ಚಿಕ್ಕಮಗಳೂರಲ್ಲಿ ಲಾಯರ್ ಮೇಲೆ ಹಲ್ಲೆ ಸಂಡೂರುನಲ್ಲಿ ಪ್ರತಿಭಟನೆ

0
37

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಕೀಲ ಪ್ರೀತಮ್ ಮೇಲೆ ಪೊಲೀಸ್ ಇಲಾಖೆಯ ಸಿಬ್ಬಂದಿ ಅಮಾನವೀಯವಾಗಿ ಹಲ್ಲೆ ಮಾಡಿದ್ದು ಖಂಡನೀಯ ಎಂದು ಬಳ್ಳಾರಿ ಜಿಲ್ಲೆಯ ಸಂಡೂರು ವಕೀಲರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯ ಸಂಕೀರ್ಣದಿಂದ ಮುಖ್ಯರಸ್ತೆ, ಹಾಗೂ ವಿಜಯ ವೃತ್ತದಿಂದ ಮೆರವಣಿಗೆ ನಡೆಸಿ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಧಿಕ್ಕಾರ ಎಂದು ಕಿಡಿಕಾರಿದರು.

ನಂತರ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಮಾನ್ಯ ಘನ ಸರ್ಕಾರವನ್ನು ಒತ್ತಾಯಿಸಿ ತಹಶೀಲ್ದಾರ್ ಅನಿಲ್ ಕುಮಾರ್ ಅವರ ಮುಖಾಂತರ

ಮಾನ್ಯ ರಾಜ್ಯಪಾಲರು, ಕರ್ನಾಟಕ ರಾಜ್ಯ ಸರ್ಕಾರ, ಮಾನ್ಯ ಕಾನೂನು ಸಚಿವರು, ಕರ್ನಾಟಕ ರಾಜ್ಯ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ಸರ್ಕಾರ, ಮಾನ್ಯ ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರುಗಳಿಗೆ ಎಲ್ಲಾ ವಕೀಲರು ಮಾನ್ಯ ತಹಶೀಲ್ದಾರ ಮುಖಾಂತರ ಮನವಿಯನ್ನು ಸಲ್ಲಿಸಿದರು

ಮನವಿಪತ್ರದಲ್ಲಿ ಹೇಳಿದಂತೆ
ದಿನಾಂಕ: 01.12.2022 ರಂದು ಕರ್ನಾಟಕ ರಾಜ್ಯದಾಂತ್ಯ ವಕೀಲರು ಚಿಕ್ಕಮಂಗಳೂರಿನಲ್ಲಿ ವಕೀಲರಾದ ಪ್ರೀತಮ್ ಇವರ ಮೇಲೆ ಪೊಲೀಸರು ನಡೆಸಿದ ಅಮಾನವಿಯ ಕೃತ್ಯ ಮತ್ತು ದಿನಾಂಕ: 07.12.2023 ರಂದು ಗುಲ್ಬರ್ಗ ವಕೀಲರಾದ ಈರಣ್ಣ ಮಾಳಿ ಪಾಟೇಲ್‌ರ ಮೇಲೆ ಮಚ್ಚಿನಿಂದ ಕೊಚ್ಚಿ ನಂತರ ಕಲ್ಲುಗುಂಡಿನಿಂದ ಹತ್ಯೆ ಮಾಡಲಾದ ಪ್ರಕರಣಗಳು ವಕೀಲರ ಮೇಲೆ ಆಗುವ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು ವಕೀಲರು ತಾವು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಭಯದ ವಾತವರಣ ಸೃಷ್ಟಿಯಾಗಿದ್ದು ಸದರಿ ವಕೀಲರಿಗೆ ರಕ್ಷಣೆಗಾಗಿ ಎಲ್ಲಾ ವಕೀಲರ ಸಂಘದಿಂದ ಒತ್ತಾಯಿಸುವಂತೆ ನಮ್ಮ ಸಂಘದಿಂದ “ವಕೀಲರ ಹಿತ ರಕ್ಷಣ ಕಾಯಿದೆಯನ್ನು” ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವು ತಕ್ಷಣ ಜಾರಿಗೆ ತರುವಂತೆ ಮಾಡಬೇಕು

ವಕೀಲರುಗಳಿಗೆ ಜನ ಸಾಮನ್ಯರಿಂದ ಮತ್ತು ವಿವಿಧ ಇಲಾಖೆಗಳಿಂದ ವಕೀಲರ ಮೇಲೆ ಆಗುವ ದೌಜನ್ಯವನ್ನು ತಡೆಯುವ ಸಲುವಾಗಿ ವಕೀಲರ ಹಿತರಕ್ಷಣ ಕಾಯಿದೆಯನ್ನು ಜಾರಿಗೆ ತರಬೇಕೆಂದು ವಿನಂತಿಸಿಕೊಳ್ಳುತ್ತೇವೆ,

ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ವಕೀಲರ ಮೇಲೆ ಆಗುವ ಹಲ್ಲೆ ಮತ್ತು ಹತ್ಯೆ
ಹಾಗೂ ದೌರ್ಜನ್ಯಗಳಿಗೆ ಸರ್ಕಾರವೇ ನೇರ
ಹೊಣೆಯಾಗಿರುತ್ತದೆ ಎಂದು ಈ ಮೂಲಕ ತಿಳಿಸಿದರು

ಈ ಸಂಧರ್ಭದಲ್ಲಿ ಸಂಡೂರು ವಕೀಲರ ಸಂಘದ ಅಧ್ಯಕ್ಷ ಬಿ. ವಿಜಯಕುಮಾರ್, ಗುಡೇಕೋಟೆ ನಾಗರಾಜ್, ಹಾಗೂ ಮಾಸ್ತಿ ಸತ್ಯನಾರಾಯಣ ಮಾತನಾಡಿದರು ಸಂಡೂರು ವಕೀಲರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರುಗಳು ಇದ್ದರು

LEAVE A REPLY

Please enter your comment!
Please enter your name here