67ನೇ ಕನ್ನಡ ರಾಜ್ಯೋತ್ಸವ ಹಾಗೂ ಶಂಕರ್ ನಾಗ್ ಜನ್ಮದಿನಾಚರಣೆ

0
250

ಕೊಟ್ಟೂರು: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಆಟೋ ಚಾಲಕರ ಸಂಘ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ  ಎಂ ಎಂ ಜೆ ಹರ್ಷವರ್ಧನ್ ರವರು ತಾಯಿ ಭುವನೇಶ್ವರಿ  ಹಾಗೂ ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪ ಮಾಲೆ  ಸಲ್ಲಿಸುವುದರ  ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ  ಆಟೋದ ಮೇಲೆ ತಾಯಿ ಭುವನೇಶ್ವರಿ ದೇವಿ ಹಾಗೂ ಶಂಕರ್ ನಾಗ್ ರವರ ಭಾವಚಿತ್ರ ಕೂರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಅದ್ದೂರಿಯಾಗಿ ಮೆರೆವಣಿಗೆಯನ್ನು ನಡೆಸಲಾಯಿತು. ಈ ಮರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನ ವರೆಗೆ ಮೆರವಣಿಗೆ ನಡೆಯಿತು ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಮರಳಿ ಮೆರವಣಿಗೆ  ಆಟೋ ನಿಲ್ದಾಣಕ್ಕೆ ತಲುಪಿತು.

ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಸೀಮಿತವಾಗದೆ ಪ್ರತಿದಿನ ಕನ್ನಡ ರಾಜ್ಯೋತ್ಸವ ಆಗಬೇಕು ಎಂದು  ಆಟೋ ಚಾಲಕರ ಸಂಘದಿಂದ ಕನ್ನಡ ಪ್ರೇಮ ಉಳಿದಿದೆ ಎಂದು ಆಟೋ ಚಾಲಕರ ಸಂಘದ ಸರ್ವ ಸದಸ್ಯರು ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದರು ಊಟದ ವ್ಯವಸ್ಥೆಯನ್ನು ವಡ್ಡರಹಳ್ಳಿ ಸಿದ್ದೇಶ್ ವ್ಯವಸ್ಥೆಯನ್ನು ಮಾಡಿದ್ದರು. 

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಎಂ ಎಂ ಜೆ ಹರ್ಷವರ್ಧನ್, ಸುಧಕರ್ ಪಾಟೀಲ್, ಎ ಸಂತೋಷ್, ಕೇಶವ ಪ್ರಸಾದ್, ಮಹಮದ್ ರಫೀಕ್,  ಎಎಸ್ಐ ಅಬ್ಬಾಸ್ ,ಆಟೋ ಚಾಲಕರ ಸಂಘದ  ಅಧ್ಯಕ್ಷರಾದ ಶಿವಯ್ಯ, ಬಂಡಿ ಕೊಟ್ರೇಶ್, ವಿ.ದೊಡ್ಡವೀರಪ್ಪ, ಕನಕಟ್ಟಿ ಪರಶುರಾಮ್,(ಮರಿ) ಬಿ. ಅಜ್ಜಯ್ಯ, ಜೊಳ್ಳಿ  ಪರಶುರಾಮ್,  ಪ್ರಕಾಶ್, ಹಳ್ಳಿ ನಾಗರಾಜ್ ,
 ಮಹೇಶ್, ಬಹುದ್ದೂರ್ ರಮೇಶ್, ರಾಜಣ್ಣ, ಬೂದಿ ಕೊಟ್ರೇಶ್, ಎಚ್ ಅನಿಲ್, ವಿ. ಸಿದ್ದೇಶ್, ಮುರುಳಿ, ಮೇಘರಾಜ್, ಬಣಕಾರ್ ಕೊಟ್ರೇಶ್, ಮಾರುತಿ, ಪೈಲೆಟ್ ಕೊಟ್ರೇಶ್, ಜಿ ಕೋಟಿ, ಮಂಜು,  ಗಣೇಶ್, ಹಾಲೇಶ್, ಜೆ ವಿಷ್ಣು, ಕಾರ್ತಿಕ, ದುರುಗೇಶ್, ಮಂಜು (ಹಳ್ಳಿ),ರಾಜ, ಪ್ರದೀಪ್, ಉಮೇಶ್ ,ಕುಮಾರ, ಪ್ರಸಾದ್, ನಾಗರಾಜ,   ಹಾಗೂ ಆಟೋ ಚಾಲಕರ ಸರ್ವ ಸದಸ್ಯರು ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು. 

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here