ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

0
29

ಮಡಿಕೇರಿ ನ.10:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವ 2023 ರ ಪ್ರಯುಕ್ತ “ಕಲಾಸ್ಮೃತಿ” ಕನ್ನಡ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಚಲನಚಿತ್ರ ನಟರು ಹಾಗೂ ಹಾಸ್ಯ ಕಲಾವಿದರಾದ ಮಿಮಿಕ್ರಿ ದಯಾನಂದ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಆರೋಗ್ಯಕರ ನಗು ಇರಬೇಕು, ನೋವಿನ ನಗು ಇರಬಾರದು, ಮಹಿಳೆಯರಿಗೆ ಗೌರವ ಕೊಡಬೇಕು, ಹಸಿವು, ನೋವು ಅವಮಾನ ಎದುರಿಸಿದವರು ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಕೆ, ಅವರು ಮಾತನಾಡಿ ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿರುವ ಬಗ್ಗೆ ಶ್ಲಾಘಿಸಿ ಒಬ್ಬ ವ್ಯಕ್ತಿಗೆ ಹೆತ್ತ ತಾಯಿ ಯಾವ ರೀತಿ ಶ್ರೇಷ್ಟಳೊ ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ತನ್ನ ನೆಲ, ತನ್ನ ಭಾಷೆ ತನ್ನ ರಾಜ್ಯ ಶ್ರೇಷ್ಟವಾಗಿದ್ದು ಯಾವುದೇ ಕಾರಣಕ್ಕೂ ಮರೆಯಬಾರದು ಎಲ್ಲರಿಗೂ ಗೌರವ ಕೊಡಬೇಕು ಆಚಾರ ವಿಚಾರಗಳನ್ನು ಬಿಟ್ಟು ಕೊಡಬಾರದು ಯಾರ ಮನಸ್ಸಿಗೂ ಗಾಯ ಮಾಡುವ ರೀತಿ ಮಾತನಾಡಬಾರದು. ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ಮಾತ್ರ ಅಲ್ಲದೆ ಈ ರಾಜ್ಯದಲ್ಲಿರುವ ಪ್ರತಿಯೊಬ್ಬರು ಕೂಡ ಸಂಭ್ರಮಿಸಬೇಕೆಂದರು.

ತೆನ್ನಿರ ಮೈನಾ ಅವರು ಮಾತನಾಡಿ ವೈದ್ಯಕೀಯ ಕಾಲೇಜಿನಲ್ಲಿ ದೊಡ್ಡದಾಗಿ ಕನ್ನಡ ಹಬ್ಬವನ್ನು ಆಚರಿಸಿಸುತ್ತಿರುವುದಕ್ಕೆ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಅವರಾದ ಡಾ.ಕಾರ್ಯಪ್ಪ ಕೆ.ಬಿ ಅವರು ಮಾತನಾಡಿ ಪ್ರತಿ ವರ್ಷ ಸಂಸ್ಥೆಯಲ್ಲಿ ಕನ್ನಡ ಹಬ್ಬವನ್ನು ವೈಭವದಿಂದ ಆಚರಿಸುತ್ತಾ ಬರುತಿದ್ದು ಇದೇ ರೀತಿಯಲ್ಲಿ ಮುಂದುವರೆಯಲಿ ಹಾಗೂ ಮುಂದಿನ ಪೀಳಿಗೆಯವರಿಗೂ ಕೂಡ ಕನ್ನಡದ ಮಹತ್ವವನ್ನು ತಿಳಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಿಮಿಕ್ರಿ ದಯಾನಂದ ಅವರನ್ನು ಸನ್ಮಾನಿಸಲಾಯಿತು. ನಂತರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜಯಿಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಂತರ ಮಿಮಿಕ್ರಿ ದಯಾನಂದ್ ಅವರು ತಮ್ಮ ಮಿಮಿಕ್ರಿ ಹಾಸ್ಯದ ಮೂಲಕ ಎಲ್ಲರನ್ನು ಹಾಸ್ಯದ ಮೂಲಕ ರಂಜಿಸಿದರು, ನಂತರ ವಿದ್ಯಾರ್ಥಿಗಳಿಂದ ವಿವಿಧ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ ಎ.ಎಲ್, ಪ್ರಾಂಶುಪಾಲರಾದ ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ ರೂಪೇಶ್ ಗೋಪಾಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ನಂಜುಂಡಯ್ಯ ಎನ್, ಸ್ಥಾನೀಯ ವೈದ್ಯಾಧಿಕಾರಿಗಳಾದ ಸತೀಶ್ ವಿ.ಎಸ್, ಕನ್ನದ ಸಂಘ ಸಂಚಾಲಕಾರದ ಡಾ.ಮಂಜುನಾಥ್, ರವರು ಹಾಜರಿದ್ದರು.

LEAVE A REPLY

Please enter your comment!
Please enter your name here