ಬಳ್ಳಾರಿಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯಿಂದ ಉಚಿತ ಸೀವೆಂಗ್ ಮಶೀನ್ ತರಬೇತಿ ಕಾರ್ಯಕ್ರಮ

0
110

ಬಳ್ಳಾರಿ,ಮಾ.30 : ಭಾರತೀಯ ರೆಡ್‍ಕ್ರಾಸ್ ವತಿಯಿಂದ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್‍ನ ಕಚೇರಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಮೃತಪಟ್ಟ ಪುರುಷರ ಹೆಂಡತಿ ಇವರಿಗೆ ಸೀವೆಂಗ್ ಮಶೀನ್ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕದ ಉಪ ಸಭಾಪತಿ ಡಾ.ಎಸ್.ಜೆ.ವಿ.ಮಹಿಪಾಳ್ ಅವರು ಮಾತನಾಡಿ, ಸೀವೆಂಗ್ ಮಶೀನ್ ತರಬೇತಿಯನ್ನು 40 ದಿನಗಳ ಕಾಲ ನೀಡಲಾಗುತ್ತಿದ್ದು, ತರಬೇತಿಯ ಸದುಪಯೋಗವನ್ನು ಪ್ರತಿಯೊಬ್ಬರು ಸದುಪಯೋಗಪಡೆದುಕೊಳ್ಳಬೇಕು ಎಂದರು.
ತರಬೇತಿ ಪಡೆದ ನಂತರದಲ್ಲಿ ಫಲಾನುಭವಿಗಳಿಗೆ ಸಿವಿಂಗ್ ಮಶೀನ್ ವಿತರಿಸಲಾಗುವುದು ಎಂದು ಹೇಳಿದರು.
ಮಹಿಳೆಯರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು,ಅವುಗಳ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ಎಸ್.ಡಿ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿಗಳಾದ ವಿಜಯ ಕುಮಾರ್, ಶಿರಿಡಿ ಸಾಯಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಗೋಪಾಲಕೃಷ್ಣ, ಐ.ಆರ್.ಸಿ.ಎಸ್‍ನ ಖಜಾಂಚಿಗಳಾದ ಪೋಲಾ ರಾಧಾಕೃಷ್ಣ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್, ಶಿರಿಡಿ ಸಾಯಿ ಟ್ರಸ್ಟ್‍ನ ಸಲಹೆಗಾರರಾದ ಕಿಶೋರ್ ಮತ್ತು ಸುಮಾರು 30 ಜನ ಮಹಿಳಾ ತರಬೇತಿದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here