ಕ್ಷಯ ಸಂಪೂರ್ಣ ವಾಸಿಯಾಗುವ ಕಾಯಿಲೆ, ಅಸಡ್ಡೆ ಬೇಡ, ಜಾಗೃತಿ ಇರಲಿ; ಡಾ.ಅಕ್ಷಯ್,

0
146

ಸಂಡೂರು:ಮಾ:24:-ತಾಲೂಕಿನ ಹಳೆದರೋಜಿ ಗ್ರಾಮದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ವಿಠಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷಯ್ ಅವರು ಮಾತನಾಡಿದರು, 2025 ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಲಾಗಿದೆ, ಇನ್ನೂ ಕೇವಲ ಒಂದುವರೆ ವರ್ಷ ಸಮಯ ಇದೆ ಅಷ್ಟರೊಳಗೆ ಯಾರಿಗೆ ಎರಡು ವಾರದಿಂದ ಕೆಮ್ಮು, ಸಂಜೆ ವೇಳೆ ಜ್ವರ,ಕಫ ಬರುವುದು,ಕಫದಲ್ಲಿ ರಕ್ತ, ಎದೆ ನೋವು, ರಾತ್ರಿ ಬೆವರು,ಹಸಿವೆ ಇಲ್ಲದಿರುವುದು, ತೂಕ ಕಡಿಮೆಯಾಗುತ್ತಾ ಬರುವುದು ಇದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಕಫ ಪರೀಕ್ಷೆ ಮಾಡಿಸ ಬೇಕು, ಈಗಾಗಲೇ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದವರ ಕುಟುಂಬ ನೆರೆಹೊರೆಯವರು ಒಂದು ವಾರ ಕೆಮ್ಮು ಬಂದರೆ ನಿರ್ಲಕ್ಷ ಮಾಡಬಾರದು, ತಪಾಸಣೆಗೆ ಒಳಗಾಗಬೇಕು, ನೆಗಿಟಿವ್ ಬಂದರೆ ಎಕ್ಸ್ ರೇ, ಸಿ.ಬಿ.ನಾಟ್,ಟ್ರೂನಾಟ್ ಕಫ ಪರೀಕ್ಷೆ ಮಾಡಿಸ ಬೇಕು, ಕೆಮ್ಮು ಇರಯವವರು ಬಟ್ಟೆ,ಟವಲ್, ಅಡ್ಡ ಹಿಡಿದು ಕೆಮ್ಮ ಬೇಕು, ಎಲ್ಲಂದರಲ್ಲಿ ಉಗಳಬಾರದು, ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಪೌಷ್ಟಿಕಾಹಾರಕ್ಕೆ ಆಹಾರ ಸಾಮಾಗ್ರಿಗಳನ್ನು ಕೊಡಿಸಿ ಅವರ ಬೆಂಬಲಕ್ಕೆ ನಿಂತುಕೊಳ್ಳಿ ಕೇವಲ ನಾಲ್ಕು ನೂರು ರೂಪಾಯಿ ಖರ್ಚಾಗುತ್ತದೆ, ಸರ್ವರೂ ಕೈ ಜೋಡಿಸಿದಲ್ಲಿ ಕ್ಷಯ ಮುಕ್ತ ಗ್ರಾಮ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್, ಸಿ.ಹೆಚ್.ಒ ಎರ್ರಿಸ್ವಾಮಿ, ಆಶಾ ಕಾರ್ಯಕರ್ತೆ ಮಹಂತಮ್ಮ, ಜ್ಯೋತಿ, ಸಾರ್ವಜನಿಕರಾದ ಬಿ.ತಿಪ್ಪಯ್ಯ, ಹೊನ್ನೂರು ಬಾಷ, ಬಿ.ಬಸವರಾಜ, ಕುಮಾರಸ್ವಾಮಿ, ವಿ.ಲಿಂಗಪ್ಪ, ವಿ.ತಿಮ್ಮಪ್ಪ,ದ್ಯಾವಣ್ಣ,ಕನಕಪ್ಪ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here