ಅಭಿವೃದ್ಧಿ ಕಾಣದ ತಾಲೂಕು ಕೊಟ್ಟೂರುಗೆ ಸಿಗುವುದೇ ಪದವಿ ಕಾಲೇಜು,ಕನಸು ನನಸಾಗುವುದೇ..?

0
222

ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸುಕ್ಷೇತ್ರ ಕೊಟ್ಟೂರು ತಾಲೂಕು ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಧಾರ್ಮಿಕ ಕ್ಷೇತ್ರ ಹಿನ್ನೆಲೆಯುಳ್ಳ ಶಿಕ್ಷಣ ಕಾಶಿ ಎಂದರೆ ತಪ್ಪಾಗಲಾರದು.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಟ್ಟೂರು ಭಾಗವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಚುನಾಯಿತಗೊಂಡ ಶಾಸಕರಾದ ನೇಮಿರಾಜ್ ನಾಯ್ಕ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಹಾಗೂ ಸವಾಲುಗಳು ಇವೆ ಈ ಕ್ಷೇತ್ರದ ಜನತೆಯ ಅನುಕಂಪದ ಅಲೆಯಲ್ಲಿ ಹರಿಕೆಗಳ ಹೊತ್ತು ಶಾಸಕರ ಗೆಲ್ಲಿಸಿದ್ದಾರೆ. ಆದರೆ ಈ ಶಾಸಕರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಸವಾಲಾಗಿ ಮುಂದಿವೆ ಜನರ ನಂಬಿಕೆಯಂತೆ ನಿಜ ಪಡಿಸಬೇಕಾಗಿದೆ.

ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳ ಕೊರತೆ :

ತಾಲೂಕು ಕೇಂದ್ರ ಸ್ಥಾನಮಾನಹೊಂದಿ ಆರು ವರ್ಷಗಳು ಕಳೆದರೂ ಸಮರ್ಪಕ ಸರ್ಕಾರಿ ಕಚೇರಿಗಳು ಇಲ್ಲದೆ ಅನಾಥವಾಗಿ ತಾಲೂಕು ಕಚೇರಿ ಏಕಸ್ವಾಮ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಂದಾಯ ಇಲಾಖೆಯ ಕಾರ್ಯಗಳನ್ನು ಬಿಟ್ಟರೆ ಪ್ರತಿಯೊಂದುಕ್ಕೂ ಸಮೀಪದ ಕೂಡ್ಲಿಗಿಗೆ ನಾಗರೀಕರು ಅಲೆಯುವಂತಾಗಿದೆ. ಆದಷ್ಟು ಬೇಗನೆ ಅತಿ ಅವಶ್ಯಕವಾಗಿರುವ ಉಪ ನೊಂದಣಿ ಕಚೇರಿ, ಸೇರಿದಂತೆ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭ ಮಾಡಬೇಕೆಂಬುದು ಶಾಸಕರ ಮೇಲಿರುವ ಜವಾಬ್ದಾರಿಯಾಗಿದೆ.

ಕೊಟ್ಟೂರು ಕೆರೆಗೆ ನೀರು ತುಂಬಿಸುವುದು :

ಪಟ್ಟಣದ ಜೀವನಾಡಿ ಕೊಟ್ಟೂರಿನ ಐತಿಹಾಸಿಕ ಕೆರೆ ತುಂಬಿಸುವ ಯೋಜನೆಗೆ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ 380 ಕೋಟಿ ರೂಗಳ ಅನುದಾನವನ್ನು ಘೋಷಿಸಲಾಗಿತ್ತು ಅದಕ್ಕೆ ಪೂರಕವೆಂಬಂತೆ ಮಾಜಿ ಶಾಸಕ ಭೀಮನಾಯ್ಕ್ ಯೋಜನೆಯನ್ನು ಕಾರ್ಯಗತಗೊಳಿಸಲು ಹಲವಾರು ಬಾರಿ ಸದನದಲ್ಲಿ ಹೋರಾಟಕ್ಕಿಳಿದರೂ ಮಲತಾಯಿ ಧೋರಣೆ ಎಂಬಂತೆ ಯೋಜನೆಗೆ ಮುಹೂರ್ತ ಇನ್ನೂ ಕೂಡಿ ಬಂದಿಲ್ಲ, ಸ್ವತಃ ರಾಜ್ಯದ ಮುಖ್ಯಮಂತ್ರಿಗಳು ಪಟ್ಟಣಕ್ಕೆ ಭೇಟಿ ನೀಡಿ ಯೋಜನೆಯ ವಿಸ್ಕೃತ ಆದೇಶವನ್ನು ನೋಡಿ ಇನ್ನೇನು ಹಣಕಾಸು ಇಲಾಖೆಗೆ ಕಡತಕ್ಕೆ ಅಂಕಿತವಾಗೇ ಬಿಟ್ಟಿತು ಕೆರೆ ತುಂಬಿಸುವ ಯೋಜನೆಗೆ ಚಾಲನೆ ಸಿಗಲಿದೆ ಎಂಬ ಭರವಸೆಯೂ ಹಸಿ ಸುಳ್ಳಾಯಿತು. ಇದು ಕೂಡ ಕೊಟ್ಟೂರು ನಾಗರೀಕರ ಹಾಗೂ ಈ ಭಾಗದ ರೈತರ ಜ್ವಲಂತ ಸಮಸ್ಯೆ ಆಗಿದೆ. ಈ ನಿರೀಕ್ಷೆಯನ್ನು ಸಹ ನೂತನ ಶಾಸಕರು ಈಡೇರಿಸುವರೆ ಎಂದು ಇಲ್ಲಿನ ಜನತೆ ತುದಿಗಾಲ ಮೇಲೆ ನಿಂತಿದೆ.

