ವಿಶ್ವ ಹೃದಯ ದಿನ ಕುರಿತು ಜಾಗೃತಿ ಕಾರ್ಯಕ್ರಮ,

0
539

ಸಂಡೂರು:ಸೆ:29:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಹೆಚ್.ಎಲ್.ಸಿ ಗಾರ್ಡನ್ ನಲ್ಲಿ ವಿಶ್ವ ಹೃದಯ ದಿನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಉತ್ತಮ ಜೀವನ ಶೈಲಿಯಲ್ಲಿ ಅಡಗಿದೆ ಹೃದಯದ ಆರೋಗ್ಯ ಎಂದು ತಿಳಿಸಿದರು, ಬದಲಾಗುತ್ತಿರುವ ಜೀವನ ಶೈಲಿಯಿಂದ ಹೃದಯಕ್ಕೆ ಅಪಾಯವಾಗುತ್ತಿದೆ, ಹೆಚ್ಚು ಕೊಬ್ಬಿನಾಂಶ ಹೊಂದಿರುವ ಆಹಾರ, ಹೆಚ್ಚು ಉಪ್ಪು, ಖಾರ, ಮಸಾಲೆ ಪದಾರ್ಥಗಳ ಬಳಕೆ, ಒಳ್ಳೆಯದಲ್ಲ, ಸರಳ ಕಾಳುಗಳು, ಸೊಪ್ಪು, ತರಕಾರಿ ಇರುವ ಆಹಾರ, ಹಣ್ಣುಗಳ ಸೇವನೆ ಉತ್ತಮ, ನಿಯಮಿತ ವ್ಯಾಯಾಮ, ಸದಾ ಚಟುವಟಿಕೆಯಿಂದ ಇರಬೇಕು, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಯಿಂದ ರಕ್ತದೊತ್ತಡ ಹೆಚ್ಚು ಮಾಡುವುದರಿಂದ ಹೃದಯಕ್ಕೆ ತೊಂದರೆ ಕೊಡುತ್ತದೆ, ಮಧುಮೇಹ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಯುವಕರು ಉತ್ತಮ ಆರೋಗ್ಯ ಜೀವನ ಶೈಲಿಯೊಂದಿಗೆ ಪ್ರತಿ ಆರು ತಿಂಗಳಿಗೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ, ಫಿಟ್ನೆಸ್ ಭರಾಟೆಯಲ್ಲದ ಸರಳ ಜಿಮ್ ಅಭ್ಯಾಸದೊಂದಿಗೆ ಧ್ಯಾನ, ಯೋಗ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು,

2004 ರಿಂದ ವಿಶ್ವ ಹೃದಯ ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಆದರೆ ಈ ವರ್ಷ ತುಂಬಾ ಬೇಸರವಾಗುತ್ತಿದೆ, ಅಪ್ಪುವಿನ ಹೃದಯ ಸ್ತಂಭನ ಕುರಿತು ನೆನಪು ಮಾಡಿಕೊಂಡು, ಇದೇ 29 ಕ್ಕೆ ಹನ್ನೊಂದು ತಿಂಗಳಾದರೂ ಆ ಮನಸ್ಥಿತಿಯಂದ ಹೊರಬರಲು ಸಾಧ್ಯವಾಗುತ್ತಿಲ್ಲ, ಸಾವಿನ ನಂತರ ಸಾರ್ಥಕತೆಗಾಗಿ ಯುವಕರು ನೇತ್ರ ಮತ್ತು ಇತರ ಅಂಗಾಂಗ ದಾನಗಳ ಬಗ್ಗೆ ನೊಂದಣಿ ಮಾಡಿಕೊಳ್ಳವ ಬಗ್ಗೆ ತಿಳಿಸಿದರು, ಈ ಸಮಯದಲ್ಲಿ ಅಪ್ಪು ಭಾವಚಿತ್ರ ಪ್ರದರ್ಶನ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕರಾದ ಪ್ರಶಾಂತ್ ಕುಮಾರ್, ಯಂಕಪ್ಪ, ಗ್ರಾಮದ ನಾಗರಿಕರಾದ ಲಕ್ಷ್ಮಣ ಕುಮಾರ್, ಎರ್ರಿಸ್ವಾಮಿ, ರಾಮುಡು,ಧನುಂಜಯ್, ಕೃಷ್ಣ,ಶೇಕರ್, ಶೆಕ್ಷಾವಲಿ, ಕಾರ್ತಿಕ್, ಶೆಟ್ಟಿ ನಾಯಕ್,ಹೊನ್ನೂರಸ್ವಾಮಿ, ಆಶಾ ಕಾರ್ಯಕರ್ತೆಯರಾದ ಹುಲಿಗೆಮ್ಮ, ಅಶಾ, ವೆಂಕಟಲಕ್ಷ್ಮಿ, ರೇಖಾ, ವಿಜಯಶಾಂತಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here