ಇಂದು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
82

ಕೊಟ್ಟೂರು: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಕಾಲೇಜುಗಳ ಕಲಬುರ್ಗಿ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಲಬುರ್ಗಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಂದ ವಿಜೇತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜಯನಗರ ಜಿಲ್ಲೆಯ ಪರವಾಗಿ ಇಂದು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ ಪ್ರಥಮ ಪಿಯುಸಿ ವಿಭಾಗದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ನಾಗಲಕ್ಷ್ಮಿ ಎಸ್.ಒಡೆಯರ್-ಪ್ರಥಮ ಸ್ಥಾನ, ರಸಪ್ರಶ್ನೆ – ಬಸವರಾಜ್, ಸಂಜಯ್ ಕುಮಾರ್- ಪ್ರಥಮ ಸ್ಥಾನ ಹಾಗೂ ಆಶುಭಾಷಣ-ಪ್ರೇಕ್ಷಾ ಎನ್,ಹೆಚ್, – ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ದ್ವಿತೀಯ ಪಿಯುಸಿ ವಿಭಾಗದ ಏಕಪಾತ್ರಭಿನಯ – ಕೆ.ಪಿ. ಕೀರ್ತನಾ-ಪ್ರಥಮ ಸ್ಥಾನ, ರಸಪ್ರಶ್ನೆ- ಅಭಿಷೇಕ್, ಮಾನಸ ಎನ್- ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಇಂದು ಕಾಲೇಜಿನ ಪ್ರಾಂಶುಪಾಲರು ಪವನ್ ಕುಮಾರ್ ಇವರು ತಿಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಪಠ್ಯಚಟುವಟಿಗಳ ಜೊತೆಗೆ ಪಠ್ಯೇತರ ಚಟುವಟಿಕಗಳಲ್ಲಿ ಭಾಗವಹಿಸುವುದರಿಂದ ಸರ್ವೋತೊಮುಖ ಬೆಳವಣಿಗೆಗೆ ಸಹಕಾರಿ ಯಾಗಿರುತ್ತದೆ. ವಿಭಾಗೀಯ ಮಟ್ಟದ ಯಶಸ್ಸಿನ ಜೊತೆ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಜಯಶೀಲರಾಗಬೇಕೆಂದು ಆಡಳಿತಾಧಿಕಾರಿ ವೀರಭದ್ರಪ್ಪ ಹೆಚ್.ಎನ್ ಹಾರೈಸಿದರು. ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here