ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ 50ನೇ ಕನ್ನಡ ರಾಜ್ಯೋತ್ಸವ ಆಚರಣೆ

0
39

ಕೊಟ್ಟೂರು: ಕೊಟ್ಟೂರೇಶ್ವರ ಮಹಾವಿದ್ಯಾಲಯ  50ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಬುಧವಾರ ರಂದು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ ಅಧ್ಯಕ್ಷತೆಯಲ್ಲಿ  ಧ್ವಜಾರೋಹಣವನ್ನು ನೆರವೇರಿಸಿದರು

ನಂತರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ ರವಿಕುಮಾರ್ ಮಾತನಾಡಿದ ಕನ್ನಡ ನಾಡು ನುಡಿಗಾಗಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಕನ್ನಡ ರಾಜ್ಯೋತ್ಸವ ನಾಡಿನ ಸಂಸ್ಕೃತಿ ಕಲೆಯನ್ನು ಬಿಂಬಿಸುವಂತಹದ್ದು, ಸದಾಕಾಲ ಕನ್ನಡವನ್ನ ಬೆಳೆಸಿ ಉಳಿಸಿ ಬಳಸೋಣ ಎಂದರು.

ಆಡಳಿತ ಮಂಡಳಿಯ ಸದಸ್ಯರಾದ ಡಿ .ಎಸ್. ಶಿವಮೂರ್ತಿ ಅವರು ಮಾತನಾಡಿ ಕರ್ನಾಟಕ ಏಕೀಕರಣದ ಮಹತ್ವವನ್ನು ಕರ್ನಾಟಕದ ಏಕೀಕರಣವನ್ನು ಕುರಿತು ಸವಿವರವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಅಡಿಕೆ ಮಂಜುನಾಥಯ್ಯ ಕೋರಿ ಬಸವರಾಜ್ ಕೆ.ಬಿ. ಮಲ್ಲಿಕಾರ್ಜುನ್ ಹಿರಿಯ ಉಪನ್ಯಾಸಕರಾದ ಡಿ. ರವೀಂದ್ರ ಗೌಡ ,ಎಸ್ .ಕೃಷ್ಣಪ್ಪ ಜೆ. ಬಿ ಸಿದ್ದನಗೌಡ ಹಾಗೂ ಎನ್‌.ಸಿ.ಸಿ , ಅಧಿಕಾರಿಯದ ಸಿ .ಬಸವರಾಜ್ ಹಾಗೂ ಪದವಿ ಪದವಿಪೂರ್ವ ಉಪನ್ಯಾಸಕರಗಳು ಹಾಗೂ ಬೋಧಕೇತರ ಸಿಬ್ಬಂದಿ, ಎನ್ ಸಿ ಸಿ, ಎನ್.ಎಸ್. ಎಸ್, ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪ ಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್, ಸ್ವಾಗತವನ್ನು ಪೃಥ್ವಿರಾಜ್ ಬೆಡ್ಜರ್ಗಿ ಹಾಗೂ ನಿರೂಪಣೆಯನ್ನು ಕೆ.ಎಂ. ಪ್ರಭಾಕರ್ ನೆರವೇರಿಸಿದರು.

LEAVE A REPLY

Please enter your comment!
Please enter your name here