ಪಟ್ಟಣ ಪಂಚಾಯತ್ ನಿರ್ಲಕ್ಷತೆ ಬೀದಿನಾಯಿಗಳ ದಾಳಿಗೆ ಬಲಿಯಾಯ್ತು ಟಗರು..!!

0
141

ಕೂಡ್ಲಿಗಿ ಪಟ್ಟಣದ ನಾಲ್ಕನೇ ವಾರ್ಡಿನ ಆಜಾದ್ ನಗರ ನಿವಾಸಿ ಮಾಬುಬಿ ಎನ್ನುವರು ತನ್ನ ಸ್ವಂತ ಸೈಟ್ ನಲ್ಲಿ ಎಮ್ಮೆ ಆಕಳು ಕೋಳಿ ಟಗರು ಮರಿಗಳು ತನ್ನ ಜೀವನೋಪಾಯಕ್ಕಾಗಿ ಸಾಕಾಣಿಕೆ ಮಾಡುತ್ತಿದ್ದು ತಡರಾತ್ರಿ ಸುಮಾರಿಗೆ ಬೀದಿನಾಯಿಗಳು ಟಗರು ಮೇಲೆ ದಾಳಿ ನಡೆಸಿ ಮನ ಬಂದಂತೆ ಕಡಿದು ಜಿಗಿದು ತಿಂದಾಕಿವೇ ಬೀದಿ ನಾಯಿಗಳ ದಾಳಿಯಿಂದ ಸಾಕು ಟಗರು ಸಾವನ್ನಪ್ಪಿದ್ದು

ಇಂತಹ ಪ್ರಕರಣಗಳು ಅನೇಕ ಬಾರಿ ಮರುಕಳಿಸಿದ್ದರು ಸಹ ಪಟ್ಟಣ ಪಂಚಾಯತಿ ನಿರ್ಲಕ್ಷತೋರಿ, ಬೇಜವಾಬ್ದಾರಿತನದಿಂದ ಬೀದಿ ನಾಯಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮೌನವಹಿಸಿದ್ದು ಜನರ ಮೇಲೆ ಅನೇಕ ಬಾರಿ ಬೀದಿ ನಾಯಿಗಳ ದಾಳಿ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಪ್ರಕರಣಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಇದುವರೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷತೆ ವಹಿಸುತ್ತಿದ್ದಾರೆ

ಇನ್ನೂ ಪ್ರಮುಖ ರಸ್ತೆಗಳಲ್ಲಿ ನಾಯಿಗಳ ಸೈನ್ಯ ಯುದ್ಧಕ್ಕೆ ಸಿದ್ದರಿದ್ದಂತೆ ಅಡಿಯಾಗಿ ಪ್ರಮುಖ ರಸ್ತೆಯಲ್ಲಿ ಗುಂಪು ಗುಂಪಾಗಿ ಬೀದಿ ನಾಯಿಗಳ ಸೈನ್ಯ ದಿನನಿತ್ಯ ಸೇರಿರುತ್ತದೆ ಇದನ್ನು ನೋಡಿದ ಅಧಿಕಾರಿಗಳು ಇದುವರೆಗೆ ತಮಗೆ ಕಂಡಿಲ್ಲವೆಂದು ಕಾಣದಂತೆ ಸಂಚರಿಸುತ್ತಾರೆ ಇದರ ಮಧ್ಯ ಅದೆಷ್ಟೋ ವಾಹನ ಸವಾರರಿಗೆ ತೊಂದರೆಪಡಿಸಿ ಬೈಕ್ ಸವಾರರು ಅಪಘಾತಕ್ಕೆ ತುತ್ತಾಗಿರುವ ಘಟನೆಗಳು ನಡೆದಿದ್ದು ಕೆಲವು ಮಾಂಸದ ಅಂಗಡಿಗಳು ಪಟ್ಟಣದ ಹೃದಯ ಭಾಗದ ಕೋಳಿ ಅಂಗಡಿಗಳು ನಾಯಿಗಳ ಸೈನ್ಯಕ್ಕೆ ಸಹಕಾರ ನೀಡುತ್ತಿದ್ದು ಮಾಂಸದ ಮದದಲ್ಲಿದ್ದ ನಾಯಿಗಳು ಕೂಡ್ಲಿಗಿ ಪಟ್ಟಣದೊಳಗಡೆ ಮಾನವರ ಭೇಟೆ, ಸಾಕು ಪ್ರಾಣಿಗಳ ಬೇಟೆಯಾಡುತ್ತ ದಾಳಿ ನಡೆಸಿ ಪ್ರಾಣಪಾಯ ಮಾಡುತ್ತಿವೆ

ಆದ್ದರಿಂದ ಕೂಡ್ಲಿಗಿ ಪಟ್ಟಣದ ಟಗರು ನಾಯಿಗಳ ದಾಳಿಗೆ ಬಲಿಯಾಗಿದೆ ಈಗಲಾದರೂ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳ ವಿರುದ್ಧ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಹಾಗೂ ಬೀದಿ ನಾಯಕನ ದಾಳಿಯಿಂದ ಬಲಿಯಾದ ಟಗರು ಮಾಲೀಕರು ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here