ಹೌಸಿಂಗ್ ಬೋರ್ಡ್ ಕಾಲೋನಿ ರಸ್ತೆ ಅವ್ಯವಸ್ಥೆ : ನಿವಾಸಿಗಳಿಂದ ಧರಣಿ ಉಪವಾಸ ಎಚ್ಚರಿಕೆ.!

0
211

ಕೊಟ್ಟೂರು :ಸೆ:10:- ತಾಲ್ಲೂಕು ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲಿರುವ ಪಟ್ಟಣದ  ಹೌಸಿಂಗ್ ಬೋರ್ಡ್ ಕಾಲೋನಿ ನಿರ್ಮಾಣವಾಗಿ 12 ವರ್ಷ ಕಳೆದರೂ ಇಲ್ಲಿನ ನಿವಾಸಿಗಳಿಗೆ ರಸ್ತೆ ಚರಂಡಿಗಳ  ಮೂಲಭೂತ ಸೌಕರ್ಯಗಳಿಲ್ಲದೆ ನಲುಗುತ್ತಿದೆ. 

 2009-2010 ನೇ ಸಾಲಿನಲ್ಲಿ   ಕರ್ನಾಟಕ ಗೃಹ ಮಂಡಳಿಯಿಂದ  ಸುಮಾರು  300  ಖಾಲಿ ನಿವೇಶನಗಳನ್ನು   ಹಾಗೂ ಸುಮಾರು 30  ಮನೆಗಳನ್ನು   ನಿರ್ಮಿಸಿದ್ದು  ಎಲ್ಲಾ ನಿವೇಶನಗಳನ್ನೂ ಗ್ರಾಹಕರಿಗೂ ಹಂಚಿಕೆ  ಮಾಡಲಾಗಿದೆ.   

ಈ ನಿವೇಶನಗಳಿಗೆ ಎಲ್ಲ ಮೂಲಭೂತ  ಸೌಲಭ್ಯಗಳನ್ನು ಒದಗಿಸಿ   ಕೊಟ್ಟೂರು ಪಟ್ಟಣ ಪಂಚಾಯಿತಿಯ  ಸುಪರ್ದಿಗೆ ನೀಡಿದ್ದಾರೆ. ಇಲ್ಲಿನ ನಿವಾಸಿಗಳು ಕೊಳಾಯಿ ಶುಲ್ಕ ಮತ್ತು ತೆರಿಗೆಯ ಹಣ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ
ಸ್ಥಳೀಯ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಮಾತ್ರ ಮರೀಚಿಕೆ ಆಗಿದೆ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಇದರ ವಾರ್ಡ್ ಸಂಖ್ಯೆ  4/18  ಆಗಿದ್ದು  ಇದು ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ  ಕೂಗಳತೆಯ ದೂರದಲ್ಲಿದ್ದರೂ ಸ್ಥಳೀಯ ಆಡಳಿತ ನಿರ್ಲಕ್ಷ ಕ್ಕೊಳಗಾಗಿದೆ. ಈಗ ಮಳೆಗಾಲವಾದ್ದರಿಂದ ಸಮರ್ಪಕ ರಸ್ತೆಗಳಿಲ್ಲದೆ ಕೆಸರುಮಯವಾಗಿ, ಸಂಚಾರ ದುಸ್ತರವಾಗಿದೆ.  ಹಾಗೂ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಮುಳ್ಳು ಗಿಡಗಳಿಂದ ಕೂಡಿದೆ. 

ಎಲ್ಲಂದರಲ್ಲಿ ಗಿಡಗಳು ಬೆಳೆದಿವೆ  ಇದಕ್ಕೆ ಸಂಬಂಧಪಟ್ಟ ಯಾವ ಅಧಿಕಾರಿಗಳೂ ಕೂಡ  ಬಂದು ನೋಡದೆ  ಇರುವುದು ಹಾಗೂ ಜನಗಳಿಂದ ಮತವನ್ನು ತೆಗೆದುಕೊಂಡು  ಇಲ್ಲಿನ ನಿವಾಸಿಗಳಿಗೆ ಸುಳ್ಳು ಭರವಸೆಯನ್ನು ಕೊಟ್ಟು ಜನಪ್ರತಿನಿಧಿಗಳಿಗೆ ಹೌಸಿಂಗ್ ಬೋರ್ಡ್ ನಿವಾಸಿಗಳ ಶಾಪ ಹಾಕುತ್ತಿದ್ದಾರೆ.

