ಇಸ್ರೋ ಯಶಸ್ವಿಗೆ ಬೈಕ್ ರ್ಯಾಲಿ ನಡೆಸಿ ಸಂಭ್ರಮಾಚರಣೆ ಮೆರೆದ ಕೊಟ್ಟೂರಿನ ಯುವ ಕಣ್ಮಣಿಗಳು

0
335

ಕೊಟ್ಟೂರು ಪಟ್ಟಣದ ದೇಶ ಪ್ರೇಮ ಮೆರೆದ ಯುವಕರು ಪ್ರಮುಖ ರಸ್ತೆ ಮಾರ್ಗವಾಗಿ ಬೈಕ್ ರ್ಯಾಲಿ ಮಾಡುವ ಮೂಲಕ ಚಂದ್ರಯಾನ-3 ಯಶಸ್ವಿಗೊಳಿಸಿದ ಭಾರತದ ಹೆಮ್ಮೆಯ ಇಸ್ರೋಗೆ ಭಾರತ ಭಾವುಟ ಎತ್ತಿ ಹಿಡಿದು ನಮ್ಮ ಇಸ್ರೋ ನಮ್ಮ ಹೆಮ್ಮೆ ಎಂದು ಘೋಷಣೆ ಕೂಗುತ್ತ ಅಭಿನಂದನೆ ಸಲ್ಲಿಸಿ ಸಂತಸಪಟ್ಟರು

ಚಂದ್ರಯಾನ -3 ಯಶಸ್ವಿಗೆ ಕಾರಣವಾದ ನಮ್ಮ ದೇಶದ ಹೆಮ್ಮೆ ಇಸ್ರೋ ಸಾಧನೆ ನೋಡಿ ಅನ್ಯ ದೇಶಗಳು ಭಾರತ ದೇಶವನ್ನು ಕೊಂಡಾಡುತ್ತಿವೆ ನಮ್ಮ ದೇಶ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಕ್ರಂ ರವರು ಹೇಳಿದರು.

ಇಸ್ರೋ ಮಾಡಿರುವ ಈ ಅತ್ಯುನ್ನತ ಸಾಧನೆಯಲ್ಲಿ ನಮ್ಮಕೊಟ್ಟೂರಿನ ನಿವಾಸಿಯಾದ ಡಾ.ಬಿ.ಹೆಚ್.ಎಂ. ದಾರುಕೇಶ್ ರವರು ನೌಕೆಯ ಸಂದೇಶವಾಹಕದ ರೂವಾರಿಯಾಗಿ ಭಾಗಿಯಾಗಿರುವುದು ನಮ್ಮ ಊರಿಗೆ ತಂದಂತಹ ದೊಡ್ಡ ಕೀರ್ತಿ ಎಂದು ಹೇಳಲು ಹೆಮ್ಮೆಯ ವಿಷಯವಾಗಿದೆ ಎಂದು ಡಾ. ರಾಕೇಶ್ ರವರು ಎಂದರು.
ಈ ಸಮಯದಲ್ಲಿ ರಾಜಣ್ಣ, ಸಂತೋಷ್, ಪ್ರವೀಣ್, ಕಲ್ಲೇಶ್, ಬಿ. ವಿಕಾಸ್, ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here