ಜನಸಂಖ್ಯಾ ಸ್ಥಿರತೆಗೆ ಕುಟುಂಬ ಕಲ್ಯಾಣದ ಅರಿವು ಮುಖ್ಯ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ.

0
168

ತೋರಣಗಲ್ಲು ಆರ್ ಎಸ್ ನಲ್ಲಿ 34 ನೇ ವಿಶ್ವ ಜನ ಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು, ಪ್ರಮುಖ ಬೀದಿಗಳಲ್ಲಿ ಚಿಕ್ಕ ಕುಟುಂಬ-ಸುಖಿ ಕುಟುಂಬ, ಅಪಾರ ಪರಿವಾರ-ದೇಶಕ್ಕೆ ಬಲು ಭಾರ, ಹೆಣ್ಣಿರಲಿ, ಗಂಡಿರಲಿ ಮಕ್ಕಳೆರಡು ಇರಲಿ,ಸಂತೋಷದ ಜೀವನಕ್ಕಾಗಿ ಅಂತರದ ಹೆರಿಗೆ,ಚಿಕ್ಕ ಕುಟುಂಬ- ಚೊಕ್ಕ ಕುಟುಂಬ, ಗಂಡಿಗೆ 21- ಹೆಣ್ಣಿಗೆ 18 ತುಂಬಿದ ಮೇಲೆ ಮದುವೆ, ಚಿಕ್ಕ ಸಂಸಾರ ಚೊಕ್ಕ ಸಂಸಾರ, ಹೆಣ್ಣಿಗೆ 19 ತುಂಬುವವರೆಗೂ ಗರ್ಭಧಾರಣೆ ಬೇಡ, ಮುಂತಾದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ನಮ್ಮ ದೇಶದ ಜನಸಂಖ್ಯೆ 136.6 ಕೋಟಿ ಇದ್ದು ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳಲ್ಲಿ 2 ನೇ ಸ್ಥಾನದಲ್ಲಿದ್ದು ಜನ ಸಂಖ್ಯಾ ಸ್ಥಿರತೆ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ,

ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಶಾಶ್ವತ ವಿಧಾನ ಅಥವಾ ತಾತ್ಕಾಲಿಕ ವಿಧಾನಗಳ ಅಳವಡಿಕೆಯಿಂದ ಮಾತ್ರ ಸಾಧ್ಯವಿದೆ, ಜನಸಂಖ್ಯೆ ನಿಯಂತ್ರಣ ಮಾಡದಿದ್ದಲ್ಲಿ ಬಡತನ, ನಿರುದ್ಯೋಗ, ಆಹಾರದ ಕೊರತೆ, ಆರ್ಥಿಕ ಅವ್ಯವಸ್ಥೆ ಉಂಟಾಗುವುದು ಎಂದು ತಿಳಿಸಿದರು.

ಕುಟುಂಬ ನಿಯಂತ್ರಣಕ್ಕೆ ವಿನೂತನ ವಿಧಾನಗಳಾದ ಐ.ಯು.ಸಿ.ಡಿ-375 ಐದು ವರ್ಷದ, 380 ಹತ್ತು ವರ್ಷಗಳ ಗರ್ಭ ನಿರೋಧವಾಗಿದೆ, ಮಾಲಾ ಎನ್, ಪ್ರತಿದಿನ ಸೇವನೆ,ಛಾಯಾ ಮೊದಲು ವಾರಕ್ಕೆ ಮೂರು ಬಾರಿ ನಾಲ್ಕು ವಾರ ಬಳಿಕ ವಾರಕ್ಕೊಮ್ಮೆ ಸೇವನೆ, ನಂತರ “ಎನ್” ಪಿಲ್ಸ್ – ಆಕಸ್ಮಿಕ ಲೈಂಗಿಕ ಕ್ರಿಯೆ ನಡೆದ 72 ಗಂಟೆಯೊಳಗೆ ಸೇವನೆ, ಅಂತರ ಚುಚ್ಚು ಮದ್ದು – ಪ್ರತಿ ಮೂರು ತಿಂಗಳಿಗೊಮ್ಮೆ ಹಾಕಿಸಿದಲ್ಲಿ ಗರ್ಭದಾರಣೆಯಾಗದು ಅಥವಾ ಶಾಶ್ವತ ವಿಧಾನ ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿ, ಟ್ಯೂಬೆಕ್ಟಮಿ,ಅಥವಾ ಪುರುಷರಿಗೆ ನೋಸ್ಕಾಲ್ ಪೆಲ್ ವ್ಯಾಸೆಕ್ಟಮಿ ಗಳಿಂದ ಜನನಗಳನ್ನು ತಡೆಯಬಹುದು,

ಅನಾಪೇಕ್ಷಿತ ಗರ್ಭಧಾರಣೆಯಾಗಿದ್ದರೆ ನೋಂದಾಯಿತ ಆಸ್ಪತ್ರೆಗಳಲ್ಲಿ ಎಮ್.ಟಿ.ಪಿ ಮಾಡಿಸಿಯಾದರೂ ಜನನಗಳನ್ನು ತಡೆಯ ಬಹುದು, ಈ ಎಲ್ಲಾ ವಿಧಾನಗಳನ್ನು ಪರಿಚಯಿಸುವುದು ಮತ್ತು ಹೆಚ್ಚು ಜನ ಸಂಖ್ಯೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಿಳಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ರಿಚರ್ಡ್, ಭಾಗ್ಯಲಕ್ಷ್ಮಿ, ಬಸವರಾಜ, ಐ.ಸಿ.ಟಿ.ಸಿ ಕೌನ್ಸಿಲರ್ ಶ್ರೀರಾಮ್, ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ, ವೆಂಕಟಲಕ್ಷ್ಮಿ, ಆಶಾ, ಹುಲಿಗೆಮ್ಮ, ಶ್ರೀದೇವಿ, ರಾಜೇಶ್ವರಿ,ಪದ್ಮಾ,ಕಾವೇರಿ, ಮಂಜುಳಾ, ತೇಜಮ್ಮ, ಗೋವಿಂದಮ್ಮ ಇತರರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here