ಭಾರತ ದೇಶದ ಸಂವಿಧಾನ ಪ್ರಜಾಪ್ರಭುತ್ವದ ಏಳಿಗೆಗೆ ಮಹತ್ವದ ಸಂಕೇತ : ತಾಲೂಕು ದಂಡಾಧಿಕಾರಿ ಎಂ ಕುಮಾರ್ ಸ್ವಾಮಿ

0
130

ಕೊಟ್ಟೂರು ಪಟ್ಟಣದ ತಾಲೂಕು ಕಛೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ನೀತಿ ಸಂಹಿತೆ ನಿರ್ದೇಶನದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ 132 ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ದಂಡಾಧಿಕಾರಿ ಎಂ. ಕುಮಾರ್ ಸ್ವಾಮಿ ಯವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದಿಂದ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ಅತ್ಯಂತ ಮಹತ್ವದ ಪಾತ್ರವಹಿಸಿದೆ ವಿಶ್ವ ಮಟ್ಟದಲ್ಲಿ ಭಾರತ ದೇಶ ಉನ್ನತ ಹೆಸರು ಪಡೆದಿದೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ದೊಡ್ಡ ಸಂವಿಧಾನದಿಂದ ಮಾತ್ರ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮಂಜುನಾಥ್ ವಕೀಲರು ದೇಶದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲು ಇರುಳು ಶ್ರಮಿಸಿದ ಹಾಗೂ ಸಮಾಜದ ಬಲ ವರ್ಧನೆಗೆ ದಿಟ್ಟತನದಿಂದ ಹೋರಾಡಿದ ಮಹಾನ್ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತದ ಆಧಾರದ ಮೇಲೆ ಪ್ರತಿಯೊಬ್ಬ ನಾಗರಿಕನು ಜೀವನ ನಡೆಸಬೇಕು ಆಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು

ಅಂಬೇಡ್ಕರ್ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಒಬ್ಬ ಸಮಾಜ ಸುಧಾರಕರಾಗಿ ಭಾರತದ ಹಿಂದುಳಿದ ಜನ ಸಮೂಹದ ಪ್ರಗತಿಗೆ ಅವಿರತವಾಗಿ ಶ್ರಮಿಸಿರುವ ಮಹಾನ್ ವ್ಯಕ್ತಿ.ಮಹಿಳೆಯರು ಪುರುಷರಂತೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಬೇಕು ಗೌರವ ಮತ್ತು ಘನತೆಯಿಂದ ಪರಿಗಣಿಸಬೇಕೆಂದು ನಂಬಿದ್ದಂತಹ ವ್ಯಕ್ತಿ ಮತ್ತು ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಂತಹ ಮಹಾನ್ ವ್ಯಕ್ತಿ ಎಂದು ತಿಳಿಸಿದರು ಹಾಗೇ ಅಂಬೇಡ್ಕರ್ ರವರಿಗೆ ಎಷ್ಟೇ ಕಿರುಕುಳ ಅವಮಾನ ಅನುಭವಿಸಿದರೂ ಓದುವುದನ್ನು ನಿಲ್ಲಿಸದೇ ಓದಿ ತಮ್ಮ ಕಾಲ ಮೇಲೆ ನಿಂತು ತಮ್ಮ ಸಮುದಾಯಕ್ಕೆ ಹಾಗೂ ಭಾರತದಲ್ಲಿ ನೊಂದಿರುವಂತಹ ಶೋಷಣೆಗೆ ಒಳಗಾಗಿರುವ ಪ್ರತಿ ಸಮುದಾಯಕ್ಕೂ ಏನಾದರು ಒಳಿತನ್ನು ಮಾಡಬೇಕು ಹಾಗೂ ಅಸ್ಪೃಶ್ಯತೆಯನ್ನು ಬುಡಸಮೇತ ಕಿತ್ತು ಹಾಕಬೇಕೆಂದು ಪಣತೊಟ್ಟು ಹೋರಾಡಿದ ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್
ಅವರ ತತ್ವ ಸಿದ್ಧಾಂತವು ಅಸ್ಪೃಶ್ಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ, ಬ್ರಾತೃತ್ವ, ಸೌಹಾರ್ದತೆ ಬಂದಾಗ ಮಾತ್ರ ಈ ದೇಶದ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು ಎಂದು ವಿಜಯನಗರ ಡಿಎಸ್ಎಸ್ ಜಿಲ್ಲಾಧ್ಯಕ್ಷ ಬಿ.ಮರಿಸ್ವಾಮಿ ಯವರು ಹೇಳಿದರು

ದಲಿತ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ರವರು ಮಾತನಾಡಿ ಅಂಬೇಡ್ಕರ್ ರವರ ವಿದ್ಯಾಭ್ಯಾಸಕ್ಕೆ ಮೇಲ್ಜಾತಿಯವರು ಎಷ್ಟೇ ಅಪಮಾನ ಕೊಟ್ಟರು ಛಲ ಬಿಡದೆ ಅವಮಾನ ಸಹಿಸಿ ಇಡೀ ವಿಶ್ವವೇ ಮೆಚ್ಚುವಂತಹ ವ್ಯಕ್ತಿಯಾಗಿ ಬೆಳೆದು ಇಂದು ಎಲ್ಲರು ಆರಾಧಿಸುವಂತಹ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೆ ಶಾಲೆಯಲ್ಲಿ ಓದುತ್ತಿರುವಾಗ ನೀರು ಕುಡಿಯಲು ಎತ್ತರದಿಂದ ಸುರಿದ ನೀರನ್ನು ಕೈಯಲ್ಲಿ ಬೊಗಸೆ ಹಿಡಿದು ಕುಡಿಬೇಕಿತ್ತು ಒಂದು ವೇಳೆ ಆ ದಿನ ಶಾಲೆಯ ಪಿವೋನ್ ರಜೆ ಇದ್ದರೆ ಅವರಿಗೆ ಕುಡಿಯಲು ನೀರು ಇರುತ್ತಿರಲಿಲ್ಲ. ಅಂಬೇಡ್ಕರ್ ರವರು ಅನುಭವಿಸಿದಂತಹ ಒಂದು ಸನ್ನಿವೇಶವನ್ನು ನೆನಪಿಸಿಕೊಂಡು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ, ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ,ತಾಲೂಕು ಸಿಬ್ಬಂದಿ ವರ್ಗ . ಡಾ. ಬದ್ಯನಾಯ್ಕ, ಕೆಇಬಿ ಚೇತನ್ ಕುಮಾರ್. ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ವೀರಣ್ಣ, ಪಿಎಸ್ಐ ವೆಂಕಟೇಶ್. ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಸ್ವಾಮಿ. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬದ್ದಿ ದುರುಗೇಶ್, ವಕೀಲ ಹನುಮಂತಪ್ಪ, ಬಣಕಾರ್ ಶಿವರಾಜ್, ಟಿ ಸುರೇಶ್ . ಬಿ. ಪರಶುರಾಮ್. ಎಲ್ ಕುಬೇರಪ್ಪ, ಆರ್ ಅಂಬರೀಶ್. ತಿಮ್ಲಾಪುರ ಮೈಲಪ್ಪ, ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಫಕ್ಕಿರಪ್ಪ ನಿರೂಪಿಸಿ ವಂದಿಸಿದರು. ಮುಂತಾದ ಸಿಬ್ಬಂದಿ ವರ್ಗದವರು ಇದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here