ವಡ್ಡು ಗ್ರಾಪಂನಲ್ಲಿ ಜಾಗತಿಕ ಕೈತೊಳೆಯುವ ದಿನ ಆಚರಣೆ

0
521

ಸಂಡೂರು:ಆ:15:-ತಾಲೂಕಿನ ವಡ್ಡು ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾದ ಜಾಗತಿಕ ಕೈತೊಳೆಯುವ ದಿನ ಆಚರಿಸಲಾಯಿತು, ಕಾರ್ಯಕ್ರಮ ಉದ್ದೇಶಿಸಿ ಕಾರ್ಯದರ್ಶಿ ಜುಬೇರ್ ಅಹಮದ್ ಮಾತನಾಡಿ ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೈತೊಳೆಯುವ ದಿನದ ಅಭಿಯಾನವನ್ನು ಆಚರಣೆ ಮಾಡಲಾಗಿದೆ, ಕೈತೊಳೆಯುವುದರಿಂದ ಜನರು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸ್ವಚ್ಛವಾಗಿ ಕೈತೊಳೆಯುವುದರಿಂದ ಹಲವಾರು ಕಾಯಿಲೆಗಳನ್ನು ತಡೆಯಬಹುದು, ಕೋವಿಡ್ ನಂತಹ ಮಾರಕ ಕಾಯಿಲೆ ಜಗತ್ತಿಗೆ ವ್ಯಾಪಿಸಿದಾಗ ಇಡೀ ಜಗತ್ತೆ ಕೈತೊಳೆಯುವ ಅಥವಾ ಸ್ಯಾನಿಟೈಜ್ ಮಾಡಿಕೊಳ್ಳುವ ಅಭ್ಯಾಸದಲ್ಲಿ ತೊಡಗಿಕೊಂಡಿತು, ಕೋವಿಡ್ ಅಲ್ಲದೆ, ಇತರೆ ಬೇರೆ ಕಾಯಿಲೆಯ ಬ್ಯಾಕ್ಟೀರಿಯ ಮತ್ತು ವೈರಸ್ ಹಾಗೂ ಲಾಡಿ, ಕೊಕ್ಕೆ,ಜಂತುಹುಳುಗಳು ಕೈತೊಳೆಯುವುದರಿಂದ ನಮ್ಮ ದೇಹ ಸೇರುವುದನ್ನು ತಪ್ಪಿಸುತ್ತವೆ,
ಶೌಚಾಲಯಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮುಂಚೆ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಕೈತೊಳೆಯುವ ಸಮಯದಲ್ಲಿ ಸರ್ಕಾರ ನಿಗದಿ ಮಾಡಿದ ಆರು ಸ್ಟೆಪ್ ಗಳನ್ನು ಕಡ್ಡಾಯವಾಗಿ ಅನುಸರಿಸ ಬೇಕು ಎಂದು ತಿಳಿಸಿದರು,
ನಂತರ ಆಶಾ ಕಾರ್ಯಕರ್ತೆ ಶಿವಲೀಲ ಅವರು ಆರು ವಿಧಾನದ ಸ್ವಚ್ಚ ಕೈತೊಳೆಯುವ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು,

ಈ ಸಂದರ್ಭದಲ್ಲಿ ವಡ್ಡು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಜುಬೇರ್ ಅಹಮದ್, ನಾಗರಾಜ್ ಆಚಾರ್, ಬಷೀರ್ ಸಾಬ್, ಭಾರತಿ ವೈಶ್ಯ ಸಂಘದ ಸದಸ್ಯರಾದ ಕುಸುಮಾ, ಗೌರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಬಸವರಾಜ್, ಆಶಾ ಕಾರ್ಯಕರ್ತೆ ಶಿವ ಲೀಲಾ, ಭಾರತಿ, ಲಕ್ಷ್ಮಿ, ಫಾತಿಮಾ ಬೇಗಂ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here