ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜಿದ್ದಾಜಿದ್ದಿ ಕಣದಲ್ಲಿ ಪಿನಿಕ್ಸ್ ನಂತೆ ಎದ್ದು ಗೆದ್ದುಬಂದ ನೇಮಿರಾಜ್ ನಾಯ್ಕ್

0
421

ವಿಶೇಷ ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಈ ಭಾರಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ತ್ರಿಮೂರ್ತಿಗಳ ಜಿದ್ದಾ ಜಿದ್ದಿನಲ್ಲಿ ಪ್ರತಿ ಸ್ಪರ್ಧಿಯ ವಿರುದ್ಧ 1140 ಮತಗಳ ಹಂತರದಿಂದ ಗೆದ್ದು ಬೀಗಿದೆ ನೇಮಿರಾಜ್ ನಾಯ್ಕ್ ಗೆ ಪ್ರಾರಂಭದಿಂದಲು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಲ್ಲಿ ಗೊಂದಲವಿತ್ತು. ಹಾಲಿ ಶಾಸಕ ಭೀಮಾನಾಯ್ಕ ಗೆ ಕಾಂಗ್ರೆಸ್ ಟಿಕೆಟ್‌ ಬಿಚಿತವಾದ ನಂತರ ಕೊನೆಯ ಹಂತದಲ್ಲಿ ನೇಮಿರಾಜ್ ನಾಯ್ಕ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪಿತು.

ಬಿಜೆಪಿ ಟಿಕೆಟ್‌ನ್ನು, ಬಿ.ರಾಮಣ್ಣನವರಿಗೆ ನೀಡಿದ ನಂತರ ಕ್ಷೇತ್ರದ ಅಭಿಮಾನಿಗಳು ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿಯೇ ಕಣ್ಣೀರು ಸುರಿಸಿ, ನಂತರ ಕೊಟ್ಟೂರಿನ ಹಿರಿಯ ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ ಸಹಕಾರದಿ೦ದ ಕೊನೆಯ ಹಂತದಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ತೆಗೆದುಕೊಂಡು ಬಂದು ಕೆಲವೇ ಕೆಲವು ದಿನಗಳಲ್ಲಿ ಕ್ಷೇತ್ರದ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಜನಗಳ ಪ್ರೀತಿ ಮತ್ತು ವಿಶ್ವಾಸಗಳಿಸುವಲ್ಲಿ ಸಫಲರಾದರು.

ಹಣವಿದ್ದರಷ್ಟೇ ಚುನಾವಣೆ ಎನ್ನುವುದಕ್ಕೆ ಈ ರಾಜ್ಯದಲ್ಲಿ ಮಾದರಿಯಾದ ಹಗರಿಬೊಮ್ಮನಹಳ್ಳಿ ಕ್ಷೇತ್ರ, ಈ ಸಾರಿ ನೇಮಿರಾಜ ನಾಯ್ಕ್ ರವರಿಗೆ ಪ್ರತಿಯೊಂದು ಹಳ್ಳಿ, ಪಟ್ಟಣದಿಂದ ಸಣ್ಣವರಿಂದ ದೊಡ್ಡವರೆನ್ನದೇ ಕೈಲಾದಷ್ಟು ಹಣ ಸಹಾಯವನ್ನು ನೀಡಿರುವುದು ಇದೇ ಮೊದಲ ಭಾರಿಗೆ, ಇನ್ನೊಂದು ಕಡೆ ಈ ಭಾರಿಯೂ ಸಹ ನೇಮಿರಾಜ್ ನಾಯ್ಕ್, ನನ್ನು ಸೋಲಿಸಲೇ ಬೇಕೆಂದು ಕ್ಷೇತ್ರದಲ್ಲಿ ಅನೇಕರು ಪಣ ತೊಟ್ಟರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತಿದ್ದಾರೆ ಕ್ಷೇತ್ರದ ಜೆಡಿಎಸ್‌ ಮತದಾರರು, ಹಾಗೂ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಗೆದ್ದು 15 ವರ್ಷಗಳ ಉತ್ತಮವಾದ ಆಡಳಿತವನ್ನು ಕ್ಷೇತ್ರದುದ್ದಕ್ಕು ನೀಡಿದರು ಸಹ, ಎರಡನೇ ಅವಧಿಗೆ ಭೀಮನಾಯ್ಡ್ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅಲ್ಲಿಂದ ಎರಡು ಭಾರಿ ಬಿಜೆಪಿ ಪಕ್ಷ ಟಿಕೇಟ್ ಪಡೆದು ಎರಡು ಭಾರಿಯ ಸಹ ಸ್ವಲ್ಪ ಮತಗಳ ಹಂತರದಿಂದ ಸೋಲು ಅನುಭವಿಸಬೇಕಾಯಿತು, ಆದರೆ ಈ ಭಾರಿಯೂ ಸಹ ಬಿಜೆಪಿ ಟಿಕೆಟ್ ಸಿಗಬೇಕಾಯಿತು ಕಾರಣಂತರಗಳಿಂದ ಹಾಗೂ ಪಕ್ಷದಲ್ಲಿನ ಹೊಳ ಗೊಂದಲದಿಂದ ಕೊನೆಯ ಹಂತದಲ್ಲಿ ಟಿಕೆಟ್ ಬೇರೆಯವರ ಪಾಲಾಯಿತು,

