ಜಿಲ್ಲಾಡಳಿತ ಸದಾ ರೈತರೊಂದಿಗಿರುತ್ತದೆ: ಜಿಲ್ಲಾಧಿಕಾರಿ

0
90

ರೈತರು ತಮ್ಮ ಕುಂದು ಕೊರತೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಸದಾ ಜಿಲ್ಲಾಡಳಿತ ನಿಮ್ಮೊಂದಿಗೆ ಇರುತ್ತದೆ ಎಂದು ರೈತರಿಗೆ ಜಿಲ್ಲಾಧಿಕಾರಿ ಎಸ್ ಅಶ್ವತಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ರೈತರ ಕುಂದು ಕೊರತೆಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮಂಡ್ಯದಲ್ಲಿ ಕೃಷಿಗೆ ಬಳಸಲಾಗುವ ಎಲ್ಲಾ ಗೊಬ್ಬರಗಳನ್ನು ಕೃಷಿ ಇಲಾಖೆಯ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷಿಸಲ್ಪಟ್ಟು ನಂತರ ಮಾರುಕಟ್ಟೆಗೆ ಬರುತ್ತದೆ ಆದ್ದರಿಂದ ರೈತರು ಪ್ರತ್ಯೇಕ ಗೊಬ್ಬರದ ಬ್ರಾಂಡ್‍ಗಳ ಮೇಲೆ ಅವಲಂಭಿತವಾಗದೆ ಯಾವುದಾದರು ಗೊಬ್ಬರಗಳನ್ನು ಉಪಯೋಗಿಸಬಹುದು ಎಂದರು.
ಬ್ಯಾಂಕ್‍ಗಳು ಕಿಸಾನ್ ಸಮ್ಮಾನ್ ಹಾಗೂ ರೈತರಿಗೆ ಬರುವ ಇತರೆ ಸರ್ಕಾರದ ಅನುದಾನವನ್ನು ಸಾಲದ ಹೆಸರಿನಲ್ಲಿ ಕಡಿತಗೊಳಿಸದೆ ರೈತರಿಗೆ ಹಿಂದಿರುಗಿಸಿ ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರು.
ಆಧಾರ್ ಲಿಂಕ್ ಹಾಗೂ ಪೆÇೀರ್ಟ್‍ನ ಸಮಸ್ಯೆಯಿಂದ ಕೆಲವು ರೈತರಿಗೆ ಅನುದಾನ ನೀಡುವುದು ವಿಳಂಬವಾಗದಂತೆ 15ರಿಂದ 20 ದಿನಗಳೊಳಗೆ ಅದನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಂಕ್‍ನ ಸಿಬ್ಬಂದಿ ರೈತರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ರೈತ ಮುಖಂಡರು ಸಭೆಯಲ್ಲಿ ತಿಳಿಸಿದಾಗ ಈ ಸಂಬಂಧ ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಎಲ್ಲಾ ಬ್ಯಾಂಕಿನವರು ಕರೆದು ಸಭೆ ನಡೆಸಿ ಈ ಸಂಬಂಧ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಮಟ್ಟದಲ್ಲಿ ಕಂದಾಯ ಅದಾಲತ್ ಮಾಡುವುದರಿಂದ ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಬಹುದು ಎಂದು ರೈತರ ಬೇಡಿಕೆಗೆ ಪ್ರತಿಯಾಗಿ ಸಂಬಂಧಪಟ್ಟ ಉಪ ವಿಭಾಗಧಿಕಾರಿಗಳು ಹಾಗೂ ಎಲ್ಲಾ ತಹಶೀಲ್ದಾರ್ ತಾಲ್ಲೂಕು ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ವಿರಿಜಾ ನಾಲೆಯ ಕಲುಷಿತ ನೀರು ನೇರವಾಗಿ ಕೃಷಿಯೇತರ ಹೊಲಗಳಿಗೆ ಹೋಗುತ್ತಿದ್ದು, ಕೃಷಿಗೆ ಸಮಸ್ಯೆಯಾಗುತ್ತಿದೆ. ಆದರಿಂದ ಅದರ ಶುದ್ಧಿಕರಣಕ್ಕೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದ್ದು, ಆದಷ್ಟು ಬೇಗ ಪರಿಹಾರ ದೊರೆಯಲಿದೆ ಎಂದರು.
ಸಣ್ಣ ರೈತರು ಹಾಗೂ ಅತೀ ಸಣ್ಣ ರೈತರಿಂದ ಫಸಲು ಖರೀದಿ ನಡೆಯುತ್ತಿದ್ದು ದೊಡ್ಡ ರೈತರಿಂದ ಖರೀದಿ ಮಾಡುವ ಕುರಿತು ಮುಂದಿನ ಹಂತಗಳಲ್ಲಿ ಚರ್ಚಿಸುವುದಾಗಿ ಹೇಳಿದರು.
ರೈತರ ಪಡಿತರದಲ್ಲಿ ವಿಳಂಬವಾಗಿದ್ದು ಆದಷ್ಟು ಬೇಗ ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರತಿ 5ಞm ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಲಭ್ಯವಾಗುವ ಹಾಗೆ ಸೂಚನೆ ನೀಡಬೇಕು ಇದು ರೈತರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗಲಿದೆ ಹಾಗೂ ರೈತರಿಗೆ ಸಂಬಂಧಿಸಿದ ಆರ್.ಟಿ.ಸಿ ಮತ್ತು ಸರ್ವೆ ನಂಬರ್‍ನಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸಿ ಎಂದರು.
ಸರ್ಕಾರದ ಯೋಜನೆಯಡಿ ಬರುವ ಪೆÇೀಡಿಮುಕ್ತ ಗ್ರಾಮ ಹಾಗೂ ಹೂಳು ತೆಗೆಸುವುದು ಸಕಾಲದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಕಾರ್ಖಾನೆಗಳ ಉಳಿವಿಗೆ ರೈತರೆ ಪ್ರಮುಖ ಕಾರಣ ಸಕ್ಕರೆ ಕಾರ್ಖನೆಗಳಲ್ಲಿ ರೈತರಿಗೆ ಪಾವತಿಯಾಗಬೇಕಾದ ಹಣವನ್ನು 15 ದಿನಗಳಲ್ಲಿ ಪಾವತಿಗೆ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸೌಮ್ಯ, ರೈತ ಸಂಘದ ಮುಖಂಡರಾದ ಸುನಂದಾ ಜೈರಾಮ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here