ಜೈಸಿಂಗ್ ಪುರ-ವೆಂಕಟಗಿರಿ ಗ್ರಾಮದ ಎಕ್ಸಲ್ ಮೈನಿಂಗ್ ಅಂಡ್ ಇನ್ಸ್ಟ್ರಾ ಸರ್ವಿಸಸ್ ಕಂಪನಿಗೆ ಕ್ರಷಿಂಗ್ ಮತ್ತು ಸ್ಕ್ರೀನಿಂಗ್ ಸ್ಥಾವರ ಸ್ಥಾಪನೆಗೆ ಪರವಾನಿಗೆ ನೀಡಬಾರದೆಂದು ಕನ್ನಡಪರ ಸಂಘಟನೆಗಳಿಂದ ಮನವಿ.

0
147

ಸಂಡೂರು:ಸೆಪ್ಟೆಂಬರ್:೧;ಸಂಡೂರು ತಾಲೂಕಿನ ಎಕ್ಸಲ್ ಮೈನಿಂಗ್ ಅಂಡ್ ಇನ್ಸ್ಟ್ರಾ ಸರ್ವಿಸಸ್, ಕಂಪನಿಯು ಜೈಸಿಂಗಾಪುರ (ವೆಂಕಟಗಿರಿ) ಗ್ರಾಮದಲ್ಲಿ ದಿನಾಂಕ.31-08-2021 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಬಳ್ಳಾರಿ ಇವರಿಂದ “ಪರಿಸರ ಸಾರ್ವಜನಿಕ ಆಲಿಕೆ ಸಭೆ”ಯನ್ನು ಆಯೋಜಿಸಿದ್ದರು.

ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಜೈಸಿಂಗ್ ಪುರ-ವೆಂಕಟಗಿರಿ, ಜೈಸಿಂಗ್ ಪುರ-ವೆಂಕಟಗಿರಿ ಗ್ರಾಮದ ಎಕ್ಸಲ್ ಮೈನಿಂಗ್ ಅಂಡ್ ಇನ್ಸ್ಟ್ರಾ ಸರ್ವಿಸಸ್ ಇವರು ಜೈಸಿಂಗ್ ಪುರ ಗ್ರಾಮದ ಸರ್ವೆ ನಂ:89(ಬಾಗ),97/3, 98 ಮತ್ತು 99 ಜಮೀನುಗಳಿಗೆ ಸಂಬಂಧಿಸಿ ಒಟ್ಟು 16.77 ಎಕರೆ (6.786 ಹೆಕ್ಟರ್)ಪ್ರದೇಶದಲ್ಲಿ 4.99 ಲಕ್ಷ ಟಿ.ಪಿ.ಎ ಸಾಮರ್ಥ್ಯದ ಖನಿಜ ಪ್ರತ್ಯಕಿಕರಣ ಘಟಕ (ಕಬ್ಬಿನ ಮತ್ತು ಮ್ಯಾಂಗನೀಸ್ ಅದಿರು) ಸ್ಥಾಪನೆ ಮಾಡುವುದಕ್ಕೆ ಗ್ರಾಮಸ್ಥರ ಹಾಗೂ ನಮ್ಮಗಳ ವಿರೋಧ ಮತ್ತು ಆಕ್ಷೇಪಣೆ ಇರುವುದರಿಂದ ಈ ಘಟಕ ಸ್ಥಾಪನೆಗೆ ಅನುಮತಿ/ಪರವಾನಿಗೆ ನೀಡದಂತೆ ತಡೆಯಿಡಿಯಬೇಕು.

ಈ ಘಟಕ ಸ್ಥಾಪನೆಯಿಂದ ಸ್ಥಳೀಯ ರೈತರಿಗೆ, ಪರಿಸರಕ್ಕೆ, ಸ್ಥಳೀಯ ನಿವಾಸಿಗಳಿಗೆ, ಪ್ರಾಣಿ, ಪಕ್ಷಿಗಳಿಗೆ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದಿಂದ ತೀವ್ರ ತೊಂದರೆಯಾಗುತ್ತದೆ, ಕಾರಣ ಮಾಲಿನ್ಯ ನಿಯಂತ್ರಣ ಅತ್ಯವಶ್ಯಕ ಇರುವುದರಿಂದ
ಈ ಘಟಕ ಸ್ಥಾಪನೆಯನ್ನು ತಡೆಯಿಡಿಯಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪರಿಸರ ಅಧಿಕಾರಿ, ಪ್ರಾದೇಶಿಕ ಕಚೇರಿ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಇವರುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಿಪಬ್ಲಿಕನ್ ಸೇನಾ, ಮತ್ತು ಸಂಡೂರು ತಾಲೂಕು ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರುಗಳು ಮನವಿ ಪತ್ರಗಳನ್ನು ಸಲ್ಲಿಸಿದರು

LEAVE A REPLY

Please enter your comment!
Please enter your name here