ವಿಶೇಷಚೇತನ ಮಕ್ಕಳೊಂದಿಗೆ ಶಿಕ್ಷಣ ಇಲಾಖೆ ಇದೆ- ಮೋಹನಕುಮಾರ ಹಂಚಾಟೆ

0
98

ಧಾರವಾಡ.ಜೂ. 30: ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಸಾಮರ್ಥ ವಿದ್ದು ಅದನ್ನು ಪ್ರಬುದ್ದ ಮಟ್ಟಕ್ಕೆ ಬೆಳೆಸಲು ಪಾಲಕರು ಪ್ರಯತ್ನಿಸುವದರೊಂದಿಗೆ ಜೀವನ ಕೌಸಲ್ಯಗಳನ್ನು ರೂಡಿಮಾಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆಯವರು ಹೇಳಿದರು.

ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಫೋರ್ಥ ವೇವ್ ಪೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಇಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಇಲ್ಲಿ ವಲಯದ ಶಾಲಾ ಸಿದ್ದತಾ ಕೇಂದ್ರದ 50 ವಿಶೇಷ ಚೇತನ ಮಕ್ಕಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ

ಮಾತನಾಡಿದ ಅವರು, ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಸಾಮರ್ಥವಿರುತ್ತದೆ ಅದನ್ನು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಯಾಗದಂತೆ ಎಚ್ಚರವಹಿಸಬೇಕು. ಆ ಮಕ್ಕಳು ಆರೋಗ್ಯವಾಗಿರಲು ಪಾಲಕರೆಲ್ಲ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ ಪೋರ್ಥ ವೇವ ನವರು ನಮ್ಮ ಜಿಲ್ಲೆಯ 200 ಮಕ್ಕಳಿಗೆ ಆಹಾರ ದಾನ್ಯದ ಕಿಟ್ ವಿತರಿಸಿದ್ದು ಅವರ ಶ್ಲಾಘನೀಯ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗೀರಿಶ ಪದಕಿಯವರು ಮಾತನಾಡಿ, ಈ ಕೋರೋನಾ ಸಂಕಷ್ಟದ ಅಲೆಗಳು ಎಷ್ಟೇ ಬರಲಿ ನಾವೆಲ್ಲ ಮಾನಸಿಕವಾಗಿ ಗಟ್ಟಿಯಾಗುವದರ ಜೊತೆಗೆ ಕೋರಣ ನಿಯಮ ಪಾಲಸಿ ಆರೋಗ್ಯವಾಗಿರುವುದು ಅಷ್ಟೇ ಮುಖ್ಯ ನಿಮ್ಮ ವಿಶೇಷ ಚೇತನ ಮಕ್ಕಳೊಂದಿಗೆ ಇಲಾಖೆ ಇದೆ. ಇಲಾಖೆಯಲ್ಲಿ ಯಾವುದೇ ಸೌಲಬ್ಯದಿಂದ ಮಗು ವಂಚಿತರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನಮ್ಮ ಶಹರ ವಲಯದಲ್ಲಿ ಅನುಷ್ಟಾನ ಗೊಳಿಸಲಾಗಿದೆ. ಇಲಾಖೆಯೊಂದಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಮ್ಯಾಗೇರಿ ಅವರಿಗೆ ಅಬಿನಂದನೆಗಳನ್ನು ತಿಳಿಸಿದರು. ಬಸವರಾ ಮ್ಯಾಗೇರಿ ಪ್ರಾಸ್ತಾವಿಕ ನೂಡಿಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಜೋಶಿ ಅಕಾಡೆಮಿಯ ಅದ್ಯಕ್ಷರು ವಿನಾಯಕ ಜೋಶಿ ಅವರು, ಮತ್ತು 50 ಜನ ವಿಶೇಷ ಚೇತನ ಮಕ್ಕಳ ಪಾಲಕರು ಪೋರ್ಥ ವೇವಿನ ಸ್ವಯಂ ಸೇವಕರಾದ ನಿರ್ಮಲಾ, ಹಾಜರಾ ಉಪಸ್ಥಿತಿರಿದ್ದರು.

ಬಿ.ಐ.ಈ.ಆರ್.ಟಿಯವರಾದ ಎಸ್. ಎಸ್. ಜೋಶಿ, ಪ್ರಾಥಿಸಿದರು .ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಎಮ್.ವ್ಹಿ. ಅಡವೇರ ಸ್ವಾಗತಿಸಿದರು. ಸುಮಿತಾ ಹಿರೇಮಠ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಿರಿಜಾ ಪಾಟೀಲ, ಎಮ್.ಪಿ. ದೊಡಮನಿ ವಂದಿಸಿದರು.

LEAVE A REPLY

Please enter your comment!
Please enter your name here