“ಅಜಾದಿ ಕಾ ಅಮೃತ್ ಮಹೋತ್ಸವ” ದ ಸ್ಮರಣಾರ್ಥ ಎನ್ ಎಂ ಡಿ ಸಿ ಲಿಮಿಟೆಡ್ ನಲ್ಲಿ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಕಾರ್ಯಕ್ರಮ

0
118

ಸಂಡೂರು:ಅ:25:-ಭಾರತದ ಸ್ವಾತಂತ್ರ್ಯದ 75 ವರ್ಷಗಳ ವಜ್ರ ಮಹೋತ್ಸವದ “ಆಜಾದಿ ಕಾ ಅಮೃತ್ ಮಹೋತ್ಸವ” ದ ಸ್ಮರಣಾರ್ಥ ಎನ್‌ಎಂಡಿಸಿ ಲಿಮಿಟೆಡ್, ದೋಣಿಮಲೈ ಕಾಂಪ್ಲೆಕ್ಸ್ ಇಂಡಿಯನ್ ಬ್ಯೂರೋ ಆಫ್ ಮೈನ್ಸ್, ಬೆಂಗಳೂರು ಇವರ ನೇತೃತ್ವದಲ್ಲಿ ನಮ್ಮ ಸಂಸ್ಥೆಯಲ್ಲಿ, ಶಾಲೆಗಳಲ್ಲಿ ಮತ್ತು ಸ್ಥಳೀಯ ಸಮುದಾಯಕ್ಕೆ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಸಾಮೂಹಿಕ ಗಿಡ ನೆಡುವಂತಹ ಕಾರ್ಯಕ್ರಮಗಳನ್ನು ದಿನಾಂಕ 02.10.2021 ರಿಂದ 14.10.2021 ರವರೆಗೆ ಹಮ್ಮಿಕೊಳ್ಳಲಾಗಿತ್ತು.

ಸಾಮೂಹಿಕ ಗಿಡ ನೆಡುವ ಕಾರ್ಯಕ್ರಮವನ್ನು ದೋಣಿಮಲೈ ಉಪನಗರದಲ್ಲಿ ಶ್ರೀ ಅರುಣ್ ಕುಮಾರ್, ಡಿಸಿಒಎಂ, ಐಬಿಎಂ, ಬೆಂಗಳೂರು ಮತ್ತು ಶ್ರೀ ಕೆ ಶ್ರೀನಿವಾಸ್, ಸಹಾಯಕ ಗಣಿ ಭೂವಿಜ್ಞಾನಿ, ಐಬಿಎಂ, ಬೆಂಗಳೂರು ಹಾಗು ಶಾಲಾ ಮಕ್ಕಳು ಮತ್ತು ಸ್ಥಳೀಯ ಪಂಚಾಯತ್ ಸದಸ್ಯರೊಂದಿಗೆ ನೆರವೇರಿಸಲಾಯಿತು.
ದಿನಾಂಕ 20.10.2021 ರಂದು ಎನ್‌ಎಂಡಿಸಿ ಲಿಮಿಟೆಡ್ ದೋಣಿಮಲೈನಲ್ಲಿನ ಕಲಿಕೆ ಕೇಂದ್ರದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಾದ ಶ್ರೀ ಅರುಣ್ ಕುಮಾರ್, ಡಿಸಿಒಎಂ ಮತ್ತು ಶ್ರೀ ಕೆ ಶ್ರೀನಿವಾಸ್, ಸಹಾಯಕ ಗಣಿ ಭೂವಿಜ್ಞಾನಿ, ಐಬಿಎಂ, ಬೆಂಗಳೂರು; ಶ್ರೀ ಸಂಜೀವ್ ಸಾಹಿ, ಸಿಜಿಎಂ; ಶ್ರೀ ಪಿ ರಾಮಯ್ಯನ್, ಜಿಎಂ (ಮೆಕ್ಯಾನಿಕಲ್) ಪ್ಲಾಂಟ್; ಶ್ರೀ ಪ್ರದೀಪ್ ಸಕ್ಸೇನ, ಜಿಎಂ (ಕಾರ್ಮಿಕ); ಶ್ರೀ ಎಸ್ ಎಂ ಜಗದೀಶ್ವರ್, ಡಿಜಿಎಂ (ಮೈನಿಂಗ್) ಇವರುಗಳು “ಆಜಾದಿ ಕಾ ಅಮೃತ್ ಮಹೋತ್ಸವ” ದ ಕುರಿತು ಭಾಷಣ ಮಾಡಿದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಎನ್ಎಂಡಿಸಿಯ ಇತರ ಅಧಿಕಾರಿಗಳು; SC/ST ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರಾಜಾ ಡಿ ಮತ್ತು ಉಪಾಧ್ಯಕ್ಷರಾದ ಶ್ರೀ ಮೋಹನ್ ಕೆ ಜಿ; ದೇವಗಿರಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ಸ್ವರ್ಣಲತಾ ಮತ್ತು ನರಸಿಂಗಪುರ ಗ್ರಾಮ ಪಂಚಾಯತ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here