ವಿಠಲಾಪುರದಲ್ಲಿ ಜಾನಪದ ಕಲಾ ತಂಡದಿಂದ ಪ್ಲೋರೋಸಿಸ್ ಕಾಯಿಲೆ ಕುರಿತು ಬೀದಿನಾಟಕ ಪ್ರದರ್ಶನ,

0
48

ಸಂಡೂರು: ಫೆ: 05: ತಾಲೂಕಿನ ವಿಠಲಾಪುರ ಗ್ರಾಮದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಬಳ್ಳಾರಿ ಇವರ ಆದೇಶದ ಮೇರೆಗೆ ಧಾತ್ರಿ ರಂಗ ಸಂಸ್ಥೆಯ ಕಲಾತಂಡದ ಕಲಾವಿದರಿಂದ ಪ್ಲೋರೋಸಿಸ್ ಕಾಯಿಲೆ ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಕುರಿತು ಜಾಗೃತಿ ಬೀದಿನಾಟಕ ಕಾರ್ಯಕ್ರಮ ನಡೆಯಿತು,

ಬೀದಿನಾಟಕದಲ್ಲಿ ಕುಡಿಯುವ ನೀರಿನಲ್ಲಿ ಪ್ಲೂರೈಡ್ ಅಂಶ 2 ಪಿ.ಪಿ ಎಮ್ ಹೆಚ್ಚಾಗಿದ್ದರೆ ಕಾಣಿಸಿಕೊಳ್ಳುವ ಫ್ಲೋರೋಸಿಸ್ ಕಾಯಿಲೆ ಬಗ್ಗೆ ಮಾಹಿತಿ ನೀಡುತ್ತಾ, ಫ್ಲೂರೈಡ್ ಅಂಶ ಹೆಚ್ಚಾಗಿರುವ ನೀರು ಕುಡಿಯುವುದರಿಂದ ಕಂದು ಹಲ್ಲು ಕಾಣಿಸುವುದು, ಮೂಳೆಗಳಿಗೆ ಡೊಂಕಾಗುವುದು,ವಯಸ್ಸು ಹೆಚ್ಚಾದವರಂತೆ ಕಾಣುವುದು ಇಂತಹ ಲಕ್ಷಣಗಳು ಕಾಣಿಸುವವು, ಪ್ಲೋರೋಸಿಸ್ ತಡೆಯಲು ಕುಡಿಯುವ ನೀರಿಗೆ ಉಪ ಕ್ರಮ ಕೈಗೊಂಡು, ನಂತರ ಕುಡಿಯಲು ಸರಬರಾಜು ಮಾಡಬೇಕು ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಕಡೆಯಿಂದ ಕ್ರಮ ಕೈಗೊಳ್ಳುತ್ತಾರೆ ಎಂಬ ಮಾಹಿತಿಯನ್ನು ಜನರಿಗೆ ಜಾಗೃತಿ ಮೂಲಕ ಕಲಾವಿದರು ತಿಳಿಸಿದರು,

ಈ ಸಂದರ್ಭದಲ್ಲಿ ಕಲಾವಿದರಾದ ಮಂಜು ಸಿರಿಗೇರಿ,ಮಣಿಕಂಠ ಸಿರಿಗೇರಿ,ವಿಜಯ ಕುಮಾರ್,ಸುಮಿತ್ರಾ ಮಾನ್ವಿ,ನಿಕಿಲ್ ಧಾರವಾಡ,ಪ್ರಶಾಂತ್ ಗಮಗಾವತಿ, ಶಾಲೆಯ ಮಕ್ಕಳು ಗ್ರಾಮದ ಸಮಸ್ತ ನಾಗರಿಕರು ಶಿಕ್ಷಕರು ಮತ್ತು ಆರೋಗ್ಯ ಸುರಕ್ಷಾಧಿಕಾರಿ ನಾಗವೇಣಿ, ಆಶಾ ಕಾರ್ಯಕರ್ತರಾದ ಈರಮ್ಮ,ಕಮಲಾ, ಸುನಿತಾ,ಮೀನಾಕ್ಷಿ,ಪದ್ಮಾವತಿ,ಯಶೋಧ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here