ಸೂಲಗಿತ್ತಿ ಈರಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮ.!

0
336

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೆಮ್ಮೆಯ ಐತಿಹಾಸಿಕ ಪಾಳೆಗಾರರ ತವರು ಗುಡೇಕೋಟೆ ಹೋಬಳಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಹೆಮ್ಮೆಯ ಪುತ್ರಿ ಸೂಲಗಿತ್ತಿ ಈರಮ್ಮ ಅವರನ್ನು ಗೌರವಿಸಲಾಯಿತು. ಈರಮ್ಮ ಎಂದರೆ ಸುತ್ತಲಿನ ಹಳ್ಳಿ ಜನರ ಮನಸ್ಸಿನಲ್ಲಿ ಮಂದಹಾಸ ಮೂಡುತ್ತದೆ. ಇಡೀ ಕರ್ನಾಟಕವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಒಂದು ಶತಮಾನ ಜೀವಿಸಿರುವ ಈರಮ್ಮನವರಿಗೆ ಈಗ 102 ವರ್ಷ ಎಂದು ಅಂದಾಜೀಕರಿಸಲಾಗಿದೆ. ಈರಮ್ಮ ಸರಿ ಸುಮಾರು 3000 ರಿಂದ 4000 ಸಾವಿರ ಹೆರಿಗೆ ಮಾಡಿಸಿದ್ದಾರೆ ಎಂದು ಸ್ಥಳೀಯ
ಜನರು ಹೇಳುತ್ತಿದ್ದಾರೆ. ಸುಮಾರು ಅರ್ಧ ಶತಮಾನದಿಂದ ಇವರು ಯಾವುದೇ ಜಾತಿ ಧರ್ಮ ನೋಡದೆ ಅವರಿವರೆನ್ನದೆ ಯಾರು ಕರೆದರೂ ಸಾಕು ಹೋಗಿ ಅವರ ಹೆರಿಗೆಯನ್ನು ಸರಾಗವಾಗಿ ಮಾಡಿಸುತ್ತಾ ಬಂದಿದ್ದಾರೆ. ಅಲ್ಲದೆ ಕಣ್ಣಲ್ಲಿ ಬಿದ್ದ ಹರಳನ್ನು ಹುಡುಕಿ ತೆಗೆದು ಸಾವಿರಾರು ಜನರ ಕಣ್ಣು ಬೇನೆಯನ್ನು ಗುಣಪಡಿಸಿದ್ದಾರೆ. ಇಂತಹ ಎಲೆಮರೆಯ ಕಾಯಿಯಂತೆ ಇರುವ ಶತಾಯುಷಿ ಸೂಲಗಿತ್ತಿ ಈರಮ್ಮ ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಮತ್ತು ಸರ್ಕಾರದ ಕರ್ತವ್ಯವಾಗಿದೆ. ಇವರಿಗೆ ಎರಡು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದಾರೆ ಅವರಿಗೂ ವಯಸ್ಸಾಗಿದೆ. ಇವರು ಪ್ರಸ್ತುತ ಕೂಡ್ಲಿಗಿ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮ ವಿಜಯನಗರ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಈ ಒಂದು ಸಂದರ್ಭದಲ್ಲಿ ಸೂಲಗಿತ್ತಿ ಈರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂದರ್ಭದಲ್ಲಿ ತಿಪ್ಪೇಸ್ವಾಮಿ ಹೊಸಮನಿ ಮಾಜಿ NSUI ಕೊಟ್ಟೂರು ತಾಲೂಕ್ ಅಧ್ಯಕ್ಷರು ಹಾಗೂ ಶಿವು ಯಾದವ್ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here