ನಂತರ ಕೊನೆಯ ಹಂತದಲ್ಲಿ ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿದು ತ್ರಿಮೂರ್ತಿಗಳ ಜಿದ್ದಾ ಜಿದ್ದಿನಲ್ಲಿ ಈ ಬಾರಿ ಅನುಕಂಪದ ಜೊತೆಗೆ ಕ್ಷೇತ್ರದ ಜನಗಳ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿ ಈ ಬಾರಿ ಹೆಚ್ಚಿನ ಮತಗಳ ಹಂತರಿಂದ ಗೆದ್ದು ಬೀಗಿದರು. ಈ ಗೆಲುವು ನಿಜಕ್ಕೂ ಇದು ಜನಗಳ ಪ್ರೀತಿಯ ಗೆಲುವು ಎಂದರೂ ತಪ್ಪಾಗಲ್ಲ.

ಜನರೇ ದುಡ್ಡು ಕೊಟ್ಟು ಮತ ಹಾಕಿ ಗೆಲ್ಲಿಸಿದ್ದು ವಿಶೇಷ:
ಪ್ರತಿಯೊಂದು ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿದ ವ್ಯಕ್ತಿಯು ಸುಮಾರು ಕೋಟಿ ಗಟ್ಟಲೇ ಹಣವನ್ನು ಖರ್ಚು ಮಾಡಿ ಚುನಾವಣೆ ಮಾಡುವುದು ಸರ್ವೇ ಸಾಮಾನ್ಯ ಆದರೆ ಇದೇ ಮೊದಲ ಭಾರಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮತದಾರರು ನೇಮಿರಾಜ್ ನಾಯ್ಕಗೆ ಚುನಾವಣೆ
ಖರ್ಚಿಗೆ ಹಣವನ್ನು ನೀಡಿ ಈ ಬಾರಿ ಗೆಲ್ಲಿಸಿದ್ದು ವಿಶೇಷ ಕ್ಷೇತ್ರದ ಗೆಲುವನ್ನು ಸಂಭ್ರಮಿಸಿದ ಕಾರ್ಯಕತ್ರರು ಹಾಗೂ ಅಭಿಮಾನಿಗಳು ಎರಡು ಬಾರಿ ಸೋತರು ನೇಮಿರಾಜ್‌ `ನಮ್ ಜೊತೆ ಸದಾ ಬೆಂಬಲವಾಗಿ ನಿಂತ ಪ್ರತಿಯೊಂದು ಹಳೆಯ ಮತದಾರರು. ಮುಖಂಡರು. ಹಾಗೂ ಕಾರ್ಯಕರ್ತರು ಸ್ಮರಿಸಿದರು. ಈ ಭಾರಿ ಗೆಲುವನ್ನು ಸಂತಸದಿಂದ ಆಚರಿಸಿದರು

ಮುಂದಿನ 05 ವರ್ಷಗಳ ಅವಧಿಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿ, ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎನ್ನುವುದೊಂದೆ ಜನಗಳ ಆಶಯ.

