ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯ ಪಾತ್ರ ಅನನ್ಯ: ಡಾ.ಸತೀಶ್ ಪಾಟೀಲ್

0
180

ಕೊಟ್ಟೂರು ಪಟ್ಟಣದ ಕ್ರಿಯೇಟಿವ್ ಲೇಡಿಸ್ ಅಸೋಸಿಯೇಷನ್ ರವರ ವತಿಯಿಂದ ದಿನಾಂಕ 18.03.2023 ರಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಡಾಕ್ಟರ್ ಸತೀಶ್ ಪಾಟೀಲ್ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪದವಿ ಮಹಾವಿದ್ಯಾಲಯ ಹಗರಿಬೊಮ್ಮನಹಳ್ಳಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಸ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹಿಳೆಯ ಪಾತ್ರ ಅನನ್ಯ, ಮಹಿಳೆ ಕೇವಲ 4 ಗೋಡೆಗಳ ಮಧ್ಯೆ ಉದ್ಯೋಗ ಮಾಡದೆ ಆಕಾಶದ ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದ್ದಾಳೆ, ಶರಣೆ ಅಕ್ಕಮಹಾದೇವಿಯವರ ಕೆಲವೊಂದು ಅಷ್ಟು ವಿಚಾರಧಾರೆಗಳನ್ನು ಪ್ರಸ್ತುತಪಡಿಸುತ್ತಾ ಅಕ್ಕಮಹಾದೇವಿಯು ಕೌಶಿಕನಿಂದ ಬಿಡುಗಡೆ ಹೊಂದಿ ಶಿವಮೊಗ್ಗದ ಉಡತಡಿಯಿಂದ ಕಲ್ಯಾಣದವರೆಗೆ ಬೆತ್ತಲೆಯಾಗಿ ತನ್ನ ಕೂದಲುಗಳನ್ನು ಮುಚ್ಚಿಕೊಂಡು ಬಂದಾಗ ಅಂದಿನ ಶರಣರಾದ ಅಲ್ಲಮಪ್ರಭು, ಬಸವಣ್ಣರಾದಿಯಾಗಿ ಅಕ್ಕಮಹಾದೇವಿಗೆ ಪ್ರಶ್ನೆ ಮಾಡಿದಾಗ ಆಗ ಅವಳು ಕೊಟ್ಟ ಮಾರ್ಮಿಕ ಉತ್ತರಗಳು ಇಂದಿನ ಸಮಾಜದಲ್ಲಿಯೂ ಪ್ರಸ್ತುತ ಎಂದು ಮಹಿಳೆಯರನ್ನು ಕುರಿತು ಉದ್ಘಾಟನಾ ನುಡಿಗಳನ್ನು ಆಡಿದರು,

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಭಾರತಿಸುಧಾಕರ್ ಅಧ್ಯಕ್ಷರು ಪಟ್ಟಣ ಪಂಚಾಯತ್ ಕೊಟ್ಟೂರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡುತ್ತಾ ಹೆಣ್ಣು ಮಕ್ಕಳು ಕೇವಲ ಮನೆಗೆ ಸೀಮಿತವಾಗದೆ ತನ್ನ ಸಾಮರ್ಥ್ಯವನ್ನು ತೋರಿಸಬೇಕು ಎಂದು ಹೇಳಿದರು,

ಕಾರ್ಯಕ್ರಮದಲ್ಲಿ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ವೀಣಾ ವಿವೇಕಾನಂದ ಸದಸ್ಯರು ಪಟ್ಟಣ ಪಂಚಾಯತ್ ಇವರು ಮಾತನಾಡಿ ಒಬ್ಬ ಮಹಿಳೆ ರಾಜಕೀಯವಾಗಿ ಮುಂದೆ ಬರಲು ಎಷ್ಟು ಕಷ್ಟ ನೋವುಗಳನ್ನು ಅನುಭವಿಸಬೇಕು ಪುರುಷರ ಕಿರುಕುಳ ಇವುಗಳನ್ನ ಎಲ್ಲಾ ಮೆಟ್ಟಿ ನಿಲ್ಲಬೇಕು ಎಂದು ತಮ್ಮ ಜೀವನದ ಅನುಭವದ ಉದಾಹರಣೆಗಳನ್ನು ತಿಳಿಸುತ್ತಾ ಸಮಾಜದ ನಿರ್ಮಾಣದಲ್ಲಿ ತಮ್ಮ ಪಾತ್ರ ಅಗತ್ಯ ಎಂದರು.

ಪ್ರಸ್ತಾವಿಕವಾಗಿ ಶ್ರೀಮತಿ ನಿರ್ಮಲ ಶಿವನ ಗುತ್ತಿ ಪ್ರಧಾನ ಕಾರ್ಯದರ್ಶಿಗಳು ಕ್ರಿಯೇಟಿವ್ ಲೇಡೀಸ್ ಅಸೋಸಿಯೇಷನ್ ಇವರು ಕಳೆದ 23 ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದು ಅಲ್ಲಿಂದ ಇಲ್ಲಿಯವರೆಗೂ ಕೊಟ್ಟೂರಿನಲ್ಲಿ ಉಳಿದ ಏಕೈಕ ಸಂಸ್ಥೆಯಾಗಿದೆ ಎಂದು ಹೇಳಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುನಂದಾ ಗುರುಬಸವರಾಜ್ ಅಧ್ಯಕ್ಷರು ಕ್ರಿಯೇಟಿವ್ ಲೇಡಿಸ್ ಅಸೋಸಿಯೇಷನ್ ಇವರು ವಹಿಸಿದ್ದರು.

ಸಮಾರಂಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಅದರಲ್ಲಿ ವಿಶೇಷವಾಗಿ ಕೊಟ್ಟೂರಿನ ಮಹಿಳೆಯರಿಗೆ ನನ್ನಮ್ಮ ಸೂಪರ್ ಸ್ಟಾರ್ ಎಂಬ ತಾಯಿ ಮತ್ತು ಮಗಳ ಕಾರ್ಯಕ್ರಮವನ್ನು ನೆಡಿಸಿ ಶ್ರೀಮತಿ ಸುವರ್ಣ ಮತ್ತು ಅವರ ಮಗಳು ವಿಜೇತರದರು ಇವರಿಗೆ ಬಹುಮಾನ ಮತ್ತು ಕ್ಲಬ್ ನ 60 ವರ್ಷದ ಹಿರಿಯರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಡಾಕ್ಟರ್ ಅನುಪಮಾ ಸ್ವಾಗತಿಸಿದರು, ಶ್ರೀಮತಿ ಯಶೋಧಾ ಮಾಮಾನಿಯವರು ವಂದಿಸಿದರು,ಶ್ರೀಮತಿ ಅರುಣಾ ಕೊಟ್ರೇಶ್ ನಿರೂಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here