ಸರ್ಕಾರದ ಕೆಲಸ ದೇವರ ಕೆಲಸವೆಂದು ಮರೆತು ಕುಳಿತಿದ್ದಾರೆಯೇ ಜೆಸ್ಕಾಂ ಅಧಿಕಾರಿಗಳು.!

0
245

ಕೊಟ್ಟೂರು: ಇತ್ತಿಚ್ಚಿನ ದಿನಗಳಲ್ಲಿ ವಿದ್ಯುತ್ ಶಕ್ತಿಯನ್ನು ಬಳಸಿ ಕೊಳ್ಳದೇ ಇರದವರು ಯಾರು ಇಲ್ಲ.ಇತ್ತಿಚ್ಚಿನ ವರದಿಯ ಪ್ರಕಾರ ಭಾರತದ ಶೇ 97% ರಷ್ಟು ಜನ ವಿದ್ಯುತ್ ಶಕ್ತಿಯನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಮಾಸಿಕ ಬಿಲ್ಲ್ ಹಾಗೂ ತೆರಿಗೆಯನ್ನು ಕಡ್ಡಾಯ ವಾಗಿ ಕಟ್ಟುತ್ತಿದ್ದಾರೆ ಕೆಲವೊಮ್ಮೆ ಕಟ್ಟದಿದ್ದಲ್ಲಿ ವಿದ್ಯುತ್ ಶಕ್ತಯನ್ನು ಕಡಿತಗೊಳಿಸುತ್ತರೆ. ನಿಯಮದ ಪ್ರಕಾರ ಆರು ತಿಂಗಳಗಳ ಕಾಲಾವಕಾಶ ಇರುತ್ತದೆ. ಆರು ತಿಂಗಳಾದರೂ ಕಟ್ಟದಿದ್ದಲ್ಲಿ ನೋಟಿಸ್ ಜಾರಿಗೊಳಿಸಬೇಕು ಇದು ಜೆಸ್ಕಾಂ ನಿಯಮ

ಹಾಗೆಯೇ ಇಲ್ಲಿರುವ ಪಟ್ಟಣದ ವಿದ್ಯುತ್ ಕಂಬಗಳ,ಲೈನ್,ಬೀದಿ ದೀಪ ಹಾಗೂ ಟ್ರಾನ್ಸ್ಫಾರ್ಮರ್ ಮೈಂಟೆನನ್ಸ್ ನೊಡತಕ್ಕದ್ದು ಅವರ ಜವಾಬ್ದಾರಿಯಾಗಿದೆ.ಹಾಗೆಯೇ ಕೊಟ್ಟೂರ 8ನೇ ವಾರ್ಡಿನ ಬಳ್ಳಾರಿ ಕ್ಯಾಂಪ್ ನಿವಾಸದಲ್ಲಿ ವಿದ್ಯುತ್ ತಂತಿಗಳು ರಾಶಿ ರಾಶಿಯಾಗಿ ನೇತು ಬಿದ್ದಿದೆ.

ಹತ್ತಾರು ಮನೆಗಳಿಗೆ ಒಂದೇ ಗಂಟು ಹಾಕಿದ್ದು ಇದು ಬಹಳ ನಿವಾಸಿಗರಿಗೆ ತೊಂದರೆಯನ್ನುಂಟು ಮಾಡಿದೆ ಕೆಲವರ ಮನೆಯವರು ವಿದ್ಯುತ್ ಕಳೆದುಕೊಂಡು ಜೆಸ್ಕಾಂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಿನ ದಿನಗಳು ಸಿಡಿಲು ಗುಡುಗಿನ ಮಳೆಗಾಲ ಆಗಿದ್ದರಿಂದ ಬಡ ಕುಟುಂಬಗಳಿಗೆ ಬೀದಿಗೆ ಬರುವ ಪರಿಸ್ಥಿತಿ ಒದಗಿತ್ತದೆ . ಈಗದರು ಸರಿಯಾದ ಕ್ರಮಕೈಗೊಳ್ಳಬೇಕೆಂದು ನಿವಾಸಿಗರು ಜೆಸ್ಕಾಂ ಅಧಿಕಾರಿಗಳ ಮೇಲೆ ಬೇಸರವನ್ನು ವ್ಯಕ್ತಡಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here