ನೇಮಿರಾಜ್ ನಾಯ್ಕ್ ಗೆದ್ದೆ ಗೆಲ್ಲಿಸುವೆ ಎಂದು
ಹೇಳಿದ್ದ ಎಂ.ಎಂ.ಜೆ.ಹರ್ಷವರ್ಧನ್ ಮಾತು ನಿಜವಾಯ್ತು: ಈ ಹಿಂದಿನ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಎರಡು ಬಾರಿ ಗೆಲುವಿನಲ್ಲಿ ಈ ಭಾಗದಲ್ಲಿ ಎಂ.ಎಂ.ಜೆ. ಪಾತ್ರ ಬಹಳ ಮುಖ್ಯವಾಗಿತ್ತು ಎಂಬುವುದು ಕ್ಷೇತ್ರದ ಮತದಾರರಿಗೆ ಗೊತ್ತಿರುವ ವಿಷಯ, ಈ ಬಾರಿ ಎಂ.ಎಂ.ಜೆ.ಹರ್ಷವಧನರನ್ನು ದೂರ ಕಾಯ್ದುಕೊಂಡಿದ್ದೆ! ಭೀಮನಾಯ್ಕರಿಗೆ ಸೋಲಾಯಿತು. ಎಂದು ಕ್ಷೇತ್ರದ ಮತದಾರರು ಅಭಿಪ್ರಾಯಪಡುತ್ತಿದ್ದಾರೆ. ನಂತರ ನೇಮಿರಾಜ್‌ ನಾಯ್ಕರಿಗೆ ಸಾಥ್ ನೀಡಿ ಬಿಜೆಪಿ ಟಿಕೇಟ್‌ ಕೈ ತಪ್ಪಿದ್ದರೂ ಸಹ ಜೆಡಿಎಸ್‌ ಟಿಕೇಟ್ ಕೊಡಿಸಿಕೊಂಡು ಬಂಧು ಈ ಬಾರಿ ನೇಮಿರಾಜ್ ನಾಯ್ಕಗೆ ಜನಗಳ ಪ್ರೀತಿ ಖಂಡಿತವಾಗಿಯೂ ಇದೇ ಈ ಭಾರಿ ನೇಮಿರಾಜ್ ನಾಯ್ಕ್ ರನ್ನು ಗೆದ್ದೆ ಗೆಲ್ಲಿಸುವೆ ಎಂದು ಹೇಳಿದ್ದು ಈ ಬಾರಿಯೂ ಸಹ ನಿಜವಾಯ್ತು.

■ಮೊದಲ ಭಾರಿಗೆ ಉತ್ತಮವಾದ ಆಡಳಿತ ನೀಡಿದ್ದರು ಸಹ ಎರಡು ಭಾರಿ ಹಣದ ಹಬ್ಬರದಿಂದ ಕೇಲವೇ ಕೆಲವು ಮತಗಳ ಹಂತರದಿಂದ ಜಯ ಕೈ ತಪ್ಪಿತ್ತು. ಆದರೇ ಈ ಭಾರಿ ಕ್ಷೇತ್ರದ ಜನಗಳ ಪ್ರೀತಿ ವಿಶ್ವಾಸ ಹಾಗೂ ನೇಮಿರಾಜ್ ನಾಯ್ಕ ಈ ಮೊದಲು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಈ 10 ವರ್ಷ ಜನಗಳಿಗೆ ತೋರಿದ ಪ್ರೀತಿ ಶಾಸಕನಿಗೆ ಈ ಭಾರಿ ಮತದಾರರು ತಕ್ಕ ಪಾಠವನ್ನು ಕಲಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ನೇಮಿರಾಜ್ ನಾಯ್ಡ್ ರವರು ಕ್ಷೇತ್ರದ ಎಲ್ಲ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಈ ಭಾರಿ ಯಾವುದೇ ಪಕ್ಷ ಭೇದ ಮರೆತು, ಆಮಿಷಕ್ಕೆ ಒಳಗಾಗದೇ ಸ್ವಾಭಿಮಾನದಿಂದ ನೇಮಿರಾಜ್ ನಾಯ್ಕ್ ರವರನ್ನು ಬಹುಮತದಿಂದ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು,

-ಮಹಾಂತೇಶ್.ಟಿ.
ಹ್ಯಾಳ್ಯಾ
ನೇಮಿರಾಜ್ ನಾಯ್ಕ್ ಅಭಿಮಾನಿ

LEAVE A REPLY

Please enter your comment!
Please enter your name here