ಕಾನ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ

0
284

ಕಾನಹೊಸಹಳ್ಳಿ :- ಹೊಸಹಳ್ಳಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮತದಾನ ನಡೆಯಿತು.

ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಅಧ್ಯಕ್ಷರ ಸ್ಥಾನಕ್ಕೆ ಎ.ಸಿ ಚೇತನ್ ಮತ್ತು ಕೆ.ಜಿ ಸಿದ್ದನಗೌಡ ನಾಮಪತ್ರ ಸಲ್ಲಿಸಿದ್ದರು. 30 ಸದಸ್ಯರ ಬಲಾಬಲಗಳ ನಡುವೆ ಇವರಿಬ್ಬರೂ ತಲಾ 15 ಮತಗಳನ್ನು ಪಡೆದರು.ಸ್ಪಷ್ಟವಾಗಿ ಬಹುಮತ ಸಿಗದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ಅಧ್ಯಕ್ಷರನ್ನು ಆರಿಸಲಾಯಿತು.

ಲಾಟರಿಯಲ್ಲಿ ಎ.ಸಿ ಚೇತನ್ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರ ಸ್ಥಾನಕ್ಕೆ ಎಸ್. ಸಿ ಮಹಿಳಾ ಮೀಸಲಾತಿ ಇದ್ದುದ್ದರಿಂದ ನೇತ್ರಾವತಿ ಮತ್ತು ಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದರು. ಕೆಜಿ ಸಿದ್ದನಗೌಡ ಬಣದ ನೇತ್ರಾವತಿ 16 ಮತ ಗಳಿಸಿದರೆ ಎ.ಸಿ ಚೇತನ್ ಬಣದ ಲಕ್ಷ್ಮಿ 14 ಮತಗಳನ್ನು ಪಡೆದರು. 16 ಮತಗಳನ್ನು ಪಡೆದ ನೇತ್ರಾವತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್. ತಾಪಂ ವ್ಯವಸ್ಥಾಪಕ ಅಶ್ವಥ್ ಕುಮಾರ್. ತಾಪಂ ಸಹಾಯಕ ವೆಂಕಟೇಶ್. ನಿರ್ವಹಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಬಸಮ್ಮ. ಸಿಬ್ಬಂದಿ ನಾಗರಾಜ್ ಶಶಿಕುಮಾರ್. ಅನಿಲ್. ತಿಪ್ಪೇಸ್ವಾಮಿ, ಸಿಬ್ಬಂದಿ ವರ್ಗ ಇತರರು ಇದ್ದರು

ಈ ಸಂದರ್ಭದಲ್ಲಿ ಕೂಡ್ಲಿಗಿ ಡಿ.ವೈ.ಎಸ್ ಪಿ ಮಲ್ಲಪ್ಪ ಮಲ್ಲಾಪುರ. ಸಿಪಿಐ ವೆಂಕಟಸ್ವಾಮಿ ಹೊಸಹಳ್ಳಿ ಪಿಎಸ್ಐ ಎರಿಯಪ್ಪ. ಕೊಟ್ಟೂರು ಪೊಲೀಸ್ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಸೂಕ್ತ ಬಂದೋಬಸ್ಥ ನೀಡಿದ್ದರು

LEAVE A REPLY

Please enter your comment!
Please enter your name here