11.2021 ರಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎನ್. ಸೋಮಪ್ಪ ಕುರೆಕುಪ್ಪ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿಯ ಕಾರ್ಯಕ್ರಮ ನಡೆಯಿತು

ಪತ್ರಿಕಾಗೋಷ್ಠಿಯಲ್ಲಿ ಎನ್ ಸೋಮಪ್ಪ ಕುರೆಕುಪ್ಪ ಅವರು ಮಾತನಾಡುತ್ತಾ ಇತ್ತೀಚಿಗೆ ಬೆಂಗಳೂರುನ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ “ಜನತಾ ಸಂಗಮ,ಮಿಷನ್-1,2,3, ಕಾರ್ಯಾಗಾರದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಘಟಕವಾರು ವಿಭಾಗಗಳ ಅಧ್ಯಕ್ಷರ ನೇಮಕ ಮತ್ತು ಸೇರ್ಪಡೆಯನ್ನು ಮಾಡಲಾಯಿತು.

ಇದೇ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಕೆಲವೇ ದಿನಗಳಲ್ಲಿ ಸಂಡೂರಿಗೆ ಆಗಮಿಸಿ ತಾಲೂಕಿನ ನೂತನ ಕಚೇರಿ ಉದ್ಘಾಟನೆ ಜೊತೆಗೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸದಸ್ಯರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆಯ ಬೃಹತ್ ಸಮಾವೇಶಕ್ಕೆ ತಪ್ಪದೇ ಬರುವುದಾಗಿ ತಿಳಿಸಿದ್ದಾರೆ ಎಂದು ಅಧ್ಯಕ್ಷ ಸೋಮಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಬಾಗವಹಿಸಿದ್ದ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಿದರು,ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಕಟ್ಟಲಾಗುತ್ತಿದೆ, ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲಿ ಯುವಕರಿಂದ ಹಿಡಿದು ಹಿರಿಯರ ತನಕ ಉತ್ತಮ ಪ್ರತಿಕ್ರಿಯೆ ದೊರೆತಿದೆ,ಮುಂಬರುವ ಸಾರ್ವರ್ತಿಕ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಭೂತಪೂರ್ವವಾದ ಜಯವನ್ನು ವಿಧಾನಸಭಾ ಪ್ರವೇಶಿಸುವ ಸತ್ಯ ಎಂದು ಹೇಳಿದರು.

ನೂತನವಾಗಿ ಪ್ರಾರಂಭವಾಗಿರುವ ಜೆಡಿಎಸ್ ಕಚೇರಿಯು ಪ್ರತಿದಿನ ಕ್ಷೇತ್ರದ ಸಾರ್ವಜನಿಕರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲು ಇರುತ್ತದೆ ಎಂದು ತಿಳಿಸುತ್ತಾ ಹಾಗೇ

ಪಕ್ಷದ ನೂತನ ಘಟಕಗಳ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದರು ಪಟ್ಟಿಯು ಈ ಕೆಳಗಿನಂತಿದೆ……..

