ಶಾಸಕ ನಾಗೇಂದ್ರರ “ಕೈ” ಹಿಡಿದ ಪ್ಯಾಸೆಂಜರ್ ಆಟೋ ಚಾಲಕರು

0
188

ಬಳ್ಳಾರಿ ಮಾ.24 ರಂದು: ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಕಚೇರಿಗೆ ಆಗಮಿಸಿದ ಮೋಕಾ ಬಿಜೆಪಿ ಪಕ್ಷದ 50 ಪ್ಯಾಸೆಂಜರ್ ಆಟೋ ಚಾಲಕರು ಹಾಗೂ ನೂರಾರು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಕಚೇರಿಯಲ್ಲಿ ಸಮ್ಮುಖದಲ್ಲಿ ಬಿಜೆಪಿ ಪಕ್ಷದ 50 ಪ್ಯಾಸೆಂಜರ್ ಆಟೋ ಚಾಲಕರು ಹಾಗೂ ನೂರಾರು ಬಿಜೆಪಿ ಪಕ್ಷದ ಮುಖಂಡರಾದ ಪಿ. ಪಾಷಾ, ಇಸ್ಮಾಯಿಲ್, ಶರ್ಮಸ್, ಮುನೀರ್ ಬಾಷಾ, ಅಬ್ಬಾಸ್, ಚಂದು, ಬಶೀರ್, ಅಸ್ಲಂ, ಥೋಸಿಫ್, ಮಹೇಶ್, ಧನಂಜಯ್, ಸಿದ್ದ, ನಾಯ್ಕ, ಸೀನಾ, ಅಮೀದ್, ಪವನ್, ವೀರೇಶ್, ಜೀಲಾನ್, ಅಲ್ತಾಫ್, ಅಬ್ದುಲ್, ರಾಮಾಂಜಿನಿ, ನಾಯ್ಕ, ಮಲ್ಲಿ, ಮಾರಶಾ, ಮನೋಜ್, ಸಿದ್ದು, ಹೊನ್ನರ್ ಸಾಬ್, ಪರಮೇಶ್, ಆದಮ್, ನೂರ್ ಬಾಷಾ, ಸಾಯಿ, ಮಹೇಂದ್ರ, ಗೌರವ, ಶಾಫಿ, ರಮೇಶ್, ಯುವರಾಜ್, ಸಿದ್ದಲಿಂಗನಗೌಡ, ಪಾಪು ಸಾಬ್, ಅಸ್ಲಂ, ದಾದು, ಅನ್ವರ್, ರೆಡ್ಡಿ, ಮೊಹಮ್ಮದ್ ರಫೀಕ್, ನಾಗರಾಜ ಗೌಡ, ಶೇಕ್ಷಾವಲಿ, ಸೀಟ್, ರಾಮು, ರಂಜಾನ್ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರಿಗೆ ಬಿ.ನಾಗೇಂದ್ರ ಅವರು ಕಾಂಗ್ರೆಸ್‌ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡು.

ನಂತರ ಬಿ.ನಾಗೇಂದ್ರ ಅವರು ಮಾತನಾಡಿ ಆಟೋ ಚಾಲಕರು ನಾಗರಿಕರ ಸೇವೆಯಲ್ಲಿ ಹಗಲಿರುಳು ದುಡಿಯುವ ಮೂಲಕ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುತ್ತಿದ್ದಾರೆ. ಮಾನವೀಯತೆಗೆ ಹೆಚ್ಚಿನ ಒತ್ತು ಕೊಡುತ್ತಾ ಜನತೆಗೆ ಸೂಕ್ತ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರ ಕಾರ್ಯ ಶ್ಲಾಘನೀಯ. ಸ್ವಾವಲಂಬಿ ಮತ್ತು ಸಮಾಜಮುಖಿ ಸೇವೆಯಲ್ಲಿ ಪ್ಯಾಸೆಂಜರ್ ಆಟೋ ಸಾರಥಿಗಳ ಪಾತ್ರ ಅನನ್ಯ. ಸಂಚಾರ ಸಹಕಾರವು ಸಾರ್ವಜನಿಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಸೂಕ್ತವಾದ ಪ್ರತಿಫಲವನ್ನು ಪಡೆದು ಸಾರ್ವಜನಿಕರಿಗೆ ಉಪಯುಕ್ತವಾಗುವ ಕಾರ್ಯಗಳನ್ನು ನಡೆಸುವುದೇ ನೈಜವಾದ ಸೇವಾ ಕಾರ್ಯ ಎಂದರು. ಪ್ಯಾಸೆಂಜರ್ ಆಟೋ ಚಾಲಕರಿಗೆ ಇನ್ಸೂರೆನ್ಸ್‌, ಆರೋಗ್ಯ ವಿಮೆಯನ್ನು ಮಾಡಿಸಿ, ಯಾಕೆಂದರೆ ಆಫಘಾತ ಸಂದರ್ಭದಲ್ಲಿ ನಿಮ್ಮನ್ನು ನಂಬಿಕೊಂಡು ಆಟೋದಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ವಿಮೆ ನೆರವಾಗುತ್ತದೆ. ಎಲ್ಲ ಚಾಲಕರ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿ, ಅವರ ಹಿತ ಕಾಯಲು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ ಪಕ್ಷದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸೇರ್ಪಡೆಯಾಗಿದ್ದಾರೆ. ಎಲ್ಲಾ ಕಾರ್ಯಕರ್ತರು ಮುಂಬರುವ ದಿನಗಳಲ್ಲಿ ಪಕ್ಷವನ್ನು ವಿಜಯದತ್ತ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಪಕ್ಷದ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಗ್ರಾಮೀಣ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಾ ಬಕಷ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಣ್ಣಾ ನಾಗರಾಜ್, ವರಾಲು ಸೀನಾ, ಸಿಂಧುವಾಳ್ ಗಾದಿಲಿಂಗನಗೌಡ, ಅಕ್ಬರ್, ಗುಜರಿ ಬಸವರಾಜ್, ಗುಮ್ಮನೂರು ಜಗನ್ನಾಥ್, ಕೆ.ಹೊನ್ನಪ್ಪ, ಬೆಣಕಲ್ ಬಸವರಾಜ್ ಗೌಡ, ಪರಶುರಾಮುಡು, ಯರ್ರಗುಡಿ ಮುದಿ ಮಲ್ಲಯ್ಯ, ಗೋನಾಳ್ ನಾಗಭೂಷಣ ಗೌಡ, ಶ್ರೀನಾಥ್, ಬಿ.ದುರುಗಣ್ಣ, ಎ.ವಿ ಜೆರಾಲ್ಡ್ ಚಿನ್ನ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here