ಉತ್ತಮ ಭವಿಷ್ಯಕ್ಕಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿ : ಎಂ.ಜಿ ಕನಕ

0
189

ಬಳ್ಳಾರಿ: ಜನವರಿ.11ರಂದು: ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ನಾಯಕರಾದ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಐತಿಹಾಸಿಕ ಆಂದೋಲನ! ಭಾರತವು ನ್ಯಾಯದ ಕಡೆಗೆ ಸಾಗುತ್ತಿರುವಾಗ ಈ ಆಂದೋಲನಕ್ಕೆ ಸೇರಿಕೊಳ್ಳಿ, ಉತ್ತಮ ಭವಿಷ್ಯಕ್ಕಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ ಕನಕ ಹೇಳಿದರು.

ಹಣದುಬ್ಬರ, ನಿರುದ್ಯೋಗ, ದ್ವೇಷ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಮನೋಭಾವವನ್ನು ಪ್ರತಿಧ್ವನಿಸಿ, ಉಜ್ವಲ ಭವಿಷ್ಯವನ್ನು ರೂಪಿಸಲು ನಮ್ಮ ದೇಶಕ್ಕೆ ಈಗ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಅಗತ್ಯವಿದೆ ಎಂದು ಎಂ.ಜಿ ಕನಕ ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮನಸುಗಳ ಬೆಸೆಯುತ್ತಿರುವ ನಮ್ಮ ಹೆಮ್ಮೆಯ ರಾಹುಲ್ ಗಾಂಧಿ ಅವರ ನೇತೃತ್ವದ ಈ ಭಾರತ್ ಜೋಡೋ ಯಾತ್ರೆಯಲ್ಲಿ ಅವರ ಜೊತೆಗೆ ನಾನು ಹೆಜ್ಜೆ ಹಾಕಿದ ಕ್ಷಣಗಳು ಇನ್ನೂ ಸ್ಮರಣೀಯವಾಗಿದೆ.

ಮಣಿಪುರದಿಂದ ಮುಂಬೈವರೆಗೆ ಒಟ್ಟು 6700+ ಕಿ.ಮೀ, 66 ದಿನಗಳು, 15 ರಾಜ್ಯಗಳು, 110 ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು ಭಾರತ್ ಜೋಡೋ ನ್ಯಾಯ್ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ಪೂರೈಸಲ್ಲಿ. ರಾಜ್ಯಗಳಲ್ಲಿ ರಾಹುಲ್ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯು ಎಲ್ಲಾ ವರ್ಗಗಳ ಜನರನ್ನು ಆಕರ್ಷಿಸಿದೆ. ಪ್ರತಿಯೊಂದು ಹೆಜ್ಜೆಯೂ ಜನರಿಗೆ ಹೊಸ ಭರವಸೆಗಳನ್ನು ಮೂಡಿಸಿದೆ.

ಮಣಿಪುರದಿಂದ ಮುಂಬೈವರೆಗೆ ಒಟ್ಟು 6700+ ಕಿ.ಮೀ.ವರೆಗೆ ಈ ಯಾತ್ರೆ ಅವರು ಕೈಗೊಂಡಿರುವ ಈ ಯಾತ್ರೆಯಲ್ಲಿ ಮಾರ್ಗದುದ್ದಕ್ಕೂ ರೈತರು, ಯುವಕರು ಹಾಗೂ ನಾಗರಿಕರ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ್ದಾರೆ. ಮತ್ತೆ ಕೆಲವು ಕಡೆ ರೈತರು, ಯುವಕರೊಂದಿಗೆ ಸಂವಾದ ನಡೆಸಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಎಂ.ಜಿ ಕನಕ ಹೇಳಿದರು.

ಈ ಯಶಸ್ಸಿಗಾಗಿ ಸಹಕರಿಸುತ್ತಿರುವ ಎಲ್ಲರಿಗೂ ಹೃತ್ತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೂ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೂ ಮತ್ತು ಕುಟುಂಬದ ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸಲೆಂದು ಬಳ್ಳಾರಿ ನಗರದ ಆದಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯಲ್ಲಿ ಎಂ.ಜಿ ಕನಕ ಅವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here