ಇಲ್ಲಿನ ನಿವಾಸಿಯಾದ ಕೆ.ಎಸ್. ಜಯಪ್ರಕಾಶ ನಾಯ್ಕ  ಹಲವಾರು ಬಾರಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ  ಮನವಿ ಸಲ್ಲಿಸಿದರೂ  ಇಲ್ಲಿನ ಸಮಸ್ಯೆಯ ಬಗ್ಗೆ  ಹೇಳಿ  ನಿವಾಸಿಗಳ ಸಹಿ ಮಾಡಿಸಿ ಸುಮಾರು ಸಲ ಪತ್ರವನ್ನು ಕೊಟ್ಟರು ಪ್ರಯೋಜನವಾಗಿಲ್ಲ   

ಹೊಸಪೇಟೆಯ ಎಸಿಬಿ  ಯವರು  ಕೊಟ್ಟೂರಿನಲ್ಲಿ  ಎಲ್ಲ ಅಧಿಕಾರಿ ವರ್ಗದವರು ಹಾಗೂ  ಈ ಹಿಂದೆ ಇರುವ  ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು  ಕೂಡ ಅತೀ ಶೀಘ್ರದಲ್ಲಿ ಕೆಲಸ ಪ್ರಾರಂಭ ಮಾಡಿ ಹೌಸಿಂಗ್ ಬೋರ್ಡ್ ನಿವಾಸಿಗಳ ಭರವಸೆಯನ್ನು ಈಡೇರಿಸುತ್ತೇನೆ. ಎಂದು ಭರವಸೆ ನೀಡಿದ್ದರು.ಹಾಗು ಶಾಸಕರಾದ  ಭೀಮಾನಾಯ್ಕ ರವರಿಗೂ  ಹೌಸಿಂಗ್ ಬೋರ್ಡ್ ನ ನಿವಾಸಿಗಳೆಲ್ಲರೂ ಕೂಡಿ  ಶಾಸಕರಿಗೂ  ಮನವಿ  ಪತ್ರವನ್ನು ಕೊಟ್ಟು ಸುಮಾರು 3-4   ವರ್ಷಗಳಾಗಿವೆ    ಹಾಗೂ  18 ನೇ ವಾರ್ಡಿನ  ಸದಸ್ಯರು (ಕೌನ್ಸಿಲರ್ ) ಗೆ  ಇಲ್ಲಿನ ಸಮಸ್ಯೆಯ ಬಗ್ಗೆ ಹೌಸಿಂಗ್ ಬೋರ್ಡ್ ನಿವಾಸಿ ಗಳು ಅರ್ಜಿಯನ್ನು  ಕೊಟ್ಟಿದ್ದು ಬರೀ ಸುಳ್ಳು ಭರವಸೆಯನ್ನು ಕೊಟ್ಟಿರುವ   ಜನಪ್ರತಿನಿಧಿಗಳು  ಹಾಗೂ ಇದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿಯ  ಅಧಿಕಾರಿ ವರ್ಗದವರು ಈಗಲಾದರೂ ಎಚ್ಚೆತ್ತುಕೊಂಡು  ತಾಲ್ಲೂಕು ಕಚೇರಿಯ ಕೂಗಳತೆಯ ದೂರದಲ್ಲಿದೆ  ಹೌಸಿಂಗ್ ಬೋರ್ಡ್ ಕಾಲೋನಿಗೆ ಒಮ್ಮೆ ಭೇಟಿ  ಕೊಟ್ಟು  ಇಲ್ಲಿನ ಸಮಸ್ಯೆಗಳನ್ನು  ಬಗೆಹರಿಸಬೇಕು  ಎಂದು  ಇಲ್ಲಿನ ನಿವಾಸಿಗಳು ಪತ್ರಿಕೆ ಮುಖಾಂತರ ಒತ್ತಾಯಿಸಿದ್ದಾರೆ. ನಿವಾಸಿಗಳಾದವೆಂಕಾರೆಡ್ಡಿ, ಶರಣ ಗೌಡ್ರು, ಎಸ್ ಎಸ್  ನಾಯ್ಕ ಸಂಕಪ್ಪ ,ವೀರಣ್ಣ ,ಇರ್ಫಾನ್, ಕೊಟ್ರಯ್ಯ, ಸೋಮಣ್ಣ. ಷಡಕ್ಷರಿ ಗೌಡ್ರು, ಪ್ರಕಾಶ್,  ಮಲ್ಕಾ ನಾಯ್ಕ್ , ಸಂತೋಷ್ ನಾಯ್ಕ‌ , ಪ್ರಶಾಂತ್, ಲಕ್ಷ್ಮಿಬಾಯಿ, ವಿಜಯಾ ನಾಯ್ಕ,

ಇಲ್ಲಿನ ನಿವಾಸಿಗಳಾದ ನಾವು ಅನುಭವಿಸುವ ಯಾತನೆಯನ್ನು ಯಾವೊಬ್ಬ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೌಸಿಂಗ್ ಬೋರ್ಡ್ ಕಾಲೋನಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಟ್ಟಣ ಪಂಚಾಯಿತಿ ಮುಂದೆ ಆಮರಣಾಂತ ಉಪವಾಸ ಮಾಡಲಾಗುವುದು.
 ಕೆ ಎಸ್ ಜಯಪ್ರಕಾಶ್ ನಾಯ್ಕ  ರೈತ ಮುಖಂಡ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here