ಬಲವಂತದ ಭೂ ಸ್ವಾಧೀನ ಮತ್ತು ಭೂ ಬೆಳೆಯಲ್ಲಾದ ಅನ್ಯಾಯದ ವಿರುದ್ದ ದೇವದಾಸಿ ಮಹಿಳಾ ವಿಮೋಚನಾ ಸಂಘ & ಭೂ ಸಂತ್ರಸ್ಥರ ಹೋರಾಟ ಸಮಿತಿಯಿಂದ ದೂರು

0
133

ಬಳ್ಳಾರಿ:ನ:22:- ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ, ಭೂ ಸಂತ್ರಸ್ಥರ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿ, ಬಳ್ಳಾರಿ ಇವರಿಂದ ದಿನಾಂಕ : 22.11.2023.
ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳು ದ್ವಾರ, ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನರಿಗೆ ಮತ್ತು ದೇವದಾಸಿ ಮಹಿಳೆಯರಿಗೆ, ಮಿಥ್ಥಲ್, ಭ್ರಾಹ್ಮಿಣಿ ಹಾಗೂ ಎನ್ ಎಂ ಡಿ ಸಿ ಕೈಗಾರಿಕೆಗಳಿಗಾಗಿ ಮಾಡಲಾದ ಬಲವಂತದ ಭೂ ಸ್ವಾಧೀನ ಮತ್ತು ಭೂ ಬೆಲೆಯಲ್ಲಾದ ಮೋಸದ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸಿ ನ್ಯಾಯ ಒದಗಿಸಲು ಕೋರಿ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ಸಲ್ಲಿಸಿದರು

ಬಳ್ಳಾರಿ ಜಿಲ್ಲಾ ಬಳ್ಳಾರಿ ಹಾಗೂ ಕುರುಗೋಡು ತಾಲೂಕಾಗಳಿಗೆ ಸೇರಿದ ಕುಡಿತೆನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಜಾನೆಕುಂಟೆ, ಎರ್ರಂಗಳಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ ಬಡ ರೈತರು, ದೇವದಾಸಿ ಮಹಿಳೆಯರು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಭೂ ಸಂತ್ರಸ್ಥರ ಹೋರಾಟ ಸಮಿತಿ ನೇತೃತ್ವದಲ್ಲಿ ದೂರು ಮತ್ತು ಮನವಿಯನ್ನು ಸಲ್ಲಿಸಿ

