“ಓದುವ ಬೆಳಕು ಮತ್ತು ಸಣ್ಣ ಕಥೆ ಅಭಿಯಾನ”

0
96

ಕೊಟ್ಟೂರು:ಜು:01:-ಕೆ ಅಯ್ಯನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 1-7-2023 ರಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ
ಕೆ ಅಯ್ಯನಹಳ್ಳಿಯಲ್ಲಿ “ಓದುವ ಬೆಳಕು” ಅಂಗವಾಗಿ “ಸಣ್ಣ ಕಥೆ ಬರೆಸುವ” ಅಭಿಯಾನ ಕಾರ್ಯಕ್ರಮವನ್ನು ಶ್ರೀ ಎಸ್ ಎಂ ಸುರೇಶ್ ಮುಖ್ಯ ಗುರುಗಳು ಉದ್ಘಾಟಿಸಿದರು. ಮಕ್ಕಳು ಕಥೆ ಬರೆಯುವುದನ್ನು ಬಾಲ್ಯದಲ್ಲಿಯೇ ಅಭ್ಯಾಸ ಮಾಡಿಕೊಂಡರೆ ನಿಮ್ಮಲ್ಲಿ ಯೋಚನಾ ಶಕ್ತಿ ಹೆಚ್ಚುತ್ತದೆ ಎಂದು ಉದ್ಘಾಟನಾ ನುಡಿಯನ್ನು ನುಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಜುಲೈ ಒಂದರಿಂದ ಜುಲೈ 31 ರವರೆಗೆ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸಣ್ಣ ಕಥೆಯನ್ನು ಬರೆಯಲು ಸೂಚಿಸಿದರು,

ಯಾವುದೇ ಒಂದು ಕಥೆಯಲ್ಲಿ ಕನಿಷ್ಠ 250 ಪದಗಳು 90 ನಿಮಿಷದಲ್ಲಿ ಬರೆದು ಮುಗಿಸಬೇಕು ಮಕ್ಕಳಿಗೆ ತಮ್ಮ ಸ್ವಂತ ಕಥೆಯನ್ನು ಬರೆಯಲು ಸಹಾಯ ಮಾಡಲು ಮಾದರಿ ಕತೆಯನ್ನು ಎಲ್ಲ ಮಕ್ಕಳೊಂದಿಗೆ ಚರ್ಚಿಸಿ ಮಾರ್ಗದರ್ಶನದ ಬಗ್ಗೆ ಶ್ರೀ ಮುರುಗೇಶ್ ಗೌಡ ಗ್ರಂಥಾಲಯ ಮೇಲ್ವಿಚಾರಕರು ತಿಳಿಸಿಕೊಟ್ಟರು.

ಮಕ್ಕಳು ಬರೆಯುವ ಸಣ್ಣಕಥೆಯು ಗ್ರಂಥಾಲಯದ ಕಥೆ, ಪ್ರಾಣಿ -ಪಕ್ಷಿಗಳ ಕಥೆ, ನೀತಿ ಕಥೆ , ಬಾಲ್ಯದ ಕಥೆ , ಸ್ನೇಹಿತರ , ನಿಮ್ಮ ಊರಿನ ,ನಿಮ್ಮ ನೆಚ್ಚಿನ ನಗರ , ಸಾಧಕರು, ಸಮಾಜ ಸುಧಾರಕರು , ವಸ್ತುಗಳ, ಪರಿಸರ ಇನ್ನು ಮುಂತಾದವುಗಳ ಬಗ್ಗೆ ಸ್ವಂತ ಕಥೆಯನ್ನು ಬರೆಯಲು ಎಲ್ಲಾ ಮಕ್ಕಳು ಭಾಗವಹಿಸಬೇಕು ಎಂದು “ಮಲ್ಲಪ್ಪ ಗುಡ್ಲಾನೂರ್” ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು .

ಕಥೆ ಬರೆಯಲು ಮಕ್ಕಳು ಗ್ರಂಥಾಲಯದಲ್ಲಿ ಪತ್ರಿಕೆ , ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸದಿಂದ ಸ್ವಂತ ಕಥೆ ಬರೆಯಲು ಸಾಧ್ಯವಾಗುತ್ತದೆ ಎಂದು
ಎಲ್ ಎಂ ಕೊಟ್ರಮ್ಮ ಶಿಕ್ಷಕಿ ಮಾತನಾಡಿದರು .

ಮಧುಶ್ರೀ ,ಕಾವೇರಿ ,ಸ್ವರ್ಣಗೌರಿ ,ಜ್ಯೋತಿ ,ಪ್ರಾರ್ಥಿಸಿರು.ಎಚ್ ಎಂ ಸುಮಂಗಳ. ಶಿಕ್ಷಕಿ ಸ್ವಾಗತಿಸಿದರು. ಸುಧಾ.ಎಂ ಶಿಕ್ಷಕಿ ವಂದಿಸಿದರು. ಈ ಸಂದರ್ಭದಲ್ಲಿ ಉಮಾ ಸಿ, ಎಂ ಗಂಗಮ್ಮ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here