ಲೋಕಾಯುಕ್ತರಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ/ಜನ ಸಂಪರ್ಕ ಸಭೆ

0
58

ಬಳ್ಳಾರಿ,ಜು.04: ಬಳ್ಳಾರಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕೆ.ರಾಮರಾವ್ ಮತ್ತು ಪೊಲೀಸ್ ನಿರೀಕ್ಷಕರಾದ ಸಂಗಮೇಶ್, ಮಹಮ್ಮದ್ ರಫಿ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಂಡೂರು ಮತ್ತು ಸಿರುಗುಪ್ಪ ತಾಲೂಕು ಕೇಂದ್ರಗಳಲ್ಲಿ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದಿರುವ ಕುರಿತು ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ/ಜನ ಸಂಪರ್ಕ ಸಭೆ ಜುಲೈ 06 ರಿಂದ 25 ರವರೆಗೆ ನಡೆಸಲಾಗುತ್ತಿದೆ.

ಜುಲೈ 06 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 02 ರವರೆಗೆ ಕಂಪ್ಲಿ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಮತ್ತು ಜುಲೈ 12 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 02 ರವರೆಗೆ ಸಂಡೂರು ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಮತ್ತು ಜುಲೈ 18 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 02 ರವರೆಗೆ ಬಳ್ಳಾರಿ ತಹಶೀಲ್ದಾರರ ಕಚೇರಿ ಸಭಾಂಗಣ, ಜುಲೈ 20 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 02 ರವರೆಗೆ ಕುರುಗೋಡು ತಹಶೀಲ್ದಾರರ ಕಚೇರಿ ಸಭಾಂಗಣ ಹಾಗೂ ಜುಲೈ 25 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಸಿರುಗುಪ್ಪದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ/ಜನ ಸಂಪರ್ಕ ಸಭೆ ನಡೆಯಲಿದೆ.

ಕುಂದು ಕೊರತೆಗಳಿರುವ ಸಾರ್ವಜನಿಕರು ನಿಗದಿತ ದಿನ ಮತ್ತು ಸ್ಥಳದಲ್ಲಿ ತಮ್ಮ ದೂರು ಅರ್ಜಿಗಳನ್ನು ನೀಡಬಹುದು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here