ಅಂಗಾಂಗ ದಾನ ಹೆಮ್ಮೆಯ ಕಾರ್ಯ, ಬನ್ನಿ ನೋಂದಣಿ ಮಾಡಿಸಿ: ಡಾ.ಗೋಪಾಲ್ ರಾವ್,

0
194

ಸಂಡೂರು: ನ: 27:ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ರಾಷ್ಟ್ರೀಯ ಅಂಗಾಂಗ ದಾನಿಗಳ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಮಾತನಾಡಿ ಅಂಗಾಂಗ ದಾನ ಮಹಾದಾನ,ನೇತ್ರದಾನ ಮತ್ತು ಇತರ ಅಂಗಾಂಗ ದಾನ ಮಾಡಲು ಎಲ್ಲರೂ ಮುಂದಾಗ ಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ನೇತ್ರದಾನ ಮತ್ತು ಇತರೆ ಅಂಗಾಂಗ ದಾನ ಮಾಡಿದ ಎಲ್ಲಾ ಮಹನೀಯರಿಗೆ ಅಭಿನಂದನೆಗಳು ಅರ್ಪಿಸುವ ಮಹಾ ಸುದಿನ, ಅಂಗಾಂಗ ವೈಫಲ್ಯದಿಂದ ಎಷ್ಟೋ ಜನರು ಸಾವಿಗೆ ತುತ್ತಾಗುವ ಸಂದರ್ಭದಲ್ಲಿ ಜೀವದಾನ ಮಾಡಿದ ಕೀರ್ತಿ ದಾನಿಗಳಿಗೆ ಸಲ್ಲುತ್ತದೆ, ಮರಣಾ ನಂತರವೂ ಸಾರ್ಥಕತೆಗೆ ಸಹಕಾರ ನೀಡಿದ ಕುಟುಂಬದ ಸದಸ್ಯರಿಗೂ ಅಭಿನಂದನೆಗಳು ತಿಳಿಸ ಬೇಕು, ಕಾರಣ ಕೆಲವರಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವ್ಯಕ್ತಿಗೆ ಮೆದುಳು ನಿಷ್ಕ್ರಿಯ ಗೊಂಡ ಸಮಯದಲ್ಲಿ, ವ್ಯಕ್ತಿ ಮರಣಾನಂತರ ಅವರ ಕುಟುಂಬದವರು ಅಂಗಾಂಗ ದಾನ ಮಾಡುವ ಮಹತ್ಕಾರ್ಯಕ್ಕೆ ಮುಂದಾಗುವುದು ಮಹತ್ತರ ಕಾರ್ಯವಾಗಿರುತ್ತದೆ, ಎಷ್ಟೋ ಜನರಿಗೆ ಕಿಡ್ನಿ ತೊಂದರೆಗಳಿದ್ದಾಗ ಅವರ ಕುಟುಂಬದ ಅರೋಗ್ಯದಿಂದ ಇದ್ದ ತಾಯಿಯೋ, ತಂದೆಯೋ, ಹೆಂಡತಿಯೋ,ಅಣ್ಣನೋ ತಮ್ಮ ಎರಡು ಕಿಡ್ನಿಗಳಲ್ಲಿ ಒಂದು ಕಿಡ್ನಿ ದಾನ ಮಾಡಿ ಬದುಕಿಸಿಕೊಂಡ ಎಷ್ಟೋ ಜನರನ್ನು ನೋಡಿದ್ದೇವೆ, ಈ ಎಲ್ಲಾ ಮಹನೀಯರ ಮಹತ್ಕಾರ್ಯ ನೆನೆದು ಅವರಿಗೆ ಅಭಿನಂದನೆಗಳು ಅರ್ಪಿಸುವುದು ಎಲ್ಲರ ಕರ್ತವ್ಯವಾಗಿದೆ,ಅವರಿಗೆ ಭಗವಂತ ಇನ್ನಷ್ಟು ಆರೋಗ್ಯವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ,

ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ನಂತರ ನೇತ್ರ ಮತ್ತು ಇತರೆ ಅಂಗಾಂಗ ದಾನ ಮಾಡಲು ದಾಖಲೆ ಮಟ್ಟದಲ್ಲಿ ಜನರು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಈ ಕೀರ್ತಿ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು, ಈ ಕಾರ್ಯಕ್ರಮದಲ್ಲಿ ತೋರಣಗಲ್ಲು ಗ್ರಾಮಸ್ಥರಾದ ಮಂಜುನಾಥ್, ದರೋಜಿ ರಮೇಶ್,ಜಿ ನಾಗರಾಜ್,ಶಿವಾರೆಡ್ಡಿ, ನಾಗರಾಜ,ರೋಜಾವತಿ ಸೇರಿ ಆರು ಜನರು ನೇತ್ರದಾನ ನೊಂದಣಿ ಮಾಡಿಕೊಂಡರು,

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ,ಬಸವರಾಜ, ದೇವರಾಜ್‌, ಚಂದ್ರಶೇಖರ್, ವೀರಾಂಜನೇಯ, ಅನುಮೇಶ್, ಪಾರ್ಮಸಿ ಅಧಿಕಾರಿ ಮಂಜುನಾಥ್, ಮಾರೇಶ್, ಸಿದ್ದೇಶ್,ರಾಂಬಾಬು,ಮಾಬು ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here