ವಿದ್ಯಾರ್ಥಿ ಜೀವನ ಅತ್ಯುತ್ತಮ ಪ,ಪಂ: ಅಧ್ಯಕ್ಷ ಭಾರತಿ ಪಾಟೀಲ್

0
270

ಕೊಟ್ಟೂರು:ಆಗಸ್ಟ್:10:-ವಿದ್ಯಾರ್ಥಿ ಜೀವನ ಅತ್ಯುತ್ತಮ ಎಂದು ಭಾರತಿ ಸುಧಾಕರ ಪಾಟೀಲ್ ಅವರು ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ರಾಷ್ಟ್ರೀಯ ಜಂತು ಹುಳು ನಿವಾರಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಗುರುಗಳು ಹೇಳಿದಂತೆ ನಡೆದರೆ ಎಂತಹಾ ಸಾಧನೆ ಮಾಡಬಹುದು ಎಂದು ಹೇಳಿದರು

ಜಂತುಹುಳು ಬರುವಾಗ ಹೊಟ್ಟೆ ನೋವು ವಾಂತಿ ಸುಸ್ತು ಈ ಮುಂತಾದ ರೋಗಗಳು ಹಾಗೂ ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು ಆರೋಗ್ಯ ಇಲಾಖೆಯು ಜಂತುಗಳ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಶ್ರೀಮತಿ ಶೀಲಾ ಮಹಾದೇವ ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳಿಗೆ ಜಂತುಗಳ ಮಾತ್ರೆಗಳನ್ನು ಆರೋಗ್ಯ ಇಲಾಖೆ ತಿಪ್ಪಮ್ಮ ವಿತರಿಸಿದರು ಈ ಕಾರ್ಯಕ್ರಮ ತಾಲೂಕಿನಾದ್ಯಂತ ನಡಿಯಲಿದಿ ಎಂದು ಮಾತನಾಡಿದರು ವಿದ್ಯಾರ್ಥಿಗಳು ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕು ನಿಮ್ಮ ಮನೆಯ ಪರಿಸರದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮಹಾತ್ಮ ಗಾಂಧಿ ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿ ಮುಂದಾಗಬೇಕು ಎಂದು ಅಧ್ಯಕ್ಷರು ಚಿಗಟೇರಿ ಕೊಟ್ರೇಶ ಕಲ್ಪತರು ಕಲಾ ಟ್ರಸ್ಟ್ (ರಿ ) ಕೊಟ್ಟೂರು ಹೇಳಿದರು.

ಕಾರೋನ ಎರಡು ವರ್ಷಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪಡೆದಿರಲಿಲ್ಲ
ಈ ಭಾರಿ 75ನೇ ಅಮೃತ ಮಹೋತ್ಸವ ವಿಜೃಂಭಣೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಸಂಜೆ ಕಲ್ಪತರು ಕಲಾ ಟ್ರಸ್ಟ್ ರಿ ಇವರಿಂದ ಆಯೋಜಿಸಲಾಗಿದ್ದು ಇದರ ಸದೋಪಯೋಗ ಪಡಿದು ಕೊಳ್ಳಿ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಬಸವರಾಜ್ ಅವರು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸವಿತಾ ಮಾಂತೇಶ್ ಅನಿತಾ ರೇಖಾ ಬಸ್ಸಮ್ಮ ಕೊಟ್ರಮ್ಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here