ಈಡೇರದ ನೂರು ಹಾಸಿಗೆಯ ಆಸ್ಪತ್ರೆಯ ಕನಸು :

ಕೊಟ್ಟೂರು ಪಟ್ಟಣ ಸೇರಿದಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಇಲ್ಲಿನ ಸಮುದಾಯ ಆರೋಗ್ಯದ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಿದರೂ ಸಕಲ ಸೌಲಭ್ಯವುಳ್ಳ ಆಸ್ಪತ್ರೆ ಕಾಗದದ ಹಾಳೆಯಲ್ಲಿ ಉಳಿದಿದೆ ಕಡೆ ಪಕ್ಷ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಎಲ್ಲಾ ಹಂತದ ತಜ್ಞರನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯಾಗುವ ಕನಸು ನಾಗರಿಕರ ಕಣ್ಣಲ್ಲಿ ಉಳಿದಿದ್ದು ಆದಷ್ಟು ಬೇಗನೆ ನೂತನ ಶಾಸಕರು ಕಾಳಜಿ ವಹಿಸಬೇಕು ಎಂದು ಕಾತರದಿಂದ ಎದುರು ನೋಡುತ್ತಿದ್ದಾರೆ.

ಸಮರ್ಪಕ ಕುಡಿಯುವ ನೀರು ಪೂರೈಕೆ :

ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಪಕ್ಕದಲ್ಲಿ ಹರಿಯುತ್ತಿದ್ದರೂ ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗಿಲ್ಲ ಆಮೆ ಗತಿಯಲ್ಲಿ ಸಾಗುತ್ತಿರುವ 24×7 ಯೋಜನೆ ಚಾಲನೆಗೊಂಡು ನಾಲ್ಕು ವರ್ಷ ಗತಿಸಿದರೂ ಪೂರ್ಣಗೊಂಡಿಲ್ಲ.

ಬಹುದಿನದ ಪದವಿ ಕಾಲೇಜು ಕನಸು: ಸಾವಿರಾರು ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾದ ಡಿಗ್ರಿ ಕಾಲೇಜು ನಿರ್ಮಾಣಕ್ಕೆ ವಿಘ್ನವಾಗುತ್ತಲೇ ಇದೆ. ನೂತನ ಶಾಸಕರ ಶ್ರಮ ಮತ್ತು ಇಚ್ಚಾ ಶಕ್ತಿ ಅನುಗುಣವಾಗಿ ಈ ಸವಾಲುಗಳನ್ನು ಪರಿಹರಿಸುವ ಮೂಲಕ ಮತದಾರರ ಅಶೋತ್ತರಗಳನ್ನು ಈಡೇರಿಸುವರೆ ಎಂದು ಕೊಟ್ಟೂರು ಪಟ್ಟಣದ ನಾಗರೀಕರ ಆಂಬೋಣ ವಾಗಿದೆ.

ಈ ಹಿಂದೆ ಹತ್ತು ವರ್ಷಗಳ ಕಾಲ ಶಾಸಕರಾಗಿಳ ನಿರ್ವಹಿಸಿದ್ದ ಬರೀ ಆಶ್ವಾಸನೆಗಳು ಭರವಸೆಗಳು ಹರಿಕಾರ ಅಭಿವೃದ್ಧಿಯ ಹರಿಕಾರ ಎಂದು ತನ್ನಷ್ಟಕ್ಕೆ ತಾನೇ ಘೋಷಣೆ ಮಾಡಿಕೊಳ್ಳುವಂತಹ ಶಾಸಕರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹೇಳಿ ನಂಬಿಸುವುದರಲ್ಲಿ ಕಾಲ ಕಳೆದು ಜನರಿಗೆಲ್ಲಾ ಮೋಸ ಮಾಡಿ ಜನರ ಪಾಲನ್ನು ತಿಂದು ಕುಡಿದು ಅಮಲೇರಿದ ಶಾಸಕರಿಗೆ ತಕ್ಕ ಉತ್ತರ ವನ್ನು ಜನರು ತಮ್ಮ ಪಾಲನ್ನು ತೆಗೆದುಕೊಂಡು ಶಾಸಕರ ಪಾಲನ್ನು ಕೊಟ್ಟಿರಿವುದೇ ನಿಜ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನರ ತೀರ್ಪು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here