ಕುಟುಂಬ ಕಲ್ಯಾಣ ವಿಧಾನಗಳನ್ನು ಅರಿಯಿರಿ, ಕುಟುಂಬ ನಿಯಂತ್ರಿಸಿ ಜನಸಂಖ್ಯಾ ಸ್ಥಿರತೆ ಕಾಪಾಡೋಣ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
186

ಸಂಡೂರು:ಜು:01:-ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೆ ಅಂಗನವಾಡಿ ಕೇಂದ್ರದಲ್ಲಿ “ಸಮುದಾಯ ಜಾಗೃತಿಕರಣ ಪಾಕ್ಷಿಕ” ಅಂಗವಾಗಿ ಮಕ್ಕಳ ತಾಯಂದಿರು ಮತ್ತು ಗರ್ಭಿಣಿ ಮಹಿಳೆಯರಿಗೆ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳ ಕುರಿತು ಅರಿವು ಮೂಡಿಸಲಾಯಿತು, ಕಾಪರ್-ಟಿ, ಮಾಲಾ-ಎನ್, ಛಾಯ,ಅಂತರ ಇನ್ ಜೆಕ್ಷನ್‌, ಮತ್ತು ಕಾಂಡೋಮ್ ಗಳ ಕುರಿತು ಮಾಹಿತಿನ್ನು ನೀಡಲಾಯಿತು,

ಮಕ್ಕಳ ನಡುವಿನ ಅಂತರತೆ ಇದ್ದರೆ ತಾಯಿ ಮತ್ತು ಮಗು ಇಬ್ಬರ ಆರೋಗ್ಯವೂ ಸುಧಾರಣೆ ಇರುತ್ತದೆ, ಮೂರು ವರ್ಷದ ನಂತರ ಮತ್ತೊಂದು ಮಗುವಾದ ನಂತರ ಶಾಶ್ವತ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡು ಕುಟುಂಬ ನಿಯಂತ್ರಿಸ ಬೇಕಿದೆ, ಜನಸಂಖ್ಯಾ ಸ್ಥಿರತೆ ಕಾಪಾಡ ಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ಸುಮಾ, ಲಲಿತಮ್ಮ,ರಾಧ,ಚಿನ್ನೇಶ್ವರಿ,ಶಶಿರೇಖಾ,ಸರೋಜಮ್ಮ,ಕಂಟೆಮ್ಮ,ಭವಾನಿ,ನಯನಾ,ಸವಿತಾ,ಕಾಂಚನಾ,ಅನುಷಾ ಪಾಂಡೆ,ಅಂಜಲಿದೇವಿ,ಕೊಟ್ರಮ್ಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here