ನಾವುಗಳು, ಈ ಪ್ರದೇಶದಲ್ಲಿ ನಿರ್ಮಿಸಲಾಗುವುದೆಂದು ಹೇಳಲಾದ ಆರ್ಸೆಲರ್ ಮಿಥೆಲ್ ಹಾಗೂ ಭ್ರಾಹ್ಮಿಣಿ ಮತ್ತು ಎನ್ ಎಂ ಡಿ ಸಿ ಸ್ಟೀಲ್ ಕೈಗಾರಿಕೆಗಳಿಗಾಗಿ ನಮ್ಮ ಜಮೀನುಗಳನ್ನು ಕೆಐಏಡಿಬಿ ಮೂಲಕ ಬಲವಂತವಾಗಿ ಸ್ವಾಧೀನ ಮಾಡಲಾಗಿದೆ. ನಿಗದಿಸಲಾದ ಮೋಸದ ಭೂ ಬೆಲೆಯನ್ನು ಒಪ್ಪುವುದಿಲ್ಲವೆಂದು ಮತ್ತು ಜಮೀನುಗಳನ್ನು ನೀಡುವುದಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ, ಸರಕಾರಕ್ಕೆ ತಿಳಿಸಿದಾಗಲೂ, ನಮ್ಮ ಮೇಲೆ ಇನ್ನಿಲ್ಲದ ಮಾನಸಿಕ ಒತ್ತಡಗಳನ್ನು ಹೇರಿ ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರಂಭದಲ್ಲಿ ಮಿಥ್ಥಲ್ ಕಂಪನಿಗಾಗಿ ನಿಗದಿಸಿದ ಭೂ ಬೆಲೆಯೇ ವಂಚನೆಯ ಬೆಲೆಯೆಂಬುದು ಈಗಾಗಲೇ ಸಾಬೀತಾಗಿದೆ. ಕಂಪನಿ ಪರವಾಗಿ ರಾಜ್ಯ ಸರಕಾರದ ಸಂಬಂದಿಸಿದ ಕೈಗಾರಿಕಾ ಮಂತ್ರಿಗಳು, ಜಿಲ್ಲಾ ಮಂತ್ರಿಗಳು, ಅಧಿಕಾರಿಗಳ ಶಾಮೀಲಾಗಿ ವಂಚಿಸಿರುವುದು ಬಯಲಾಗಿದೆ. ಆದಾಗಲೂ ಹೊಸ ಭೂ ಬೆಲೆಯನ್ನು ನಿಗದಿಸದೆ ಮಗದೊಮ್ಮೆ ವಂಚಿಸಲಾಗಿದೆ.
ನಾವುಗಳು ಬಹುತೇಕರು, ಸರಕಾರದಿಂದಲೇ ಪಡೆದ ಜಮೀನುಗಳ ಮಾಲೀಕರಾಗಿದ್ದೆವು. ಸರಕಾರದಿಂದ ಪಡೆದ ಪರಿಶಿಷ್ಠರ ಭೂಮಿಗಳ ಸ್ವಾಧೀನ ಮಾಡುವಾಗ ಅನುಸರಿಸಬೇಕಾದ ಯಾವುದೇ ನಿಯಮಗಳನ್ನು ಅನುಸರಿಸಿರುವುದಿಲ್ಲ.
ಇದರಿಂದಾಗಿ, ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಹೋಲಿಸಿದರೆ ನಮ್ಮಗಳಿಗೆ ತಲಾ ಎಕರೆಗೆ ಕನಿಷ್ಠವೆಂದರೂ 50 ಲಕ್ಷ ರೂಗಳಷ್ಠು ಭೂ ಬೆಲೆಯಲ್ಲಿ ವಂಚನೆಯಾಗಿದೆ.
ಅದೇ ರೀತಿ, ಕಂಪನಿಗಳು ಒಪ್ಪಂದದಂತೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುವಲ್ಲಿಯೂ ವಿಫಲವಾಗಿರುವುದರಿಂದ ಅದರಿಂದಲೂ ಈ ಅವಧಿಯಲ್ಲಿ ದಶ ಲಕ್ಷಾಂತರ ರೂ ಗಳ ಉದ್ಯೋಗ ನಷ್ಠ ಉಂಟಾಗಿದೆ ಎಂದು ಅ ಹಿನ್ನೆಲೆಯಲ್ಲಿ ಕೆಲವು ಹಕ್ಕೊತ್ತಾಯಗಳನ್ನು ಪರಿಹರಿಸಲು ಕೋರಿದರು

ಹಕ್ಕೊತ್ತಾಯಗಳು :
■ಬಲವಂತದ ಭೂ ಸ್ವಾಧೀನ ಮತ್ತು ಭೂ ಬೆಲೆಯಲ್ಲಾದ ಮೋಸದ ದೌರ್ಜನ್ಯವನ್ನು ಕಾನೂನಿನ ಕ್ರಮಕ್ಕೆ ಒಳಪಡಿಸಿ ನ್ಯಾಯ ಒದಗಿಸಬೇಕು.

■ಹಳೆಯ ಮೋಸದ ಭೂ ಬೆಲೆ ರದ್ದುಗೊಳಿಸಿ ಜಿಲ್ಲಾ ನ್ಯಾಯಾಲಯ ನಿಗದಿಸಿದ ಭೂ ಬೆಲೆಯನ್ನು ಬಡ್ಡಿ ಸಮೇತ ಒದಗಿಸಬೇಕು. ಉದ್ಯೋಗ ನಷ್ಠ ಪರಿಹಾರವನ್ನು ಒದಗಿಸಬೇಕು.

■ಪರ್ಯಾಯ ಭೂಮಿಯನ್ನು ಒದಗಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು

ಈ ಸಂಧರ್ಭದಲ್ಲಿ ಜಿಲ್ಲೆಯ ಹಲವು ತಾಲೂಕುಗಳಿಂದ ಆಗಮಿಸಿದ್ದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಭೂ ಸಂತ್ರಸ್ಥರ ಮತ್ತು ದೇವದಾಸಿ ಮಹಿಳೆಯರು ಇದ್ದರು

LEAVE A REPLY

Please enter your comment!
Please enter your name here