ಖಾದರ್ ಭಾಷಾ-ಅಧ್ಯಕ್ಷರು ಯುವ ಜನತಾದಳ, ಆಶಾ ಸಿ-ಅಧ್ಯಕ್ಷರು ಮಹಿಳಾ ಯುವ ಘಟಕ, ಶಂಕ್ರಮ್ಮ-ಅಧ್ಯಕ್ಷರು ಮಹಿಳಾ ಘಟಕ, ಪ್ರಹ್ಲಾದ ನಲ್ಲಬಂಡೆ-ಅಧ್ಯಕ್ಷರು ವಿದ್ಯಾರ್ಥಿ ಘಟಕ, ಮೊಹಮದ್ ಯೂಸೂಫ್-ಅಧ್ಯಕ್ಷರು ಅಲ್ಪ ಸಂಖ್ಯಾತರ ಘಟಕ, ಧರ್ಮಾ ನಾಯ್ಕ್-ಅಧ್ಯಕ್ಷರು ರೈತ ಘಟಕ, ಮಲ್ಲೇಶ್ ಕಮತೂರ್-ಅಧ್ಯಕ್ಷರು ಪ.ಜಾ, ನೆಲ್ಲಕುದುರೆ ಮೂಕಪ್ಪ-ಅಧ್ಯಕ್ಷರು ಪ.ಪಂ, ಎಚ್ ನಾಗರಾಜ್-ಅಧ್ಯಕ್ಷರು ಹಿಂದುಳಿದ ವರ್ಗ, ಅನಂತ್ ಕುಮಾರ್ ಶೆಟ್ಟಿ-ನಿವೃತ್ತ ನೌಕರರ ವಿಬಾಗ, ಉಮರ್ ಪಾರುಕ್ ಎಸ್-ಅಧ್ಯಕ್ಷರು ಕಾನೂನು ಘಟಕ, ಎ. ವೈ. ಅಮಿತ್ ದೊರೆ-ಅಧ್ಯಕ್ಷರು ಮಾಹಿತಿ ತಂತ್ರಜ್ಞಾನ, ಪದ್ಮಶಾಲಿ ಹನುಮಂತಪ್ಪ- ಅಧ್ಯಕ್ಷರು ನೇಕಾರರ ವಿಬಾಗ, ಮೊಹಮದ್ ಶರಪ್-ಅಧ್ಯಕ್ಷರು ವೈದ್ಯಕೀಯ ವಿಬಾಗ, ಎನ್. ಶಿವಶಂಕರ-ಅಧ್ಯಕ್ಷರು ಕ್ರೀಡಾ ವಿಬಾಗ, ಸಿದ್ದೇಶ್-ಅಧ್ಯಕ್ಷರು ವಿಕಲಾ ಚೇತನ ವಿಬಾಗ, ಕುಮಾರಸ್ವಾಮಿ ತಬಲಾ-ಅಧ್ಯಕ್ಷರು ಸಾಂಸ್ಕೃತಿಕ ವಿಬಾಗ, ಮಾರೇಶ್ ಒಬಳಾಪುರ-ಅಧ್ಯಕ್ಷರು ಸೇವಾದಳ, ಅಬ್ಬಾಸ್ ಅಲಿ-ಅಧ್ಯಕ್ಷರು ಕೈಗಾರಿಕಾ ಉದ್ಯಮ, ಅಲ್ಲಾ ಭಕ್ಷಿ-ಅಧ್ಯಕ್ಷರು ತಾಂತ್ರಿಕ ವಿಬಾಗ, ಗಂಗಾಧರ ಎಚ್-ಅಧ್ಯಕ್ಷರು ಆ.ಸ.ಕ್ರೈಸ್ತ ವಿಬಾಗ, ಮಾರೇಶ್-ಅಧ್ಯಕ್ಷರು ಮೀನುಗಾರಿಕೆ ವಿಬಾಗ, ಕೆ ಮೊಹಮ್ಮದ್ ಸಾಬ್-ಅಧ್ಯಕ್ಷರು ಕಾರ್ಮಿಕ ವಿಬಾಗ, ಶಪಿಉಲ್ಲಾ-ಅಧ್ಯಕ್ಷರು ನಗರಘಟಕ, ಭೋವಿ ಪದ್ಮಣ್ಣ-ಅಧ್ಯಕ್ಷರು ಸಂಡೂರು ಹೋಬಳಿ ಘಟಕ, ಮೊಹಮ್ಮದ್ ಶಬ್ಬೀರ್ ಅಧ್ಯಕ್ಷರು ಅಲ್ಪಸಂಖ್ಯಾತ ಸಂಡೂರು ಹೋಬಳಿ, ಇವರುಗಳನ್ನು ಘೋಷಣೆ ಮಾಡಲಾಯಿತು

ಪತ್ರಿಕಾಗೋಷ್ಠಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್. ಸೋಮಪ್ಪ ಕುರೆಕುಪ್ಪ, ಪ್ರದಾನ ಕಾರ್ಯದರ್ಶಿಗಳಾದ ಕೆ.ಕೆ.ಮೆಹಬೂಬ್ ಬಾಷಾ,ಸೈಯ್ಯದ್ ಹುಸೇನ್ ಪೀರಾ ದೊಡ್ಡಮನೆ,ಕುರೆಕುಪ್ಪ ಲಿಂಗಪ್ಪ, ಈರಪ್ಪ, ಕೃಷ್ಣನಗರ ತಿಮ್ಮಪ್ಪ, ಚೋರನೂರು ಪರಶುರಾಮ, ದೌಲತ್ ಪುರ ನಜೀರ್, ಅಲ್ಲಾಭಕ್ಷಿ, ಶಬ್ಬೀರ್ ಸಾಬ್, ಬಂಡ್ರೆಪ್ಪ, ಮಾರೆಪ್ಪ, ಎಚ್ ಹಸೇನ್ ಸಾಬ್, ಹೊನ್ನೂರ ಸಾಬ್, ಮಲ್ಲೇಶ್ ಕಮತೂರ್, ಪದ್ಮಣ್ಣ ಭೋವಿ, ಖಾದರ್ ಬಾಷಾ ಚೋರನೂರು, ಶಪಿ ಸಂಡೂರು, ಯೂಸೂಫ್ ಯಶವಂತನಗರ,ಮಾರೆಪ್ಪ ದೌಲತ್ ಪುರ,ವಿಜಯನಗರ ಜಿಲ್ಲಾ ಮುಖಂಡ ಶ್ರೀಕಾಂತ್ ಬಡಿಗೇರ್ ಹಾಗೂ ಪಕ್ಷದ ಹಿರಿಯ ಮುಖಂಡರು ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here