ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಗತ್ಯ ಸೇವೆಗಳ 36 ಮತದಾರರಿಂದ ಹಕ್ಕು ಚಲಾವಣೆ

0
25

ಬಳ್ಳಾರಿ,ಮೇ 02: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ಯ ಮತದಾನ ದಿನದಂದು ಗೈರು ಹಾಜರಾಗಬಹುದಾದ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ತಮ್ಮ ಮತವನ್ನು ಚಲಾಯಿಸಲು ಈ ಬಾರಿ ಚುನಾವಣಾ ಆಯೋಗವು ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಜಿಲ್ಲೆಯಲ್ಲಿ ಇಂತಹ ಅಗತ್ಯ ಸೇವೆಗಳ ಕ್ಷೇತ್ರದ 36 ಮತದಾರರು ಮೊದಲ ದಿನವಾದ ಮಂಗಳವಾರ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಜಿಲ್ಲೆಯ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗವು, ಮತದಾನ ಮಾಡಲು ವಿಶೇಷ ಅವಕಾಶ ಕಲ್ಪಿಸಿದೆ.
ಚುನಾವಣಾ ಆಯೋಗವು ಈ ಬಾರಿ ವಿದ್ಯುತ್ ಇಲಾಖೆ, ವಿದ್ಯುತ್ ಇಲಾಖೆ, ಬಿಎಸ್‍ಎನ್‍ಎಲ್, ರೈಲ್ವೇ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿ ಶಾಮಕ ಸೇವೆ, ಸಂಚಾರಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ನೌಕರರಿಗೆ ಮತದಾನ ಮಾಡಲು 12 ಡಿ ನಮೂನೆಯನ್ನು ವಿತರಿಸಲಾಗಿತ್ತು.
ಇಂತವರು ಮತ ಚಲಾಯಿಸಲು ಮೇ 02 ರಿಂದ 04 ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 09 ರಿಂದ ಸಂಜೆ 05 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ವ್ಯಾಪ್ತಿಯ ಒಟ್ಟು 207 ಮತದಾರರಿಗೆ 12 ಡಿ ನಮೂನೆಯಡಿ ಮತ ಚಲಾಯಿಸಲು ಸಮ್ಮತಿ ತಿಳಿಸಿದ್ದು, ಮೊದಲ ದಿನವಾದ ಮೇ 02 ರಂದು ಒಟ್ಟು 36 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಕ್ಷೇತ್ರವಾರು ವಿವರ ಇಂತಿದೆ:
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಮತದಾರರ ಪೈಕಿ 03 ಜನ ಮತ ಚಲಾಯಿಸಿದ್ದಾರೆ. 92-ಸಿರುಗುಪ್ಪ ಕ್ಷೇತ್ರದಲ್ಲಿ ಒಟ್ಟು 34 ಮತದಾರರ ಪೈಕಿ 08 ಮತದಾರರು, 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 59 ಮತದಾರರ ಪೈಕಿ 06 ಮತದಾರರು, 94-ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 77 ಮತದಾರರ ಪೈಕಿ 10 ಮತದಾರರು ಹಾಗೂ 95-ಸಂಡೂರು ಕ್ಷೇತ್ರದಲ್ಲಿ ಒಟ್ಟು 26 ಮತದಾರರ ಪೈಕಿ 09 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಅಗತ್ಯ ಸೇವೆಗಳ ನೌಕರರು ಮತ ಚಲಾಯಿಸಲು ಮೇ 04 ವರೆಗೆ ಕಾಲಾವಕಾಶ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here