ಅಂಬಳಿ ಗ್ರಾಮ ಪಂಚಾಯತ್; ಇಲಾಖೆ ಅಧಿಕಾರಿಗಳ ಗೈರು, ಗ್ರಾಮ ಸಭೆ ರದ್ದು

0
100

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿಯಲ್ಲಿ ಇಂದು 5/12/2023 ರಂದು ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಗ್ರಾಮ ಸಭೆಗೆ ಇಲಖಾವಾರು ಅಧಿಕಾರಿಗಳು ಸಭೆಗೆ ಹಾಜರಾಗದೆ ನೋಟಿಸ್ ನೀಡಿದ ಎಲ್ಲಾ ಅಧಿಕಾರಿಗಳು ಗೈರು ಆಗಿರುವುದರಿಂದ, ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರ ಪತಿಯಾದ, ವಿ ಬಸವರಾಜ , ಗ್ರಾ.ಪ.ಸದಸ್ಯರಾದ ಎನ್ ವಿರುಪಾಕ್ಷ
ಟಿ ಪ್ರಕಾಶ ಮತ್ತು ತಾಲುಕು ಡಿಎಸ್ಎಸ್ ಸಂಘಟನಾ ಸಂಚಾಲಕರಾದ ಹೆಚ್ ಮಾರೇಶ ರವರು ಪ್ರತಿ ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರಗಳು ಆದರಾಗದೆ ಪ್ರತಿಸಲನು ಏನೇನೋ ಕಾರಣಗಳನ್ನು ಹೇಳಿ ಗ್ರಾಮ ಸಭೆಯನ್ನು ನಡೆಸುತೀರಿ, ಆದರೆ ಒಂದು ಬಾರಿಯೂ ಲಾಕವಾರು ಎಲ್ಲಾಧಿಕಾರಿಗಳು ಉಪಸ್ಥಿತರಿರದೆ ಗೈರಾಗುತ್ತಾರೆ ಅವರ ಮೇಲೆ ಏನು ಕ್ರಮವನ್ನು ಜರುಗಿಸಿರಿ? ಅವರಿಗೆ ನೋಟಿಸ ನೀಡಿರುವಿರಾ? ಅಥವಾ ಇಲ್ಲವೋ? ಪ್ರತಿಸಲ ಹೀಗೆ ಆದರೆ ಇದಕ್ಕೆ ಗ್ರಾಮಸಭೆ ಎನ್ನುತ್ತಾರಾ?ಈ ಬಾರಿ ಇಲಾಖಾವಾರು ಯಾವ ಅಧಿಕಾರಿಯು ಬಂದಿರುವುದಿಲ್ಲ, ಇದಕ್ಕೆ ಕಾರಣ ಏನು? ಇಲಾಖಾವಾರು ಅಧಿಕಾರಿಗಳು ಇಲ್ಲದಿದ್ದರೆ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಎಂದು ಪ್ರಶ್ನೆಗಳ ಸುರಿ ಮಳೆಯನ್ನು ಸುರಿಸಿದ್ದಾಗ, ಅನೇಕ ನೋವು ಉಂಡ
ಪಿ ಡಿ ಓ ಗ್ರಾಮ ಸಭೆಯನ್ನು ಸಭೆಯ ಒಪ್ಪಿಗೆಯ ಮೇರೆಗೆ ಮುಂದೂಡಲಾಯಿತು. ಆದರೂ ಪಟ್ಟು ಬಿಡದೆ ಗೈರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯ ಮಾಡಿದರು.

ಇದಕ್ಕೆ ಮಾಡಿದ ಪಿಡಿಓ ರವರು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ವಿಚಾರಿಸಿ, ಅವರ ಗಮನಕ್ಕೆ ತರುತ್ತೇನೆ ಎಂದರು. ಇದಕ್ಕೆ ಪ್ರತಿಯಾಗಿ ನೋಡಲ್ ಅಧಿಕಾರಿಯಲ್ಲದೆ ಗ್ರಾಮ ಸಭೆ ನಡೆಸುವುದು ಎಷ್ಟು ಸರಿ ಎಂದು ಮತ್ತೆ ಪ್ರಶ್ನಿಸಿದರು. ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳಿಂದ ಗ್ರಾಮ ಸಭೆಯನ್ನು ಮುಂದೂಡಲಾಯಿತು.

■ಒಂದು ಗ್ರಾಮ ಸಭೆ ಎಂದರೆ ಅಲ್ಲಿನ ನಾಗರಿಕರ ಒಂದು ಸಭೆಯಾಗಿರುತ್ತದೆ. ಈ ಸಭೆಯಲ್ಲಿ ಮುಂದಿನ ಯೋಜನೆಗಳನ್ನು , ಅನುದಾನವನ್ನು ಚರ್ಚೆಯ ಮಾಡುವ ಮೂಲಕ ಮುಂಜೂರು ಮಾಡಲಾಗುತ್ತದೆ. ಈ ಸಭೆಗೆ ಸಂಬಂಧಪಟ್ಟ ಇಲಾಖೆವಾರು ಅಧಿಕಾರಿಗಳು ಹಾಜುರಾಗಿರಬೇಕು. ಆ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುವ ಮೂಲಕ ಸಾರ್ವಜನಿಕರಿಗೆ ತಿಳಿ ಹೆಳಬೇಕು. ಒಂದು ವೇಳೆ ಇಲಾಖಾವರು ಅಧಿಕಾರಿಗಳು ಈ ಸಭೆಗೆ ಗೈರಾದರೆ, ಅಲ್ಲಿನ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಅಧಿಕಾರಿಗಳು ಯಾರು ಶಿವ? ಎಂದು ಅಂಬಳಿ ಸಾರ್ವಜನಿಕರಾದ ವಿ ಬಸವರಾಜ್ ಹೇಳಿದರು.

LEAVE A REPLY

Please enter your comment!
Please enter your name here