ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕೂಡ್ಲಿಗಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

0
189

ದಿನಾಂಕ 29-04-2021 ರಂದು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಸಿಡೇಗಲ್ ಹಾಗೂ ಕುದುರೆಡವೂ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕೂಡ್ಲಿಗಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರೆವೆರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಏ.29.ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಡೆಯ ಬೇಕಿದ್ದ 49 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಸಲ ಕರೋನಾ ಕಾರಣದದಿಂದ ಜೋಡಿಗಳ ಒಪ್ಪಿಗೆಯಂತೆ ಅವರವರ ಊರುಗಳಲ್ಲಿಯೇ ನೆರವೆರಿಸಲಾಯಿತು.

ನೋಂದಾಯಿತ ಜೋಡಿಗೆ ತಾಳಿ. ಸಹಿತ. ಮಂಗಳಸೂತ್ರ. ಸೀರೆ .ದೋತಿ .ಶಲ್ಯದ. ಉಡುಗೋರೆಯ ಎಲ್ಲಾ ವೆಚ್ಚವನ್ನು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರೇಸ್ಟ್ .ವತಿಯಿಂದ ವಿವಾಹದ ಖರ್ಚು ನಿಭಾಯಿಸಲು ವಧು-ವರರಿಗೆ ತಲಾ 10.000 ರೂ ವನ್ನು ಧರ್ಮಸ್ಥಳ ದಿಂದ ಒದಗಿಸಲಾಯಿತು.

ಶ್ರೀ ಕ್ಷೇತ್ರದ ಪರಮ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ .ಯವರು ಕಳುಹಿಸಿ ಕೋಟ್ಟಿರುವ ಉಡುಗೋರೆಯನ್ನು ವಧು-ವರರಿಗೆ ನೀಡಿ ಶುಭ ಹಾರೈಸಲಾಯಿತು.
ಆರ್ಥಿಕವಾಗಿ ಹಿಂದುಳಿದವರಿಗಾಗಿ ಹಾಗೂ ದುಂಧು ವೆಚ್ಚ ತಡೆಯುವು ಉದ್ದೇಶದಿಂದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದರು.

ಈ ತನಕ 12.262.ಜೋಡಿಗೆ ಮದುವೆಯಾಗಿದೆ.ದಿನಾಂಕ .29-4-2021 ರಂದು ಗುರುವಾರದಂದು ರಾಜ್ಯಾದ್ಯಂತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 121 ಜೋಡಿಗಳು ಸಪ್ತಪದಿ ತುಳಿದರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಹೆಗ್ಗಡೆಯವರಿಗೆ ವಿಡಿಯೋ ಸಂದೇಶ ಕಳುಹಿಸಿ ನೂತನ ದಂಪತಿಯನ್ನು ಆರ್ಶೀವಾದಿಸಿದರು.

ಈ ಸಂಧರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಯೋಜನಾಧಿಕಾರಿ.ಮಂಜುನಾಥ್.ಗುಡೇಕೋಟೆ ವಲಯದ ಮೆಲ್ವೀಚಾರಕರಾದ. ಕೆ.ಕರಿಯಪ್ಪ.ಯೋಜನೆಯ ಕೃಷಿ ಆಧಿಕಾರಿ ಮಹಾಲಿಂಗಯ್ಯ.ಗುಡೇಕೋಟೆ ವಲಯದ ಕೃಷಿಯಂತ್ರಧಾರೆ ಇಲಾಖೆಯ ವ್ಯವಸ್ಥಾಪಕರಾರ ಮಂಜುನಾಥ್.ವಲಯದ ಸೇವಾ ಪ್ರತಿನಿಧಿಗಳು.ಊರಿನ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here