ಗೆಣತಿಕಟ್ಟೆ ಗ್ರಾಮದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ.

0
266

ಸಂಡೂರು:ಆಗಸ್ಟ್:28:- ತಾಲೂಕಿನ ಗೆಣತಿಕಟ್ಟೆ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಹೆಚ್ ಕೆ ಹಳ್ಳಿ ವಲಯದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಪದ್ಮಭೂಷಣ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಆಶೀರ್ವಾದ ಗಳೊಂದಿಗೆ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು 26.08.2022 ರಂದು ಗುರುವಾರ ಹಮ್ಮಿಕೊಳ್ಳಲಾಗಿತ್ತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜನರಲ್ಲಿ ಬಡತನ ನಿರ್ಮೂಲನೆಗಾಗಿ ಪ್ರಾರಂಭಗೊಂಡ ಸೇವಾ ಸಂಸ್ಥೆ ಮೇಲುನೋಟಕ್ಕೆ ಕಾಣುವಹಾಗೇ ಜನರಲ್ಲಿ ಹಣಕಾಸಿನ ಬಡತನ ಮಾತ್ರವಲ್ಲ ಸಾಮಾಜಿಕ, ಬಡತನ ಜ್ಞಾನದ ಬಡತನ, ಜ್ಞಾನದ ಬಡತನ, ಧಾರ್ಮಿಕ ಬಡತನ ಕಾಣುತ್ತೇವೆ ಇಂತಹ ಬಡತನ ವಿರುದ್ಧ ಪೂಜ್ಯರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಇದರ ಮೂಲಕ ಜನರನ್ನು ಜಾಗೃತಿಗೊಳಿಸಿ ಸ್ವಾವಲಂಭಿ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಸಂಡೂರು ತಾಲೂಕಿನಲ್ಲಿ 3279 ಸ್ವ ಸಹಾಯ ಸಂಘಗಳನ್ನು ರಚನೆಮಾಡಿ ಬ್ಯಾಂಕಿನ ಮೂಲಕ ಸದಸ್ಯರ ಉದ್ದೇಶಗಳಿಗೆ ಅನುಗುಣವಾಗಿ 95 ಕೋಟಿ ರೂಪಾಯಿ ಪ್ರಗತಿ ನಿಧಿ ವಿತರಣೆ ಮಾಡಲಾಗಿದೆ ಎಂದು ತಿಳಿಸುತ್ತಾ

ಸಂಡೂರು ತಾಲೂಕಿನಲ್ಲಿ 40 ಸಿ.ಎಸ್.ಸಿ ಸಾಮಾನ್ಯ ಸೇವಾಕೇಂದ್ರಗಳನ್ನು ರಚಿಸಲಾಗಿದ್ದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಉಚಿತವಾಗಿ 7937 ಫಲಾನುಭವಿ ಸದಸ್ಯರುಗಳಿಗೆ ಇ-ಶ್ರಮ ಕಾರ್ಡ್, 2513 ಆಯುಷ್ ಮಾನ್ ಕಾರ್ಡ್ ನೀಡಲಾಗಿದೆ. ಇಂದು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಸರಿಯಾದ ಕ್ರಮದಲ್ಲಿ ಅರಿತು ಧಾರ್ಮಿಕ ಆಚರಣೆ ಅನುಸರಿಸಲು ಪ್ರೇರಣೆ ಆಗಲಿ ಎನ್ನುವ ಉದ್ದೇಶದಿಂದ ಶ್ರೀ ಸಾಮೂಹಿಕ ವರ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಹೆಚ್ ಕೆ ಹಳ್ಳಿ ವಲಯದ ಗೆಣತಿಕಟ್ಟೆ ಗ್ರಾಮದ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ನಡೆಸಲಾಯಿತು, ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಕೊಟ್ಟು ಬೆಳೆಸುವಂತೆ ಮಹಿಳೆಯರಿಗೆ ಕಿವಿಮಾತನ್ನು ಹೇಳಲಾಯಿತು.ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಉಚಿತವಾಗಿ ಸಲಕರಣೆಗಳನ್ನು ಕೊಡುತ್ತಿದ್ದು ಫಲಾನುಭವಿಗಳಿಗೆ ವಾಟರ್ ಬೆಡ್ ಹಾಗೂ ವಿಲ್ ಚೇರ್ ಗಳನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಕೊಪ್ಪಳ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್.ಬಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ನಾಗರಾಜ್, ಶ್ರೀಮತಿ ಅನ್ನಪೂರ್ಣ, ಹಾಗೂ ಪ್ರಗತಿ ಕೃಷ್ಣ ಬ್ಯಾಂಕ್ ಮ್ಯಾನೇಜರ್ ಸತ್ಯಪ್ಪ, ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ,ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶುಭಾದೇವಿ, ವಲಯ ಮೇಲ್ವಿಚಾರಕರಾದ ಸಂತೋಷ್, ವರಮಹಾಲಕ್ಷ್ಮಿ, ಪೂಜಾ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here