ಸ್ವಚ್ಛತೆ ಕಾರ್ಯ ಮಾಡುವಾಗ ಸೂಕ್ತ ಮಾರ್ಗದರ್ಶನ ಮಾಡಿ ;ಡಾ.ದೌಲಾಸಾಬ್ ಮುದ್ದಾಪುರ್

0
158

ಸಂಡೂರು:ಮಾ:23: ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಯಕಲ್ಪ ಮೌಲ್ಯಮಾಪನ ಮಾಡಲು ಅಧಿಕಾರಿಗಳ ಬೇಟಿ ನೀಡಿದರು
ತಾಲೂಕಿನ ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯದ ಅಂತರ ಜಿಲ್ಲಾ ಮಟ್ಟದ ಅಧಿಕಾರಿ ರಾಯಚೂರು ಜಿಲ್ಲೆಯಿಂದ ಕಾಯಕಲ್ಪ ಬಾಹ್ಯ ಮೌಲ್ಯಮಾಪನ ಮಾಡಲು ಡಾ.ದೌಲಾಸಾಬ್ ಮುದ್ದಾಪುರ್ ಅವರು ಪರಿಶೀಲನೆ ಆಗಮಿಸಿದ್ದರು, ಕೇಂದ್ರದ ರೋಗಿಗಳ ತಪಾಸಣಾ ಕೊಠಡಿ, ಚುಚ್ಚುಮದ್ದು ಕೊಠಡಿ, ಲ್ಯಾಬ್, ವಾರ್ಡ್ ಗಳು ಮತ್ತು ಶೌಚಾಲಯಗಳು, ಹಾಗೂ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮತ್ತು ಕೀಟ ಮುಕ್ತತೆ (ಬಯೋಮೆಡಿಕಲ್ ವೇಸ್ಟ್) ಬಗ್ಗೆ ಪರಿಶೀಲನೆ ಮಾಡಿದರು, ಇದು ಹಳೆ ಕಟ್ಟಡವಾದರೂ ಉತ್ತಮವಾಗಿ ಇಟ್ಟಿದ್ದೀರಿ, ಸ್ವಚ್ಛತೆ ಬಗ್ಗೆ ಇನ್ನಷ್ಟು ಗಮನ ಕೊಡಿ, ಸಿಬ್ಬಂದಿಯವರಿಗೆ ಕಾಯಕಲ್ಪದ ಉದ್ದೇಶಗಳ ಕುರಿತು ಪುನರ್ ಮನನ ತರಬೇತಿ ನೀಡಿ, ಹಾಗೇ ಅವರಿಗೆ ಸ್ವಚ್ಚತೆ ಕಾರ್ಯ ಮಾಡುವಾಗ ಸೂಕ್ತ ಮಾರ್ಗದರ್ಶನ ಮಾಡುವಂತೆ ಅವರು ಸೂಚಿಸಿದರು, ಪ್ರಶಸ್ತಿಗೆ ಆಯ್ಕೆ ಆಗುವಂತೆ ಕ್ರಮ ಕೈಗೊಳ್ಳಿ, ಪ್ರಶಸ್ತಿಯಿಂದ ಬಂದ ಹಣದಿಂದ ಇನ್ನಷ್ಟು ಸುಧಾರಣೆಗೆ ಸಹಕಾರಿಯಾಗುವುದು ಎಂದು ಅವರು ತಿಳಿಸಿ ಬಳ್ಳಾರಿ ತಾಲೂಕಿನ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ತೆರಳಿದರು,

ಈ ಸಂದರ್ಭದಲ್ಲಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅಕ್ಷಯ್ ಶಿವಪುರ ಅವರು ಹಾಜರಿದ್ದು ರೋಗಿಗಳ ನೋಂದಣಿ,ಚಿಕಿತ್ಸೆ, ಹೆರಿಗೆ,ರೋಗಿಗಳ ಸೂಚನೆ ದಾಖಲಾತಿಗಳನ್ನು ಪರಿಶೀಲನೆಗೆ ಒದಗಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ವೈದ್ಯರಾದ ಡಾ.ಸಂದೀಪ್, ಡಾ.ಪವನ್, ಡಾ.ಜಯಶ್ರೀ, ನೆತ್ರಾಧಿಕಾರಿ ಈಶ್ವರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಎರ್ರಿಸ್ವಾಮಿ, ಶುಶ್ರೂಷಣಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here