ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

0
189

ಸಂಡೂರು:ಮಾ:24:- ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಕುಮಾರ್ ಮಾತನಾಡಿ 2025ಕ್ಕೆ ಕ್ಷಯರೋಗ ಮುಕ್ತ ಭಾರತ ರೂಪಿಸಲು ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಕ್ಷಯರೋಗದ ಲಕ್ಷಣಗಳು ಕೆಮ್ಮ,ಜ್ವರ, ಕಫ ಬರುವುದು, ಕಫದಲ್ಲಿ ರಕ್ತ,ಹಸಿವೆ ಇಲ್ಲದಿರುವುದು,ಶೇಕಡ ಹತ್ತಕ್ಕಿಂತ ತೂಕ ಕಡಿಮೆಯಾಗುವುದು, ಸುಸ್ತು,ಆಯಾಸ, ಇರುವವರನ್ನು ಬೇಗನೆ ಪತ್ತೆ ಹಚ್ಚಿ ಕಫದ ಮಾದರಿ ಸಂಗ್ರಹಿಸಿ ಆದಷ್ಟು ಬೇಗ ಆಸ್ಪತ್ರೆಗೆ ಕಳಿಸಬೇಕು,

ಅಪಾಯಕಾರಿ ಗ್ರೂಪ್‌ ಅಂದರೆ ಮಧುಮೇಹ ಇರುವವರು, ಧೂಮಪಾನಿಗಳು, ಮಧ್ಯ ಪಾನಿಗಳು, ಕಾರ್ಖಾನೆಯ ಕೆಲಸಕ್ಕೆ, ಬೀಡಿ ಕಟ್ಟುವವರು, ಮಿಲ್ ಗಳಲ್ಲಿ ಕೆಲಸ ಮಾಡುವವರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲು ತಪಾಸಣೆ ಶಿಬಿರ ನಡೆಸುವಂತೆ ತಿಳಿಸಿದರು, ಈಗಾಗಲೇ ಈ ರೀತಿ ಶಿಬಿರ ನಡಸಲಾಗಿದೆ ಅದರಲ್ಲಿ ಕ್ಷಯರೋಗ (ಪಾಸಿಟಿವ್) ಪತ್ತೆ ಹಚ್ಚಿದ ಅರೋಗ್ಯ ನಿರೀಕ್ಷಣಾಧಿಕಾರಿ ಅನುಷಾ ಮತ್ತು ಅಶಾ ಕಾರ್ಯಕರ್ತೆ ಭಾಗ್ಯಮ್ಮ ಅವರ ಕರ್ತವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಕಿರು ಕಾಣಿಕೆಗಳನ್ನು ಅವರು ನೀಡಿದರು,

ಈ ಸಂದರ್ಭದಲ್ಲಿ ಅರೋಗ್ಯ ಸುರಕ್ಷಣಾಧಿಕಾರಿ ಪದ್ಮಾ,ಮಹಂತೇಶ್, ಧರಣಿ,ತಿಪ್ಪಮ್ಮ, ನಾಗವೇಣಿ,ನಾಯಕ್, ಅಮ್ಜದ್,ಆಶಾ ಕಾರ್ಯಕರ್ತೆ ಜಲಜಾಕ್ಷಿ, ಪಾಪಮ್ಮ,ಕಾಳಮ್ಮ,ವೀಣಾ, ಈರಮ್ಮ, ಯಲ್ಲಮ್ಮ ಉಮಾದೇವಿ, ವಿಜಯಲಕ್ಷ್ಮಿ,ಅಶ್ವಿನಿ,ರೇಣುಕಾ, ಚಂದ್ರಮ್ಮ,ಬಸಮ್ಮ, ಶಾಂತಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here